AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಜಪಾನ್​ ಸರ್ಕಾರ ನೀಡೋ ಶಿಕ್ಷೆ ಏನು ಗೊತ್ತಾ?

ಬಸ್​ ತಪ್ಪಿ ಹೋಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರಿ ನೌಕರರು ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಡುತ್ತಿದ್ದರು.

ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಜಪಾನ್​ ಸರ್ಕಾರ ನೀಡೋ ಶಿಕ್ಷೆ ಏನು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on: Mar 17, 2021 | 6:07 PM

ಭಾರತದ ಸರ್ಕಾರಿ ಕಚೇರಿಗಳಲ್ಲಿ ನೌಕರರು ಹಾಯಾಗಿರುತ್ತಾರೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಕಚೇರಿಯಿಂದ ತಡವಾಗಿ ಹೊರಡುವ ಉದಾಹರಣೆ ತುಂಬಾನೇ ಕಡಿಮೆ. ಶಿಫ್ಟ್​ 6 ಗಂಟೆಗೆ ಪೂರ್ಣಗೊಳ್ಳುತ್ತದೆ ಎಂದರೆ ಅನೇಕರು 5:45ಕ್ಕೆ ಕಚೇರಿಯಿಂದ ಹೊರಟಿರುತ್ತಾರೆ. ಆದರೆ, ಬೇರೆ ದೇಶದಲ್ಲಿ ಈ ರೀತಿ ಇಲ್ಲ. ಜಪಾನ್​ನಲ್ಲಿ ಎರಡೇ ನಿಮಿಷ ಮೊದಲು ಕಚೇರಿಯಿಂದ ಹೊರಟರೂ ಸಿಬ್ಬಂದಿಗೆ ಶಿಕ್ಷೆ ಇದೆ ಎಂದರೆ ನೀವು ನಂಬಲೇ ಬೇಕು! ಹೌದು, ಜಪಾನ್​ನಲ್ಲಿ ಇತ್ತೀಚೆಗೆ ಹೀಗೊಂದು ವಿಚಾರ ಬೆಳಕಿಗೆ ಬಂದಿದೆ. ಶಿಕ್ಷೆ ರೂಪದಲ್ಲಿ ಇವರ ಅರ್ಧ ದಿನದ ಸ್ಯಾಲರಿ ಕಟ್​ ಮಾಡಲಾಗಿದೆ. 2019 ಮೇ ಇಂದ ಜನವರಿ 2021ರವರೆಗೆ ಏಳು ಸಿಬ್ಬಂದಿ 316 ಬಾರಿ 5.15ಕ್ಕೆ ತೆರಳುವ ಬದಲು 5.13ಕ್ಕೆ ತೆರಳಿದ್ದಾರೆ. ಅಂದರೆ, ಎರಡು ನಿಮಿಷ ಕಚೇರಿಯಿಂದ ಮೊದಲು ಹೊರಟಂತಾಗಿದೆ. ಇದನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದೆ. ಅಷ್ಟೇ ಅಲ್ಲ ಸ್ಯಾಲರಿ ಕೂಡ ಕಟ್​ ಮಾಡಿದೆ.

ನಮಗೆ ಸಂಜೆ 5.17ಕ್ಕೆ ಬಸ್​ ಇದೆ. ಈ ಬಸ್​ ತಪ್ಪಿದ ನಂತರ ಮತ್ತೊಂದು ಬಸ್​ ಇರೋದು 5.47ಕ್ಕೆ. ಈ ಕಾರಣಕ್ಕೆ ನಾವು ಎರಡು ನಿಮಿಷ ಮೊದಲು ತೆರಳುತ್ತಿದ್ದೆವು. ಆದರೆ, ಸರ್ಕಾರ ಇದನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂದು ತಿಳಿದಿರಿಲಿಲ್ಲ ಎಂದಿದ್ದಾರೆ ಸರ್ಕಾರಿ ನೌಕರರು.

ಇನ್ನು, ಸರ್ಕಾರಿ ನೌಕರರು ಇದಕ್ಕೆ ಪೂರ್ಣ ಪ್ರಮಾಣದ ಸ್ಯಾಲರಿಯನ್ನು ಹಾಕುವಂತೆ ಮನವಿ ಮಾಡಿದ್ದಾರೆ. ಆದರೆ, ಇದನ್ನು ಸರ್ಕಾರ ನಿರಾಕರಿಸಿದೆ. ಸರಿಯಾದ ಸಮಯಕ್ಕೆ ಬಂದು ಸರಿಯಾದ ಸಮಯಕ್ಕೆ ತೆರಳಿದರೆ ಮಾತ್ರ ಸ್ಯಾಲರಿ ನೀಡುತ್ತೇವೆ ಎಂದು ಹೇಳಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ವೇತನ ಪಡೆಯುವ ವರ್ಗಕ್ಕೆ ಹೊರೆಯಾದ ವೇಜ್​ ಕೋಡ್​-ಬಜೆಟ್​; ಭವಿಷ್ಯ ನಿಧಿಯೇ ತೊಡಕಾಗ್ತಿದೆ..ಟೇಕ್​ ಹೋಂ ಸ್ಯಾಲರಿ ಕಡಿಮೆ ಆಗ್ತಿದೆ !

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು