ಕಿಲ್​​ ಟ್ರಂಪ್, ನ್ಯೂಕ್ ಇಂಡಿಯಾ: ಅಮೆರಿಕದ ಚರ್ಚ್​ನಲ್ಲಿ ದಾಳಿ ನಡೆಸಿದವನ ಬಂದೂಕಿನಲ್ಲಿ ಏನು ಬರೆದಿತ್ತು?

ಮಿನ್ನಿಯಾಪೋಲಿಸ್‌ನಲ್ಲಿ ಚರ್ಚ್​​ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಶಾಲಾ ಮಕ್ಕಳ ಮೇಲೆ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದ ಬಂದೂಕುಧಾರಿಯ ಬಂದೂಕುಗಳ ಮೇಲೆ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಿ ಮತ್ತು ಭಾರತವನ್ನು ಸರ್ವನಾಶ ಮಾಡಿ ಹೀಗೆ ಹಲವು ಗೊಂದಲಕರ ಸಂದೇಶಗಳನ್ನು ಬರೆಯಲಾಗಿತ್ತು ಎಂಬುದನ್ನು ಈ ಹಿಂದೆ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವೊಂದು ತಿಳಿಸಿದೆ.ಕ್ಯಾಥೋಲಿಕ್ ಶಾಲೆಯಲ್ಲಿ ನಡೆದ ಮಾರಕ ದಾಳಿಯ ಸಮಯದಲ್ಲಿ ಬಳಸಿದ ಶಸ್ತ್ರಾಸ್ತ್ರಗಳ ಮೇಲೆ ಮಾಶಅಲ್ಲಾಹ್, ನ್ಯೂಕ್ ಇಂಡಿಯಾ ಮತ್ತು ಇಸ್ರೇಲ್ ನೆಲಕಚ್ಚಬೇಕು ಹೀಗೆ ಮುಂತಾದ ಬರಹಗಳನ್ನು ಬರೆದಿದ್ದ.

ಕಿಲ್​​ ಟ್ರಂಪ್, ನ್ಯೂಕ್ ಇಂಡಿಯಾ: ಅಮೆರಿಕದ ಚರ್ಚ್​ನಲ್ಲಿ ದಾಳಿ ನಡೆಸಿದವನ ಬಂದೂಕಿನಲ್ಲಿ ಏನು ಬರೆದಿತ್ತು?
ಶಸ್ತ್ರಾಸ್ತ್ರಗಳು

Updated on: Aug 28, 2025 | 9:23 AM

ವಾಷಿಂಗ್ಟನ್, ಆಗಸ್ಟ್​ 28: ಅಮೆರಿಕದ ಮಿನ್ನಿಯಾಪೊಲೀಸ್ ನಗರದ ಕ್ಯಾಥೋಲಿಕ್ ಚರ್ಚ್​​ನಲ್ಲಿ ಬುಧವಾರ ಗುಂಡಿನ ದಾಳಿ(Firing) ನಡೆದಿತ್ತು. ಪ್ರಾರ್ಥನೆಗೆಂದು ಆಗಮಿಸಿದ್ದವರ ಪೈಕಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಇನ್ನೂ ಹಲವು ಮಂದಿ ಗಾಯಗೊಂಡಿದ್ದರು.ಈ ಗುಂಡು ಹಾರಿಸಿದ ನಂತರ, ಆರೋಪಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನಿಂದ ವಶಪಡಿಸಿಕೊಂಡ ಬಂದೂಕಿನ ಬಗ್ಗೆ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಆತ ಈ ಕೃತ್ಯವೆಸಗುವ ಮುನ್ನ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವೀಡಿಯೊಗಳನ್ನು  ಬಿಡುಗಡೆ ಮಾಡಿದ್ದ ಎನ್ನಲಾಗಿದೆ.

ಮಿನ್ನಿಯಾಪೋಲಿಸ್‌ನಲ್ಲಿ ಗುಂಡು ಹಾರಿಸಿದ ಯುವಕನ ಬಂದೂಕುಗಳ ಮೇಲೆ ನ್ಯೂಕ್ ಇಂಡಿಯಾ(ಭಾರತವನ್ನು ಸರ್ವನಾಶ ಮಾಡಿ)’ ಮತ್ತು ‘ಮಾಶಾ ಅಲ್ಲಾಹ್‘ ಎಂದು ಬರೆಯಲಾಗಿತ್ತು. ಗುಂಡು ಹಾರಿಸಿದ ವ್ಯಕ್ತಿಯನ್ನು ರಾಬಿನ್ ವೆಸ್ಟ್‌ಮನ್ ಎಂದು ಗುರುತಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ದಾಳಿಕೋರನು ಘಟನೆ ನಡೆಸುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವೀಡಿಯೊಗಳನ್ನು ಬಿಡುಗಡೆ ಮಾಡಿದ್ದ.

ಗಾಯಗೊಂಡವರಲ್ಲಿ 14 ಮಂದಿ 6 ರಿಂದ 15 ವರ್ಷ ವಯಸ್ಸಿನ ಮಕ್ಕಳಾಗಿದ್ದು, ಅವರು ಬದುಕುಳಿಯುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟ ಮೂವರು ಪರ್ಷಿಯನ್ನರು ಸಹ ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ಚೀನಾವನ್ನು ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್

ಬಂದೂಕಿನ ಮೇಲೆ ಟ್ರಂಪ್ ಬಗ್ಗೆಯೂ ಬರೆಯಲಾಗಿತ್ತು
ಮಿನ್ನಿಯಾಪೋಲಿಸ್ ಶೂಟರ್‌ನ ಗನ್ ಮ್ಯಾಗಜೀನ್‌ನಲ್ಲಿ ಅಮೆರಿಕನ್ ವಿರೋಧಿ ಪದಗಳನ್ನು ಬರೆಯಲಾಗಿತ್ತು. ಅದರಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಕೊಲ್ಲಬೇಕು ಮತ್ತು ಇಸ್ರೇಲ್ ನೆಲಕಚ್ಚುವಂತೆ ಮಾಡಬೇಕು ಎಂದು ಬರೆಯಲಾಗಿತ್ತು.

ಮಿನ್ನಿಯಾಪೋಲಿಸ್ ದಾಳಿಗೆ ಕೆಲವು ಗಂಟೆಗಳ ಮೊದಲು ಬಿಡುಗಡೆಯಾದ ವೀಡಿಯೊದಲ್ಲಿ, ಶೂಟರ್ ರಾಬಿನ್ ವೆಸ್ಟ್‌ಮನ್‌ಗೆ ಸೇರಿದೆ ಎಂದು ಹೇಳಲಾದ ಬಂದೂಕಿನ ಮ್ಯಾಗಜೀನ್‌ನಲ್ಲಿ ಯೆಹೂದಿ ವಿರೋಧಿ ಮತ್ತು ಟ್ರಂಪ್ ವಿರೋಧಿ ಸಂದೇಶಗಳು ಕಂಡುಬರುತ್ತವೆ.

ದಾಳಿಕೋರ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಆಡಮ್ ಲ್ಯಾಂಜಾ ಅವರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಡಿಸೆಂಬರ್ 2012 ರಲ್ಲಿ ಕನೆಕ್ಟಿಕಟ್‌ನ ಸ್ಯಾಂಡಿ ಹುಕ್ ಪ್ರಾಥಮಿಕ ಶಾಲೆಯಲ್ಲಿ ಮನಬಂದಂತೆ ಗುಂಡು ಹಾರಿಸಿ 6 ರಿಂದ 8 ವರ್ಷ ವಯಸ್ಸಿನ 20 ಮಕ್ಕಳು ಮತ್ತು 6 ವಯಸ್ಕರನ್ನು ಕೊಂದ ಅದೇ ವ್ಯಕ್ತಿ ಇವನೇ. ಇದು ಇಲ್ಲಿಯವರೆಗೆ ಅಮೆರಿಕನ್ ಶಾಲೆಗಳಲ್ಲಿ ನಡೆದ ಅತ್ಯಂತ ಭಯಾನಕ ಘಟನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ