ವೇತನ ಪಡೆಯುವ ವರ್ಗಕ್ಕೆ ಹೊರೆಯಾದ ವೇಜ್​ ಕೋಡ್​-ಬಜೆಟ್​; ಭವಿಷ್ಯ ನಿಧಿಯೇ ತೊಡಕಾಗ್ತಿದೆ..ಟೇಕ್​ ಹೋಂ ಸ್ಯಾಲರಿ ಕಡಿಮೆ ಆಗ್ತಿದೆ !

2019ರಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ವೇಜ್​ ಕೋಡ್​ ನಿಯಮದಂತೆ ಉದ್ಯೋಗಿಯ ಸಂಬಳದಲ್ಲಿ ಭವಿಷ್ಯ ನಿಧಿಗೆ ಸೇರುವ ಪಾಲು ಹೆಚ್ಚಲಿದೆ.  ಹೀಗಾಗಿ ಸಹಜವಾಗಿ ಕೈಗೆ ಕಡಿಮೆ ಹಣ ಸೇರಲಿದೆ. ಈ ಹೊಸ ನಿಯಮ ಏಪ್ರಿಲ್​ 1ರಿಂದಲೇ ಜಾರಿಯಾಗಲಿದೆ.

ವೇತನ ಪಡೆಯುವ ವರ್ಗಕ್ಕೆ ಹೊರೆಯಾದ ವೇಜ್​ ಕೋಡ್​-ಬಜೆಟ್​; ಭವಿಷ್ಯ ನಿಧಿಯೇ ತೊಡಕಾಗ್ತಿದೆ..ಟೇಕ್​ ಹೋಂ ಸ್ಯಾಲರಿ ಕಡಿಮೆ ಆಗ್ತಿದೆ !
ಪ್ರಾತಿನಿಧಿಕ ಚಿತ್ರ
Follow us
|

Updated on:Feb 02, 2021 | 7:02 PM

ಸಂಬಳ ಪಡೆಯುವ ವರ್ಗಕ್ಕೆ ಇದೊಂದು ಅಶುಭ ಸುದ್ದಿ. ಬರುವ ಏಪ್ರಿಲ್​ನಿಂದ ಅನ್ವಯ ಆಗುವ ಹೊಸದಾಗ ವೇಜ್ ಕೋಡ್​(ವೇತನ ಸಂಹಿತೆ) ಮತ್ತು ನಿನ್ನೆಯ ಬಜೆಟ್​​ನಲ್ಲಿ ಹೇಳಲಾದ ಕೆಲವು ಹೊಸ ನಿಯಮಗಳಿಂದಾಗಿ ಇನ್ನು ಮುಂದೆ ಟೇಕ್​ ಹೋಂ ಸ್ಯಾಲರಿ (ಕೈಯಿಗೆ ಸಿಗುವ ಸಂಬಳ)ಗೆ ಕಡಿತ ಬೀಳಲಿದೆ. ಅಷ್ಟೇ ಅಲ್ಲ, ನಿವೃತ್ತಿ ನಂತರ ನಿಮ್ಮ ಕೈ ಸೇರುವ ನಿಮ್ಮದೇ ಉಳಿತಾಯಕ್ಕೂ ಸ್ವಲ್ಪ ಮಟ್ಟಿಗೆ ಕತ್ತರಿ ಬೀಳಲಿದೆ.

ಮಧ್ಯಮವರ್ಗದವರ ಪಾಲಿಗೆ ನಿವೃತ್ತಿ ನಂತರದ ಬಹುಮುಖ್ಯ ಸೇವಿಂಗ್ಸ್​ ಎಂದರೆ ಭವಿಷ್ಯ ನಿಧಿ (ಪಿಎಫ್​). ಸಂಬಳ ಪಡೆಯುವಾಗ ಪ್ರತಿ ತಿಂಗಳೂ ಇಂತಿಷ್ಟು ಎಂದು ಪಿಎಫ್​ಗಾಗಿ ಕಟ್ ಆಗುವುದು ಸಾಮಾನ್ಯ. ಆದರೆ ನಿನ್ನೆಯ ಬಜೆಟ್​ನಲ್ಲಿ PF ಗೆ ಸಂಬಂಧಪಟ್ಟ ಒಂದು ಬಹುಮುಖ್ಯ ಬದಲಾವಣೆಯನ್ನು ಮಾಡಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿ ಯಾರು ಭವಿಷ್ಯ ನಿಧಿಗೆ 2.50 ಲಕ್ಷ ರೂ.ಮತ್ತು ಅದಕ್ಕಿಂತಲೂ ಜಾಸ್ತಿ ಹಣ ಪಾವತಿಸುತ್ತಾರೋ.. ಅವರು ತೆರಿಗೆ ಕಟ್ಟಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನಿನ್ನೆ ತಿಳಿಸಿದ್ದಾರೆ. ಅದರಂತೆ ಇದು ಸಂಬಳ ಪಡೆಯುವ ವರ್ಗಕ್ಕೆ ಶಾಕ್ ನೀಡಿದೆ.

ಇನ್ನು 2019ರಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ವೇಜ್​ ಕೋಡ್​ ನಿಯಮದಂತೆ ಉದ್ಯೋಗಿಯ ಸಂಬಳದಲ್ಲಿ ಭವಿಷ್ಯ ನಿಧಿಗೆ ಸೇರುವ ಪಾಲು ಹೆಚ್ಚಲಿದೆ.  ಹೀಗಾಗಿ ಸಹಜವಾಗಿ ಕೈಗೆ ಕಡಿಮೆ ಹಣ ಸೇರಲಿದೆ. ಈ ಹೊಸ ನಿಯಮ ಏಪ್ರಿಲ್​ 1ರಿಂದಲೇ ಜಾರಿಯಾಗಲಿದೆ.

ಇನ್ನೂ ಸರಳವಾಗಿ ಹೇಳಬೇಕು ಎಂದರೆ ಉದ್ಯೋಗಿಯೊಬ್ಬನ ತಿಂಗಳ ವೇತನ 1 ಲಕ್ಷ ರೂ. ಆದರೆ ಆತ ತಿಂಗಳಿಗೆ 20,000ರೂ.ಪಿಎಫ್​ಗೆ ಪಾವತಿಸಬೇಕಾಗುತ್ತಿತ್ತು ಎಂದಿಟ್ಟುಕೊಳ್ಳೋಣ. ಆದರೆ ಬರುವ ಎಪ್ರಿಲ್​ 1ರಿಂದ ಹೊಸ ವೇಜ್​ ಕೋಡ್ ನಿಯಮದ ಅನ್ವಯ ಆತ ತಿಂಗಳಿಗೆ ಪಿಎಫ್​ಗೆ 25,000 ರೂ. ಪಾವತಿ ಮಾಡಬೇಕಾಗುತ್ತದೆ. ಆಗ ಸಹಜವಾಗಿಯೇ ಅವನ ಟೇಕ್​ ಹೋಂ ಸ್ಯಾಲರಿ 5000 ರೂ.ದಷ್ಟು ಕಡಿಮೆಯಾಗುತ್ತದೆ. ಹೀಗೆ ಪಿಎಫ್​​ಗೆ ತಿಂಗಳಿಗೆ ಪಾವತಿಸುವ ಹಣ ಜಾಸ್ತಿಯಾದಂತೆ, ವಾರ್ಷಿಕ ಪಾವತಿಯೂ ಹೆಚ್ಚುತ್ತದೆ. ಈಗ ಇದೇ ವ್ಯಕ್ತಿ ವರ್ಷಕ್ಕೆ ಭವಿಷ್ಯ ನಿಧಿಗೆ 3 ಲಕ್ಷ ರೂ.ಪಾವತಿ ಮಾಡಬೇಕಾಗುತ್ತದೆ. ಬಜೆಟ್​​ನಲ್ಲಿ ಉಲ್ಲೇಖವಾದಂತೆ 2.50 ಲಕ್ಷಕ್ಕೂ ಹೆಚ್ಚು ಪಿಎಫ್​ ಪಾವತಿ ಮಾಡುವ ಕಾರಣ ತೆರಿಗೆ ಕಟ್ಟಲೇಬೇಕು.

ಮುಂದಿನ ವರ್ಷದಿಂದ Take Home Salaryಗೆ ಬೀಳಲಿದೆ ಕತ್ತರಿ! ಹೊಸ ನಿಯಮ ಜಾರಿಗೆ ಕೇಂದ್ರದ ಚಿಂತನೆ

Published On - 6:52 pm, Tue, 2 February 21