ಡಿಸೆಂಬರ್ 1ರಿಂದ ಭಾರತೀಯರು ವೀಸಾವಿಲ್ಲದೆ ಮಲೇಷ್ಯಾಗೆ ಪ್ರಯಾಣಿಸಬಹುದು

|

Updated on: Nov 27, 2023 | 8:50 AM

Visa-Free Entry: ಮಲೇಷ್ಯಾವು ಡಿಸೆಂಬರ್ 1 ರಿಂದ 30ದಿನಗಳವರೆಗೆ ಚೀನಾ ಹಾಗೂ ಭಾರತದ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದೆ. ಪ್ರಧಾನಿ ಅನ್ವರ್ ಇಬ್ರಾಹಿಂ ಈ ಆದೇಶ ಹೊರಡಿಸಿದ್ದಾರೆ. ವೀಸಾ ವಿನಾಯಿತು ಯಾವ ದಿನಾಂಕದವರೆಗೆ ಅನ್ವಯಿಸುತ್ತದೆ ಎಂಬುದನ್ನು ತಿಳಿಸಿಲ್ಲ.

ಡಿಸೆಂಬರ್ 1ರಿಂದ ಭಾರತೀಯರು ವೀಸಾವಿಲ್ಲದೆ ಮಲೇಷ್ಯಾಗೆ ಪ್ರಯಾಣಿಸಬಹುದು
ಏರ್​ಪೋರ್ಟ್​
Follow us on

ಕೌಲಾಲಂಪುರ್, ನವೆಂಬರ್ 27: ಮಲೇಷ್ಯಾವು ಡಿಸೆಂಬರ್ 1 ರಿಂದ 30ದಿನಗಳವರೆಗೆ ಚೀನಾ ಹಾಗೂ ಭಾರತದ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದೆ. ಪ್ರಧಾನಿ ಅನ್ವರ್ ಇಬ್ರಾಹಿಂ ಈ ಆದೇಶ ಹೊರಡಿಸಿದ್ದಾರೆ. ವೀಸಾ ವಿನಾಯಿತು ಯಾವ ದಿನಾಂಕದವರೆಗೆ ಅನ್ವಯಿಸುತ್ತದೆ ಎಂಬುದನ್ನು ತಿಳಿಸಿಲ್ಲ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಮಲೇಷ್ಯಾ ಈ ವರ್ಷದ ಜನವರಿ ಮತ್ತು ಜೂನ್ ನಡುವೆ 9.16 ಮಿಲಿಯನ್ ಪ್ರವಾಸಿಗರನ್ನು ಕಂಡಿದೆ. ಚೀನಾದಿಂದ 498,540 ಮತ್ತು ಭಾರತದಿಂದ 283,885 ಪ್ರವಾಸಿಗರು ಆಗಮಿಸಿದ್ದಾರೆ. ಇದು 2019 ರ ಇದೇ ಅವಧಿಯಲ್ಲಿ, ಸಾಂಕ್ರಾಮಿಕ ರೋಗಕ್ಕೆ ಮೊದಲು ಚೀನಾದಿಂದ 1.5 ಮಿಲಿಯನ್ ಮತ್ತು ಭಾರತದಿಂದ 354,486 ಆಗಮಿಸಿದ್ದರು. ಪ್ರಸ್ತುತ, ಚೀನಾ ಮತ್ತು ಭಾರತೀಯ ಪ್ರಜೆಗಳು ಮಲೇಷ್ಯಾ ಪ್ರವೇಶಿಸಲು ವೀಸಾಗಳಿಗೆ ಅರ್ಜಿ ಸಲ್ಲಿಸಬೇಕು.

ಭಾರತೀಯರು ಈಗಾಗಲೇ ಥೈಲ್ಯಾಂಡ್ ಮತ್ತು ಶ್ರೀಲಂಕಾದಲ್ಲಿ ವೀಸಾ ಮುಕ್ತ ಪ್ರವೇಶವನ್ನು ಪಡೆಯುತ್ತಿದ್ದಾರೆ. ಮಲೇಷ್ಯಾ ಕುವೈತ್, ಸೌದಿ ಅರೇಬಿಯಾ, ಬಹ್ರೇನ್, ಯುಎಇ, ಟರ್ಕಿ, ಜೋರ್ಡಾನ್ ಮತ್ತು ಇರಾನ್‌ಗಳಿಗೆ ಈ ವಿನಾಯಿತಿಯನ್ನು ನೀಡಿತ್ತು. ಆದರೆ, ಇವೆಲ್ಲ ಮುಸ್ಲಿಂ ರಾಷ್ಟ್ರಗಳಾಗಿದ್ದವು.

ಮತ್ತಷ್ಟು ಓದಿ: ಭಾರತ ಸೇರಿ 7 ದೇಶಗಳ ಪ್ರಯಾಣಿಕರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ

ಮಲೇಷ್ಯಾಕ್ಕೆ ಹೋಗುವ ಅತಿ ಹೆಚ್ಚು ಪ್ರವಾಸಿಗರಲ್ಲಿ ಚೀನಾದ ಜನರು ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಭಾರತವು ಐದನೇ ಸ್ಥಾನದಲ್ಲಿದೆ.
ಸಾಂಕ್ರಾಮಿಕ ರೋಗದ ಮೊದಲು, 2019 ರ ಇದೇ ಅವಧಿಯಲ್ಲಿ ಚೀನಾದಿಂದ 15 ಲಕ್ಷ ಜನರು ಮತ್ತು ಭಾರತದಿಂದ 3 ಲಕ್ಷ 54 ಸಾವಿರ 486 ಜನರು ಮಲೇಷ್ಯಾಕ್ಕೆ ಹೋಗಿದ್ದರು. ಮಲೇಷ್ಯಾದ ಈ ಕ್ರಮವನ್ನು ತಮ್ಮ ಪ್ರಮುಖ ಪ್ರವಾಸೋದ್ಯಮ ಕ್ಷೇತ್ರವನ್ನು ಹೆಚ್ಚಿಸಲು ಮತ್ತು ಅವರ ಜಡ ಆರ್ಥಿಕತೆಯನ್ನು ಉತ್ತೇಜಿಸಲು ಜಾರಿಗೆ ತರಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ