ಚಿಕ್ಕಮಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಕೋಡಿ ಬಿದ್ದ ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ, ಗ್ರಾಮ ಜಲಾವೃತ

ಚಿಕ್ಕಮಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಕೋಡಿ ಬಿದ್ದ ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ, ಗ್ರಾಮ ಜಲಾವೃತ

ಅರುಣ್​ ಕುಮಾರ್​ ಬೆಳ್ಳಿ
|

Updated on:May 21, 2024 | 11:05 AM

ಜಿಲ್ಲೆಯ ಕಡೂರು ತಾಲ್ಲೂಕಿನ ಹೇಮಗಿರಿ ಕೆರೆಸಂತೆ ಭಾಗದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ವಿ ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ ಕೋಡಿ ಬಿದ್ದಿದೆ. ತುಂಬಿದ ಕೆರೆಯಿಂದ ನೀರು ಇಳಿಜಾರು ಪ್ರದೇಶಗಳಲ್ಲಿ ಹರಿದು ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಚಿಕ್ಕಮಗಳೂರು: ನಾವು ವರದಿ ಮಾಡುತ್ತಿರುವ ಹಾಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ (Chikmagalur district) ಕಳೆದ ಹತ್ತು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಮಳೆಗಾಲ ಆರಂಭಗೊಳ್ಳುವ ಮೊದಲೇ ಪಶ್ಚಿಮಘಟ್ಟಗಳ (Western Ghats) ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಕಡೂರು ತಾಲ್ಲೂಕಿನ ಹೇಮಗಿರಿ ಕೆರೆಸಂತೆ ಭಾಗದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ವಿ ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ (Doddamma Devi Lake) ಕೋಡಿ ಬಿದ್ದಿದೆ. ತುಂಬಿದ ಕೆರೆಯಿಂದ ನೀರು ಇಳಿಜಾರು ಪ್ರದೇಶಗಳಲ್ಲಿ ಹರಿದು ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇಡೀ ವಿ ವರದಕೆರೆ ಗ್ರಾಮವೇ ಜಲಾವೃಗೊಂಡಂತಿದೆ. ಕೆಲವು ಮನೆಗಳ ಮುಂದೆ ಕೆರೆಗಳಂಥ ಸನ್ನಿವೇಶ ಸೃಷ್ಟಿಯಾಗಿದೆ. ನದಿಯಲ್ಲಿ ನೀರು ರಭಸವಾಗಿ ನೀರು ಹರಿಯುವ ಹಾಗೆ ರಸ್ತೆ ಮತ್ತು ಬೀದಿಗಳಲ್ಲಿ ನೀರು ಹರಿಯುತ್ತಿದೆ. ಬೇಸಿಗೆಯ ಅಕಾಲಿಕ ಮಳೆಗಳಿಗೆ ಕೆರೆಯೇ ಕೋಡಿ ಬಿದ್ದರೆ ಮಳೆಗಾಲದಲ್ಲಿ ಏನು ಸ್ಥಿತಿ ಮಾರಾಯ್ರೇ? ಮಾನ್ಸೂನ್ ರಾಜ್ಯವನ್ನು ಪ್ರವೇಶಿಸಲು ಇನ್ನೂ ಮೂರು ವಾರಗಳಂತೂ ಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿಕ್ಕಮಗಳೂರು: ಬಿರುಗಾಳಿ ಸಹಿತ ಮಳೆಗೆ ಕೇವಲ 10 ದಿನಗಳ ಅಂತರದಲ್ಲೇ ಎರಡು ಬಲಿ; ಇಬ್ಬರಿಗೆ ಗಂಭೀರ ಗಾಯ

Published on: May 21, 2024 11:05 AM