ಇಂಡೋನೇಷ್ಯಾ: ನಾಪತ್ತೆಯಾಗಿದ್ದ ಮಹಿಳೆಯ ಶವ 3 ದಿನದ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ

|

Updated on: Jun 09, 2024 | 12:10 PM

ಇಂಡೋನೇಷ್ಯಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಹೆಬ್ಬಾವು ಮಹಿಳೆಯೊಬ್ಬರನ್ನು ಸಂಪೂರ್ಣ ನುಂಗಿ ಹಾಕಿದೆ. ನಂತರ ಗ್ರಾಮಸ್ಥರು ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸಿ ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ. ಈ ಕುರಿತು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಡೋನೇಷ್ಯಾ: ನಾಪತ್ತೆಯಾಗಿದ್ದ ಮಹಿಳೆಯ ಶವ 3 ದಿನದ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ
ಹೆಬ್ಬಾವು
Image Credit source: India Today
Follow us on

ನಾಪತ್ತೆಯಾಗಿದ್ದ ಮಹಿಳೆ ಶವ ಮೂರು ದಿನಗಳ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಾಂಗ್ ಗ್ರಾಮದ ಮುಖ್ಯಸ್ಥ ಸುರ್ದಿ ರೋಸಿ, ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಬಳಿಕ ಪತಿ ಹಾಗೂ ಗ್ರಾಮಸ್ಥರು ಸೇರಿ ಹುಡುಕಾಟ ಆರಂಭಿಸಿದ್ದರು.

ಹುಡುಕಾಟದ ಸಮಯದಲ್ಲಿ ಮಹಿಳೆಯ ಪತಿಗೆ ಆಕೆಯ ಕೆಲವು ವಸ್ತುಗಳು ಸಿಕ್ಕಿವೆ, ಇದರಿಂದಾಗಿ ಏನಾದರೂ ಅಹಿತಕರ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿತ್ತು.

16 ಅಡಿ ಉದ್ದದ ಹೆಬ್ಬಾವು ಪತ್ತೆ
ಗ್ರಾಮಸ್ಥರು ಹುಡುಕಾಟ ಆರಂಭಿಸಿದಾಗ 16 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಹೊಟ್ಟೆ ಉಬ್ಬಿಕೊಂಡಂತಿತ್ತು. ಇದಾದ ಬಳಿಕ ಗ್ರಾಮಸ್ಥರು ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸಸಲು ಒಪ್ಪಿಗೆ ಸೂಚಿಸಿದರು. ಹೊಟ್ಟೆ ಕತ್ತರಿಸಿದಾಗ ಮೊದಲು ಫರೀದಾ ಅವರ ತಲೆ ಗೋಚರಿಸಿತ್ತು. ಹೆಬ್ಬಾವು ಆಕೆಯನ್ನು ಬಟ್ಟೆ ಸಮೇತವಾಗಿ ನುಂಗಿತ್ತು. ಹೆಬ್ಬಾವುಗಳಿಂದ ಮನುಷ್ಯರನ್ನು ನುಂಗಿದ ಘಟನೆಗಳು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ.

ಮತ್ತಷ್ಟು ಓದಿ: ಮೇಕೆ ಮರಿ ತಿನ್ನಲು‌ ಬಂದಿದ್ದ 11 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ಸ್ಥಳೀಯರು

ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹಲವಾರು ಜನರು ಈ ರೀತಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ ರೈರೊಬ್ಬರನ್ನು ಹೆಬ್ಬಾವು ನುಂಗಿತ್ತು, ಬಳಿಕ ಗ್ರಾಮಸ್ಥರು ಹೆಬ್ಬಾವನ್ನು ಕೊಂದು ಮೃತದೇಹವನ್ನು ಹೊರಗೆ ತೆಗೆದಿದ್ದರು.
2018 ರಲ್ಲಿ, ಆಗ್ನೇಯ ಸುಲವೇಸಿಯ ಮುನಾ ನಗರದಲ್ಲಿ 54 ವರ್ಷದ ಮಹಿಳೆಯೊಬ್ಬರು ಹೆಬ್ಬಾವಿಗೆ ಬಲಿಯಾಗಿದ್ದರು. ಏಳು ಮೀಟರ್ ಉದ್ದದ ಹೆಬ್ಬಾವಿನ ಹೊಟ್ಟೆಯೊಳಗೆ ಮಹಿಳೆಯ ಶವ ಪತ್ತೆಯಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ