ಮೇಕೆ ಮರಿ ತಿನ್ನಲು ಬಂದಿದ್ದ 11 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ಸ್ಥಳೀಯರು
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಣುವಿನಕುರಿಕೆ ಗ್ರಾಮದಲ್ಲಿ ಸುಮಾರು 11 ಅಡಿ ಉದ್ದ ಹಾಗೂ 16 ಕೆಜಿ ತೂಕದ ಬೃಹತ್ ಹೆಬ್ಬಾವನ್ನು ರಕ್ಷಿಸಲಾಗಿದೆ. ಉರಗ ಸಂರಕ್ಷಕ ದಿಲೀಪ್ ಕಾರ್ಯಾಚರಣೆ ನಡೆಸಿ ಹೆಬ್ಬಾವು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ತುಮಕೂರು, ಮೇ.21: ಮೇಕೆ ಮರಿಯನ್ನ ತಿನ್ನಲು ಬಂದ ಬೃಹತ್ ಹೆಬ್ಬಾವನ್ನು (Python) ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿರುವ ಘಟನೆ ನಡೆದಿದೆ. ತುಮಕೂರು (Tumkur) ಜಿಲ್ಲೆಯ ಕೊರಟಗೆರೆ ತಾಲೂಕಿನ ಮಣುವಿನಕುರಿಕೆ ಗ್ರಾಮದಲ್ಲಿ ಸುಮಾರು 11 ಅಡಿ ಉದ್ದ ಹಾಗೂ 16 ಕೆಜಿ ತೂಕದ ಬೃಹತ್ ಹೆಬ್ಬಾವನ್ನು ರಕ್ಷಿಸಲಾಗಿದೆ.
ರೈತನೋರ್ವ ತನ್ನ ಕುರಿಗಳನ್ನು ಮೇಯಿಸಲು ಹೋದಾಗ ಮೇಕೆ ಮರಿಯನ್ನ ಹಿಡಿದು ನುಂಗುತ್ತಿದ್ದ ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಭಯಕ್ಕೆ ಕೂಗಾಡಿ ಸ್ಥಳೀಯರನ್ನು ಸೇರಿಸಿದ್ದಾರೆ. ಸ್ಥಳೀಯರ ಅಬ್ಬರಕ್ಕೆ ಭಯಗೊಂಡ ಹೆಬ್ಬಾವು ಮೇಕೆ ಮರಿಯನ್ನು ಬಿಟ್ಟು ಕತ್ತಾಳೆ ಗಿಡದೊಳಕ್ಕೆ ಸೇರಿ ಕೊಂಡಿದೆ. ತಕ್ಷಣ ಉರಗ ಸಂರಕ್ಷಕರಿಗೆ ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಬಂದ ಉರಗ ಸಂರಕ್ಷಕ ದಿಲೀಪ್ ಕಾರ್ಯಾಚರಣೆ ನಡೆಸಿ ಹೆಬ್ಬಾವು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಅರಣ್ಯ ಅಧಿಕಾರಿಗಳ ಜೊತೆಗೆ ಕಾರ್ಯಾಚರಣೆ ನಡೆಸಿ ಹೆಬ್ಬಾವು ರಕ್ಷಣೆ ಮಾಡಲಾಗಿದೆ. ಹೆಬ್ಬಾವು ಕಂಡು ಜನರು ಪುಲ್ ಶಾಕ್ ಆಗಿದ್ದು ವಿಡಿಯೋ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ