ಪರಸ್ತ್ರೀ ಜೊತೆ ಗಂಡನನ್ನು ಕಂಡು ಚಾಕುವಿನಿಂದ ಇರಿದ ಹೆಂಡತಿ; ಕ್ಲೈಮ್ಯಾಕ್ಸ್​ನಲ್ಲಿ ಸಿಕ್ತು ಬಿಗ್​ ಟ್ವಿಸ್ಟ್​

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 29, 2021 | 7:24 PM

ಆಕೆ ನೋಡಿದ ಫೋಟೊ, ಆಕೆ ಹಾಗೂ ಆಕೆಯ ಗಂಡ ಮದುವೆಗೂ ಮುನ್ನ ಪ್ರಣಯ ಪಕ್ಷಿಗಳಾಗಿ ಸುತ್ತುದಿದ್ದ ಸಮಯದಲ್ಲಿ ತೆಗೆದುಕೊಂಡಿದ್ದ ಫೋಟೊ ಎಂಬುದು ಆಕೆಗೆ ತಡವಾಗಿ ಅರಿವಿಗೆ ಬಂದಿದೆ.

ಪರಸ್ತ್ರೀ ಜೊತೆ ಗಂಡನನ್ನು ಕಂಡು ಚಾಕುವಿನಿಂದ ಇರಿದ ಹೆಂಡತಿ; ಕ್ಲೈಮ್ಯಾಕ್ಸ್​ನಲ್ಲಿ ಸಿಕ್ತು ಬಿಗ್​ ಟ್ವಿಸ್ಟ್​
Follow us on

ತನ್ನ ಗಂಡ ಬೇರೊಬ್ಬ ಮಹಿಳೆಯೊಂದಿಗಿರುವ ಫೋಟೋವನ್ನು ಆತನ ಮೊಬೈಲಿನಲ್ಲಿ ನೋಡಿದ ಮೆಕ್ಸಿಕನ್ ಮಹಿಳೆಯೊಬ್ಬಳು ಕೋಪಗೊಂಡು ತನ್ನ ಗಂಡನ ಕೈ ಕಾಲುಗಳ ಮೇಲೆ ಚಾಕುವಿನಿಂದ ಹಲವು ಬಾರಿ ಇರಿದಿರುವ ಘಟನೆ ನಡೆದಿದೆ.

ಸೋನೊರಾದ ಕ್ಯಾಜೆಮ್‌ನಲ್ಲಿರುವ ದಂಪತಿಗಳ ಮನೆಯಲ್ಲಿ ಈ ಘಟನೆ ನಡೆದಿದೆ. ದಂಪತಿಗಳು ಮನೆಯೊಳಗೆ ಕಿರುಚುವುದು ಮತ್ತು ಕೂಗುವುದು ಕೇಳಿದ ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಗೊಂಡ ಗಂಡನನ್ನು ಆಸ್ಪತ್ರೆಗೆ ಸೇರಿಸಿ, ಆ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ತಮಾಷೆಯ ವಿಚಾರವೆಂದರೆ. ಆಕೆ ನೋಡಿದ ಫೋಟೊ, ಆಕೆ ಹಾಗೂ ಆಕೆಯ ಗಂಡ ಮದುವೆಗೂ ಮುನ್ನ ಪ್ರಣಯ ಪಕ್ಷಿಗಳಾಗಿ ಸುತ್ತುತ್ತಿದ್ದ ಸಮಯದಲ್ಲಿ ತೆಗೆದುಕೊಂಡಿದ್ದ ಫೋಟೊ ಎಂಬುದು ಆಕೆಗೆ ತಡವಾಗಿ ಅರಿವಿಗೆ ಬಂದಿದೆ. ಪತ್ನಿಯಿಂದ ಹಲ್ಲೆಗೊಳಗಾದ ಪತಿ ಜುವಾನ್ ಎನ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ಲಿಯೊನೊರಾ ಎ ಎಂದು ತಿಳಿದುಬಂದಿದೆ.

ತನ್ನ ಗಂಡನ ಮೊಬೈಲ್​ನಲ್ಲಿ ಆಕೆ ನೋಡಿದ ಫೋಟೋಗಳ ಬಗ್ಗೆ ಅವನನ್ನು ಕೇಳದೆ, ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾಳೆ. ಅಂತಿಮವಾಗಿ ಅವಳ ಕೈಯಿಂದ ಚಾಕುವನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಆತ, ಪತ್ನಿಯನ್ನು ಯಾವ ಫೋಟೋಗಳ ಬಗ್ಗೆ ಮಾತನಾಡುತ್ತಿದ್ದಾಳೆ ಎಂಬುದರ ಬಗ್ಗೆ ಕೇಳಿದ್ದಾನೆ. ಆಗ ಆಕೆ ತೋರಿಸಿದ ಫೋಟೊ ನೋಡಿ ಆತನಿಗೆ ಶಾಕ್​ ಆಗಿದೆ.

ಕೂಡಲೇ ಆ ಫೋಟೋದಲ್ಲಿ ಇರುವುದು ಅವನ ಹೆಂಡತಿಯಲ್ಲದೆ ಬೇರೆ ಯಾರೂ ಅಲ್ಲ ಎಂಬುದನ್ನು ಆಕೆಗೆ ಮನವರಿಕೆ ಮಾಡಿದ್ದಾನೆ. ಈ ದಂಪತಿಗಳು ಪ್ರೇಮಿಸುತ್ತಿದ್ದಾಗ ಈ ಫೋಟೋಗಳನ್ನು ತೆಗೆದುಕೊಳ್ಳಲಾಗಿದ್ದು ಆ ಸಮಯದಲ್ಲಿ ಆಕೆ ತೀರ ಸಣ್ಣಗಿದ್ದಳು ಹಾಗೂ ಮೇಕಪ್​ ಮಾಡಿಕೊಂಡಿದ್ದರಿಂದ ಆಕೆ ತನ್ನನ್ನು ತಾನೇ ಪತ್ತೆ ಹಚ್ಚುವಲ್ಲಿ ವಿಫಲಳಾಗಿದ್ದಳು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

Budget 2021: ಬಜೆಟ್ ಮೊಬೈಲ್ ಆ್ಯಪ್​ನಲ್ಲಿ ಏನಿದೆ?

Published On - 7:20 pm, Fri, 29 January 21