ವೃದ್ಧನ ಮೃತದೇಹವನ್ನು ಫ್ರೀಜರ್​ನಲ್ಲಿರಿಸಿ, ಪಿಂಚಣಿ ಹಣದಲ್ಲಿ ಶಾಪಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದ ವ್ಯಕ್ತಿ ಕೊನೆಗೂ ತಪ್ಪೊಪ್ಪಿಕೊಂಡ್ರು

|

Updated on: May 04, 2023 | 8:56 AM

ವೃದ್ಧರೊಬ್ಬರ ಮೃತದೇಹವನ್ನು ಎರಡು ವರ್ಷಗಳ ಕಾಲ ಫ್ರೀಜರ್​ನಲ್ಲಿ ಇರಿಸಿದ್ದಾಗಿ ವ್ಯಕ್ತಿಯೊಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಜಾನ್​ ವೈನ್​ರೈಟ್​(71) 2018ರ ಸೆಪ್ಟೆಂಬರ್​ನಲ್ಲಿ ನಿಧನರಾಗಿದ್ದರು.

ವೃದ್ಧನ ಮೃತದೇಹವನ್ನು ಫ್ರೀಜರ್​ನಲ್ಲಿರಿಸಿ, ಪಿಂಚಣಿ ಹಣದಲ್ಲಿ ಶಾಪಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದ ವ್ಯಕ್ತಿ ಕೊನೆಗೂ ತಪ್ಪೊಪ್ಪಿಕೊಂಡ್ರು
ಮೃತದೇಹ
Follow us on

ವೃದ್ಧರೊಬ್ಬರ ಮೃತದೇಹವನ್ನು ಎರಡು ವರ್ಷಗಳ ಕಾಲ ಫ್ರೀಜರ್​ನಲ್ಲಿ ಇರಿಸಿದ್ದಾಗಿ ವ್ಯಕ್ತಿಯೊಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಜಾನ್​ ವೈನ್​ರೈಟ್​(71) 2018ರ ಸೆಪ್ಟೆಂಬರ್​ನಲ್ಲಿ ನಿಧನರಾಗಿದ್ದರು. ಯುಕೆಯಲ್ಲಿ ಈ ಘಟನೆ ನಡೆದಿದೆ, ಅವರ ದೇಹವನ್ನು 2020ರ ಆಗಸ್ಟ್ 22ರವರೆಗೆ ವ್ಯಕ್ತಿಯೊಬ್ಬ ಫ್ರೀಜರ್​ನಲ್ಲಿ ಇರಿಸಲಾಗಿತ್ತು. ಡೇಮಿಯನ್ ಜಾನ್ಸನ್, 52 ಈ ಆರೋಪವನ್ನು ಈಗ ಒಪ್ಪಿಕೊಂಡಿದ್ದಾರೆ, ವೃದ್ಧರ ಮೃತದೇಹವನ್ನು ಫ್ರೀಜರ್​ನಲ್ಲಿರಿಸಿ ಅವರ ಹಣವನ್ನು ನಾನು ಉಪಯೋಗಿಸುತ್ತಿದ್ದೆ, ಶಾಪಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ವೈನ್​ರೈಟ್ ಅವರ ಸಾವಿಗೆ ಏನು ಕಾರಣ ಎಂದು ಇನ್ನೂ ಬಹಿರಂಗವಾಗಿಲ್ಲ. ಇಬ್ಬರೂ ಬರ್ಮಿಂಗ್‌ಹ್ಯಾಮ್‌ನ ಡೌನ್‌ಟೌನ್ ಕ್ಲೀವ್‌ಲ್ಯಾಂಡ್ ಟವರ್, ಹೋಲಿವೆಲ್ ಹೆಡ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾಗ ಅಪರಾಧ ನಡೆದಿದೆ ಎಂದು ಅಂದಾಜಿಸಲಾಗಿದೆ.

ಮತ್ತಷ್ಟು ಓದಿ: ಶ್ರದ್ಧಾ ರೀತಿಯಲ್ಲೇ ಮತ್ತೊಂದು ಕೊಲೆ: ಢಾಬಾದ ಫ್ರಿಡ್ಜ್‌ನಲ್ಲಿ ಬಾಲಕಿಯ ಶವ ಪತ್ತೆ

ಮತ್ತೊಂದು ಘಟನೆ: ಇತ್ತೀಚೆಗೆ ದೆಹಲಿಯ ಢಾಬಾದಲ್ಲಿ ಫ್ರೀಜರ್​ನಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. 25 ವರ್ಷದ ಯುವತಿಯ ಶವ ಧಾಬಾದ ಫ್ರೀಜರ್‌ನಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಪ್ರೇಮ ಕೋನವನ್ನು ಶಂಕಿಸಿದ್ದು, ಮಹಿಳೆ ಸ್ವತಃ ಉತ್ತರನಗರದ ನಿವಾಗಿಯಾಗಿದ್ದಳು.

ದೆಹಲಿ ಪೊಲೀಸರ ಪ್ರಕಾರ, ಮಹಿಳೆಯನ್ನು ಎರಡು-ಮೂರು ದಿನಗಳ ಹಿಂದೆ ಕೊಂದಿರಬಹುದು ಮತ್ತು ಆಕೆಯ ದೇಹವನ್ನು ಢಾಬಾದ ಫ್ರೀಜರ್‌ನಲ್ಲಿ ಇರಿಸಿರಬಹುದು ಎಂದು ಪೊಲೀಸರು ಹೇಳಿದ್ದರು. ಆಘಾತಕಾರಿ ಪ್ರಕರಣ ಬೆಳಕಿಗೆ ಬಂದ ನಂತರ, ಡಾಬಾ ಮಾಲೀಕ ಸಾಹಿಲ್ ಗೆಹ್ಲೋಟ್ ಅವರನ್ನು ಬಂಧಿಸಲಾಗಿತ್ತು ಮತ್ತು ಪ್ರಮುಖ ಶಂಕಿತ ಎಂದು ಪರಿಗಣಿಸಲಾಗಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ