ಇಸ್ರೇಲ್(Israel) ಮತ್ತು ಪ್ಯಾಲೆಸ್ತೀನ್(Palestine) ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ಸಂಘರ್ಷದಲ್ಲಿ ಸತ್ತವರ ಸಂಖ್ಯೆ 1000 ದಾಟಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಇದುವರೆಗೆ 1,100 ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಸೇನಾ ವಕ್ತಾರರು ವರದಿ ಮಾಡಿದ್ದಾರೆ. ಶನಿವಾರ, ಹಮಾಸ್ ಇಸ್ರೇಲಿನ ವಿವಿಧ ನಗರಗಳ ಮೇಲೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದೆ. ಇದಾದ ಕೇವಲ ಎರಡೇ ದಿನಗಳಲ್ಲಿ ಈ ಸಂಘರ್ಷ ಭುಗಿಲೆದ್ದಿದ್ದು, ಇದರಿಂದ ಸಾವಿರಾರು ನಾಗರಿಕರು ಪ್ರಾಣಕಳೆದುಕೊಂಡಿದ್ದಾರೆ.
ಇಸ್ರೇಲ್ ಭಾನುವಾರ ಗಾಜಾದಲ್ಲಿರುವ ಪ್ಯಾಲೆಸ್ತೀನ್ ತಾಣಗಳ ಮೇಲೆ ದಾಳಿ ನಡೆಸಿದೆ. ಪ್ಯಾಲೆಸ್ತೀನ್ನ ಭಯೋತ್ಪಾದಕ ಸಂಘಟನೆ ಹಮಾಸ್‌ನ ದಾಳಿಯಲ್ಲಿ 700 ಇಸ್ರೇಲಿ ಪ್ರಜೆಗಳು ಕೊಲ್ಲಲ್ಪಟ್ಟರು, ಅನೇಕ ನಾಗರಿಕರನ್ನು ಅಪಹರಿಸಲಾಗಿದೆ. ಹಮಾಸ್ 100 ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿದೆ. ಇದು ಇಸ್ರೇಲ್ ಇತಿಹಾಸದಲ್ಲಿ ಅತ್ಯಂತ ರಕ್ತಸಿಕ್ತ ದಾಳಿ ಎಂದು ಪರಿಗಣಿಸಲಾಗಿದೆ. 300 ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಪ್ರಜೆಗಳು ಕೂಡ ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ.
#WATCH | Visuals from Gaza after Israeli forces carried out various airstrikes on the Gaza Strip overnight and during the morning hours of Sunday (October 8), destroying various buildings.
(Source: Reuters) pic.twitter.com/SKZepMizQs
— ANI (@ANI) October 8, 2023
ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ, ಇಸ್ರೇಲ್ನ ಸೇನೆಯು ಗಾಜಾದಲ್ಲಿ ಹಮಾಸ್ ನೆಲೆಗಳನ್ನು ಗುರಿಯಾಗಿರಿಸಿಕೊಂಡಿದೆ. ಇಸ್ರೇಲ್ ಸೇನೆಯು ಹಮಾಸ್‌ಗೆ ದಿಟ್ಟ ಪ್ರತ್ಯುತ್ತರ ನೀಡಿದ್ದು, ಗಾಜಾ ಪಟ್ಟಿಗೆ ರಾಕೆಟ್‌ಗಳನ್ನು ಹಾರಿಸುತ್ತಿದೆ. ಹಮಾಸ್ ದಾಳಿಯಲ್ಲಿ ಇದುವರೆಗೆ 2,000ಕ್ಕೂ ಹೆಚ್ಚು ಇಸ್ರೇಲಿ ನಾಗರಿಕರು ಗಾಯಗೊಂಡಿದ್ದಾರೆ.
ಮತ್ತಷ್ಟು ಓದಿ: ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಸೈನಿಕರಿಗೆ ಸಹಾಯ ಮಾಡಲು ಯುದ್ಧ ನೌಕೆ ಕಳುಹಿಸಿದ ಅಮೆರಿಕ
ಇದಲ್ಲದೇ 100 ಮಂದಿಯನ್ನು ಕಿಡ್ನಾಪ್ ಮಾಡಲಾಗಿದೆ. ಮತ್ತೊಂದೆಡೆ, ಇಸ್ರೇಲ್ ಸೇನೆಯ ದಾಳಿಯಲ್ಲಿ ಪ್ಯಾಲೆಸ್ತೀನ್‌ನಲ್ಲಿ 370 ಜನರು ಸಾವನ್ನಪ್ಪಿದ್ದಾರೆ ಮತ್ತು 2200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಕ್ಷಿಣ ಇಸ್ರೇಲಿ ನಗರದ ಸ್ಡೆರೋಟ್‌ನಲ್ಲಿ ಭಾನುವಾರ 100 ರಾಕೆಟ್‌ಗಳನ್ನು ಹಾರಿಸಿರುವುದಾಗಿ ಹಮಾಸ್ ಹೇಳಿಕೊಂಡಿದೆ. ರಾಕೆಟ್ ದಾಳಿಯಿಂದ ಕೆಲವರು ಗಾಯಗೊಂಡಿದ್ದಾರೆ. ಇಸ್ರೇಲ್ ಸೇನೆ ಕೂಡ ಈ ವರದಿಯನ್ನು ದೃಢಪಡಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ