ನಮ್ಮ ಆ್ಯಪ್​ ನಿಷೇಧ ಮಾಡುವ ಮೂಲಕ ಭಾರತ WTO ನಿಯಮ ಉಲ್ಲಂಘನೆ ಮಾಡಿದೆ; ಚೀನಾ ಅಸಮಾಧಾನ

| Updated By: ರಾಜೇಶ್ ದುಗ್ಗುಮನೆ

Updated on: Jan 27, 2021 | 8:12 PM

ಭಾರತದಲ್ಲಿ ತುಂಬ ಬಳಕೆಯಾಗುತ್ತಿದ್ದ ಚೀನಾದ ಟಿಕ್​ಟಾಕ್​ ಸೇರಿ, ಹಲವು ಪ್ರಮುಖ ಆ್ಯಪ್​ಗಳನ್ನು ಭಾರತದಲ್ಲಿ ಬ್ಯಾನ್​ ಮಾಡಲಾಗಿದೆ. ಇದರಿಂದ ಚೀನಾಕ್ಕೆ ಹೊಡೆತ ಬಿದ್ದಿದ್ದಂತೂ ಸುಳ್ಳಲ್ಲ.

ನಮ್ಮ ಆ್ಯಪ್​ ನಿಷೇಧ ಮಾಡುವ ಮೂಲಕ ಭಾರತ WTO ನಿಯಮ ಉಲ್ಲಂಘನೆ ಮಾಡಿದೆ; ಚೀನಾ ಅಸಮಾಧಾನ
ಬ್ಯಾನ್ ಆದ ಚೀನಾದ ಟಿಕ್​ಟಾಕ್​ ಆ್ಯಪ್​
Follow us on

ನವದೆಹಲಿ: ಕಳೆದ ವರ್ಷ ಪೂರ್ವ ಲಡಾಖ್​ ಗಡಿಯಲ್ಲಿ ಚೀನಾ ಸೈನಿಕರ ಆಕ್ರಮಣದಿಂದ ಭಾರತೀಯ ಸೇನೆಯ ಸುಮಾರು 20 ಸೈನಿಕರು ಮೃತಪಟ್ಟ ಬೆನ್ನಲ್ಲೇ, ಕೇಂದ್ರ ಸರ್ಕಾರ ಚೀನಾದ 59 ಆ್ಯಪ್​ಗಳನ್ನು ನಿಷೇಧ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಚೀನಾ ಇದೀಗ ಮತ್ತೆ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ನಮ್ಮ 59 ಆ್ಯಪ್​ಗಳನ್ನು ನಿಷೇಧ ಮಾಡುವ ಮೂಲಕ ಭಾರತ ವಿಶ್ವ ವ್ಯಾಪಾರ ಸಂಸ್ಥೆ (World Trade Organization WTO)ಯ ವ್ಯವಹಾರದ ನಿಯಮಗಳನ್ನು ಉಲ್ಲಂಘಿಸಿದೆ. ಇದು ಚೈನೀಸ್​ ಕಂಪನಿಗಳಿಗೆ ನೋವುಂಟು ಮಾಡಿದೆ ಎಂದೂ ಚೀನಾ ಇಂದು ಹೇಳಿದೆ.

ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿದ್ದ ಚೀನಾದ ಟಿಕ್​ಟಾಕ್​ ಸೇರಿ, ಹಲವು ಪ್ರಮುಖ ಆ್ಯಪ್​ಗಳನ್ನು ಭಾರತದಲ್ಲಿ ಬ್ಯಾನ್​ ಮಾಡಲಾಗಿದೆ. ಇದರಿಂದ ಚೀನಾಕ್ಕೆ ಹೊಡೆತ ಬಿದ್ದಿದ್ದಂತೂ ಸುಳ್ಳಲ್ಲ. ಹಾಗಾಗಿ ಭಾರತ ಈ ನಿಷೇಧದ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು. ತನ್ನ ತಾರತಮ್ಯ ನೀತಿಯನ್ನು ಸರಿಪಡಿಸಿಕೊಂಡು, ದ್ವಿಪಕ್ಷೀಯ ಸಂಬಂಧಕ್ಕೆ ಮತ್ತಷ್ಟು ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರ ಜಿ.ರೊಂಗ್​ ತಿಳಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಹೆಚ್ಚುವರಿ ಪ್ರೇಕ್ಷಕರಿಗೆ ಅವಕಾಶ ನೀಡಲು ಕೇಂದ್ರದ ಸಮ್ಮತಿ