ಇಸ್ರೇಲ್​ಗೆ ಉಳಿಗಾಲವಿಲ್ಲ, ನಾವು ಹಿಂದೆ ಸರಿಯುವುದಿಲ್ಲ; ಇರಾನ್‌ ನಾಯಕ ಖಮೇನಿಯ ಧರ್ಮೋಪದೇಶ

|

Updated on: Oct 04, 2024 | 4:28 PM

ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುವುದು ಬಹಳ ಕನಿಷ್ಠ ಶಿಕ್ಷೆಯಾಗಿದೆ. ಇರಾನ್ ಮತ್ತು ಅದರ ಮಿತ್ರ ರಾಷ್ಟ್ರಗಳು ಇಸ್ರೇಲ್​ನಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇರಾನ್​ನ ಕ್ಷಿಪಣಿ ದಾಳಿ ಕಾನೂನುಬದ್ಧವಾಗಿದೆ ಎಂದು ಇಂದು ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಮಾಡಿದ ಧರ್ಮೋಪದೇಶದಲ್ಲಿ ಇರಾನ್ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ.

ಇಸ್ರೇಲ್​ಗೆ ಉಳಿಗಾಲವಿಲ್ಲ, ನಾವು ಹಿಂದೆ ಸರಿಯುವುದಿಲ್ಲ; ಇರಾನ್‌ ನಾಯಕ ಖಮೇನಿಯ ಧರ್ಮೋಪದೇಶ
ಖಮೇನಿ
Follow us on

ಜೆರುಸಲೆಂ: ಅಫ್ಘಾನಿಸ್ತಾನದಿಂದ ಯೆಮೆನ್‌ವರೆಗೆ ಮತ್ತು ಇರಾನ್‌ನಿಂದ ಗಾಜಾ ಮತ್ತು ಲೆಬನಾನ್‌ವರೆಗೆ ವ್ಯಾಪಿಸಿರುವ ಸಾಮಾನ್ಯ ಶತ್ರುಗಳ ವಿರುದ್ಧ ತಮ್ಮ ರಕ್ಷಣೆಯನ್ನು ಬಲಪಡಿಸುವಂತೆ ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮುಸ್ಲಿಂ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ. ಹಮಾಸ್‌ನ ಅಕ್ಟೋಬರ್ 7ರ ದಾಳಿ ಮತ್ತು ಇತ್ತೀಚಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯು ಇಸ್ರೇಲ್‌ನ ಮೇಲೆ ಕಾನೂನುಬದ್ಧ ರಕ್ಷಣಾ ಕ್ರಮಗಳಾಗಿವೆ ಎಂದು ಅವರು ಘೋಷಿಸಿದ್ದಾರೆ.

ಇಸ್ರೇಲ್‌ನ ಮೇಲೆ ಕ್ಷಿಪಣಿ ದಾಳಿಯ ಅಲೆಯನ್ನು ಪ್ರಾರಂಭಿಸಿದ ನಂತರ ಇರಾನ್‌ನ ಯೋಜನೆಗಳ ಬಗ್ಗೆ ತಿಳಿಸುವ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ತಮ್ಮ ಅಪರೂಪದ ಧರ್ಮೋಪದೇಶ ಮಾಡಿದರು. ಈ ವೇಳೆ ಟೆಹ್ರಾನ್‌ನಲ್ಲಿ ಬೃಹತ್ ಜನಸಮೂಹ ಜಮಾಯಿಸಿತ್ತು.

ಇದನ್ನೂ ಓದಿ: ಇಸ್ರೇಲ್​ನಿಂದ ಸಿರಿಯಾ ಮೇಲೆ ವೈಮಾನಿಕ ದಾಳಿ, ಹಿಜ್ಬುಲ್ಲಾ ಮಾಜಿ ಮುಖ್ಯಸ್ಥ ನಸ್ರಲ್ಲಾ ಅಳಿಯ ಸೇರಿ 3 ಮಂದಿ ಸಾವು

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಈ ಬಗ್ಗೆ ಮಾಹಿತಿ ನೀಡಿದ್ದು, “ಪ್ಯಾಲೆಸ್ಟೀನಿಯನ್ನರ ಪ್ರತಿರೋಧವು ನ್ಯಾಯಸಮ್ಮತವಾಗಿದೆ” ಎಂದು ಹೇಳಿದ್ದಾರೆ. ಸುಮಾರು 5 ವರ್ಷಗಳಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಮುಸ್ಲಿಮರು ಒಗ್ಗಟ್ಟಿನಿಂದ ಇರಬೇಕು ಮತ್ತು ಪರಸ್ಪರ ಪ್ರೀತಿಸಬೇಕು. ಮುಸ್ಲಿಮರಿಗೆಲ್ಲ ಒಬ್ಬರೇ ಕಾಮನ್ ಶತ್ರು ಎಂದು ಹೇಳಿದ್ದಾರೆ.


ಆಕ್ರಮಣಕಾರರ ವಿರುದ್ಧ ಪ್ರತಿ ರಾಷ್ಟ್ರಕ್ಕೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ ಎಂದು ಖಮೇನಿ ಹೇಳಿದ್ದಾರೆ. ಹಾಗೇ, ಇರಾನ್‌ನ ಕ್ಷಿಪಣಿ ದಾಳಿಯು ಇಸ್ರೇಲ್‌ನ ಅಪರಾಧಗಳಿಗೆ ಬಹಳ ‘ಕನಿಷ್ಠ ಶಿಕ್ಷೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ನೂತನ ಮುಖ್ಯಸ್ಥನ ಹತ್ಯೆ?

ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರು ದೇಶದ ಅತ್ಯುನ್ನತ ಅಧಿಕಾರವನ್ನು ಹೊಂದಿದ್ದಾರೆ. ಇಂದು ಮಧ್ಯಾಹ್ನ ಅವರ ಧರ್ಮೋಪದೇಶವು ಸುಮಾರು 5 ವರ್ಷಗಳಲ್ಲಿ ಇದೇ ಮೊದಲನೆಯದಾಗಿದೆ. ಅವರ ಧರ್ಮೋಪದೇಶವು ಕಳೆದ ವಾರ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್ ಬೆಂಬಲಿತ ಲೆಬನಾನಿನ ಗುಂಪಿನ ಹೆಜ್ಬೊಲ್ಲಾಹ್ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಪ್ರಾರ್ಥನೆ ಸಮಾರಂಭದ ಮೂಲಕ ಆರಂಭವಾಯಿತು.

ಮಂಗಳವಾರದ ಕ್ಷಿಪಣಿ ದಾಳಿಯ ನಂತರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್‌ಗೆ ಖಮೇನಿ ಪ್ರಮುಖ ಟಾರ್ಗೆಟ್ ಆಗಿದ್ದಾರೆ. ಖಮೇನಿ ತಮ್ಮ ಭಾಷಣದಲ್ಲಿ ಕಳೆದ ವಾರ ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್ ಬೆಂಬಲಿತ ಲೆಬನಾನಿನ ಗುಂಪಿನ ಹಿಜ್ಬುಲ್ಲಾದ ಮಾಜಿ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಶ್ಲಾಘಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ