ಟೋಕಿಯೋ: ಜಪಾನ್ನ ಈಶಾನ್ಯ ಕರಾವಳಿಯಲ್ಲಿ ಶನಿವಾರ ಪ್ರಬಲ ಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ 7 ರಷ್ಟು ತೀವ್ರತೆ ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ. ಜಪಾನ್ನ ಈಶಾನ್ಯ ಕಡಲತೀರದಲ್ಲಿ ಸಂಭವಿಸಿರುವ ಈ ಭೂಕಂಪದಿಂದ ಜಪಾನ್ಗೆ ಸುನಾಮಿ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.
ಮಿಯಾಮಿ ಪ್ರದೇಶದ ಸಾಗರದ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪನದಿಂದ ಯಾವುದೇ ಸಾವು ನೋವು ಅಥವಾ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸುನಾಮಿ ಏಳುವ ಮುನ್ಸೂಚನೆ ಇದೆ ಎಂದು ವರದಿಯಾಗಿದೆ. ಹೀಗಾಗಿ ಜಪಾನ್ನಾದ್ಯಂತ ಭಾರಿ ಮುಂಜಾಗರೂಕತೆ ವಹಿಸಲಾಗಿದೆ.
ರಿಕ್ಟರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲಾಗಿರುವುದರಿಂದ ರೈಲ್ವೆ ಇಲಾಖೆಯು ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಅಲ್ಲದೇ ಈಶಾನ್ಯ ಜಪಾನ್ನ ಅಣು ಸ್ಥಾವರಗಳ ಸುರಕ್ಷತೆಯ ಪ್ರಶ್ನೆಯೂ ಈ ಭೂಕಂಪದಿಂದ ಉಂಟಾಗಿದ್ದು, ಈ ಕುರಿತು ತಜ್ಞ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 2011ರಲ್ಲಿ ಸುನಾಮಿ ಹೊಡೆತದಿಂದ ಪುಕುಶಿಮಾ ಅಣು ಸ್ಥಾವರಕ್ಕೆ ಧಕ್ಕೆ ಬಂದಿತ್ತು ಎಂದು ಸ್ಮರಿಸಬಹುದು.
ಇದನ್ನೂ ಓದಿ: ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಜಪಾನ್ ಸರ್ಕಾರ ನೀಡೋ ಶಿಕ್ಷೆ ಏನು ಗೊತ್ತಾ?
Japan Earthquake: ಜಪಾನ್ನಲ್ಲಿ 7.1 ತೀವ್ರತೆಯ ಭೂಕಂಪ: ಸುನಾಮಿ ಮುನ್ಸೂಚನೆ ಇಲ್ಲ ಎಂದ ಅಧಿಕಾರಿಗಳು
Published On - 6:34 pm, Sat, 20 March 21