ರೇಡ್ ನಡೆದ ಫಾರ್ಮ್​​ಹೌಸ್​ಗೆ ಕನ್ನಡದ ನಟ ‘ರಾಜಾಹುಲಿ’ ಹರ್ಷ ಎಂಟ್ರಿ; ಕಾರಣವೇನು?

ರೇಡ್ ನಡೆದ ಫಾರ್ಮ್​​ಹೌಸ್​ಗೆ ಕನ್ನಡದ ನಟ ‘ರಾಜಾಹುಲಿ’ ಹರ್ಷ ಎಂಟ್ರಿ; ಕಾರಣವೇನು?

ರಾಜೇಶ್ ದುಗ್ಗುಮನೆ
|

Updated on: May 21, 2024 | 8:11 AM

ಬೆಂಗಳೂರಿ​ನಲ್ಲಿ ರೇವ್ ಪಾರ್ಟಿ ನಡೆದಿದೆ. ಇದರ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಹಲವರನ್ನು ಬಂಧಿಸಲಾಗಿದೆ. ಇದರಲ್ಲಿ ಟಾಲಿವುಡ್​ನ ನಟಿಯರೂ ಕೂಡ ಇದ್ದಾರೆ. ಅವರಿಗೂ ಈ ಪಾರ್ಟಿಗೂ ಏನು ಸಂಬಂಧ ಎನ್ನುವ ಕುತೂಹಲ ಮೂಡೋದು ಸಹಜ. ಇದಕ್ಕೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಜಿಆರ್​ ಫಾರ್ಮ್​​ಹೌಸ್​ನಲ್ಲಿ ರೇವ್ ಪಾರ್ಟಿ (Rave Party) ನಡೆದಿದೆ. ಇದರ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಹಲವರನ್ನು ಬಂಧಿಸಲಾಗಿದೆ. ಇದರಲ್ಲಿ ಟಾಲಿವುಡ್​ನ ನಟಿಯರೂ ಕೂಡ ಇದ್ದಾರೆ. ಇದು ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಮಧ್ಯೆ ಪಾರ್ಟಿ ನಡೆದ ಫಾರ್ಮ್​ಹೌಸ್​ಗೆ ಕನ್ನಡದ ನಟ ‘ರಾಜಾಹುಲಿ’ ಹರ್ಷ ಅವರ ಆಗಮನ ಆಗಿದೆ. ಅವರಿಗೂ ಈ ಪಾರ್ಟಿಗೂ ಏನು ಸಂಬಂಧ ಎನ್ನುವ ಕುತೂಹಲ ಮೂಡೋದು ಸಹಜ. ಇದಕ್ಕೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ‘ಅಧಿಕಾರಿಗಳೊಬ್ಬರನ್ನು ಭೇಟಿ ಮಾಡೋಕೆ ನಾನು ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ ಹರ್ಷ. ಈ ಮೂಲಕ ಈ ಪ್ರಕರಣಕ್ಕೂ ಅವರಿಗೂ ಏನೂ ಸಂಬಂಧ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.