ಅಮೆರಿಕದ ಮೂರು ಪ್ರತೇಕ ಸ್ಪಾಗಳ ಮೇಲೆ ಅಪರಿಚಿತರಿಂದ ಫೈರಿಂಗ್.. 8 ಮಂದಿ ಸಾವು
ಗೋಲ್ಡ್ ಸ್ಪಾದಲ್ಲಿ ಮೂರು ಜನರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಪೀಡ್‌ಮಾಂಟ್ ರಸ್ತೆಯ 19 ಬ್ಲಾಕ್‌ನಲ್ಲಿರುವ ಅರೋಮಾಥೆರಪಿ ಸ್ಪಾದ ನಡು ಬೀದಿಯಲ್ಲಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಅಮೆರಿಕದ ಜಾರ್ಜಿಯಾದಲ್ಲಿ ಅಪರಿಚಿತರಿಂದ ಮೂರು ಪ್ರತೇಕ ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿದ್ದು 8 ಜನರು ಮೃತಪಟ್ಟಿದ್ದಾರೆ. ಈಶಾನ್ಯ ಅಟ್ಲಾಂಟಾದ ಎರಡು ಸ್ಪಾಗಳ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದಾರೆ ಮತ್ತು ಚೆರೋಕೀ ಕೌಂಟಿ ಸ್ಪಾದಲ್ಲಿ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಚೆರೋಕೀ ಕೌಂಟಿ ಮಸಾಜ್ ಪಾರ್ಲರ್ನಲ್ಲಿ ಗುಂಡಿನ ದಾಳಿ ಮಾಡುತ್ತಿದ್ದ ಶಂಕಿತ ಬಂದೂಕುಧಾರಿ ವುಡ್‌ಸ್ಟಾಕ್‌ನ ರಾಬರ್ಟ್ ಆರನ್ ಲಾಂಗ್ (21) ಎಂಬ ಯುವಕ ಸಿಕ್ಕಿಬಿದ್ದಿದ್ದಾನೆ.
#BREAKING 8 dead in massage parlor shootings. Cherokee County Sheriff’s Office tells me Robert Long is the same suspected gunman in the Atlanta massage parlor shootings. 4 dead, 1 injured in Cherokee massage parlor shooting. 4 dead in Atlanta. Victim’s include Asian women. @wsbtv pic.twitter.com/afgDjjmxqP
— Chris Jose (@ChrisJoseWSB) March 17, 2021
ಸುದ್ದಿಗೋಷ್ಠಿಯಲ್ಲಿ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ರೊಡ್ನಿ ಬ್ರ್ಯಾಂಟ್, ಈಶಾನ್ಯ ಅಟ್ಲಾಂಟಾ ಸ್ಪಾಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮಹಿಳೆಯರು ಮತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಗೋಲ್ಡ್ ಮಸಾಜ್ ಸ್ಪಾದಲ್ಲಿ ದರೋಡೆ ನಡೆಯುತ್ತಿದೆ ಎಂದು ನಮಗೆ ಕರೆ ಬಂದಿತ್ತು ಎಂದು ಬ್ರ್ಯಾಂಟ್ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡುತ್ತಿದ್ದ ವೇಳೆ ದಾರಿ ಮಧ್ಯೆ ಮತ್ತೊಂದು ಕರೆ ಬಂತು. ದಾರಿ ಮಧ್ಯೆ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಕರೆಯಲ್ಲಿ ಹೇಳಿದ್ರು. ಆಗ ಸ್ಥಳಕ್ಕೆ ಭೇಟಿ ನೀಡಿದಾಗ ವ್ಯಕ್ತಿ ಮೃತಪಟ್ಟಿದ್ದ.
ಗೋಲ್ಡ್ ಸ್ಪಾದಲ್ಲಿ ಮೂರು ಜನರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಪೀಡ್‌ಮಾಂಟ್ ರಸ್ತೆಯ 19 ಬ್ಲಾಕ್‌ನಲ್ಲಿರುವ ಅರೋಮಾಥೆರಪಿ ಸ್ಪಾದ ನಡು ಬೀದಿಯಲ್ಲಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
#BREAKING Shooting inside a Woodstock massage parlor on Hwy 92 near Bells Ferry Road. 2 dead, 3 injured, per Cherokee County Sheriff’s Office. Suspect on the run. Call 911 immediately. @wsbtv pic.twitter.com/rkq3dAhlI6
— Chris Jose (@ChrisJoseWSB) March 16, 2021
ಇದನ್ನೂ ಓದಿ: ಅಮೆರಿಕದ ನ್ಯೂಜೆರ್ಸಿಯಲ್ಲಿ ದುಷ್ಕರ್ಮಿಗಳಿಂದ ಫೈರಿಂಗ್, 6 ಜನ ಸಾವು
Published On - 8:26 am, Wed, 17 March 21