ಅಮೆರಿಕ-ಇಸ್ರೇಲ್ ದಾಳಿಯ ಗಾಯಗಳಿಂದ ಚೇತರಿಸಿಕೊಂಡರೇ ಮೊಜ್ತಬಾ?: ವಿಡಿಯೋ ರಿಲೀಸ್

ಅಮೆರಿಕ-ಇಸ್ರೇಲ್ ದಾಳಿಯ ನಂತರ ಗಾಯಗೊಂಡಿದ್ದ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ವೀಡಿಯೊ ತುಣುಕೊಂದು ಈಗ ಹೊರಬಿದ್ದಿದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ, ಅವರು ಸೇನಾ ಕಮಾಂಡರ್‌ಗಳು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಮತ್ತು ಅಮೆರಿಕದ ನಿರ್ಬಂಧಗಳು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ಅನಿಶ್ಚಿತತೆಯನ್ನು ಹೆಚ್ಚಿಸಿವೆ.

ಅಮೆರಿಕ-ಇಸ್ರೇಲ್ ದಾಳಿಯ ಗಾಯಗಳಿಂದ ಚೇತರಿಸಿಕೊಂಡರೇ ಮೊಜ್ತಬಾ?: ವಿಡಿಯೋ ರಿಲೀಸ್
ಮೊಜ್ತಬಾ ಖಮೇನಿ

Updated on: Aug 25, 2026 | 10:14 AM

ಟೆಹ್ರಾನ್, ಆಗಸ್ಟ್​ 25: ಪಶ್ಚಿಮ ಏಷ್ಯಾದಲ್ಲಿ ಭೀಕರ ಯುದ್ಧ ಮುಂದುವರೆದಿರುವ ನಡುವೆಯೇ, ಇರಾನ್‌(Iran)ನ ನೂತನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಅಲಿ ಖಮೇನಿ (56) ಅವರ ಅಪರೂಪದ ವಿಡಿಯೋ ತುಣುಕನ್ನು ಸುದ್ದಿ ಸಂಸ್ಥೆ ‘ಫಾರ್ಸ್’ ಬಿಡುಗಡೆ ಮಾಡಿದೆ. ಫೆಬ್ರವರಿ 28 ರಂದು ನಡೆದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ಬಳಿಕ ಮೊಜ್ತಬಾ ಅವರ ಧ್ವನಿ ಸಾರ್ವಜನಿಕವಾಗಿ ಕೇಳಿಬಂದಿರುವುದು ಇದೇ ಮೊದಲು.

ಈ ವಿಡಿಯೋದಲ್ಲಿ ಅವರು ಧಾರ್ಮಿಕ ಶೈಕ್ಷಣಿಕ ಅಧಿವೇಶನವೊಂದರಲ್ಲಿ ವಿದ್ಯಾರ್ಥಿಯ ಪ್ರಬಂಧವನ್ನು ಮೌಲ್ಯಮಾಪನ ಮಾಡುತ್ತಾ, ಇರಾನ್‌ನ ‘ಇಸ್ಲಾಮಿಕ್ ಭದ್ರತಾ ಮಾದರಿ’ ಬಗ್ಗೆ ಮಾರ್ಗದರ್ಶನ ನೀಡುತ್ತಿರುವುದು ಕಂಡುಬಂದಿದೆ.

ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ಮಂಡಿಸಿದ ಪ್ರಬಂಧವನ್ನು ಆಲಿಸಿದ ಮೊಜ್ತಬಾ, ಅದಕ್ಕೆ 20 ಕ್ಕೆ 19.5 ಅಂಕ ನೀಡಿ ‘ದೋಷರಹಿತ’ ಎಂದು ಶ್ಲಾಘಿಸಿದ್ದಾರೆ. ಆದಾಗ್ಯೂ, ಈ ವಿಡಿಯೋವನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ.

ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್ ವೇಳೆ ಧ್ವಂಸಗೊಂಡಿದ್ದ ಜೈಶ್ ಪ್ರಧಾನ ಕಚೇರಿ ರೆಡಿ, ಮತ್ತೆ ಚುರುಕಾಯ್ತು ಜೆಇಎಂ ಉಗ್ರ ಜಾಲ

ಫೆಬ್ರವರಿ 28 ರಂದು ಅವರ ತಂದೆ ಅಲಿ ಖಮೇನಿ ಹತ್ಯೆಯಾದ ದಾಳಿಯಲ್ಲಿ ಮೊಜ್ತಬಾ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ, ಆಡಿಯೋ ಕಾನ್ಫರೆನ್ಸ್‌ಗಳ ಮೂಲಕ ಸೇನಾ ಕಮಾಂಡರ್‌ಗಳು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಪ್ರಾಥಮಿಕ ತಿಳುವಳಿಕೆ ಒಪ್ಪಂದ (MoU) ಮುಕ್ತಾಯಗೊಂಡಿದ್ದು, ಟೆಹ್ರಾನ್ ಜೊತೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
ಅಮೆರಿಕದ ಖಜಾನೆ ಇಲಾಖೆಯು ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದು, ಇರಾನ್ ಜೊತೆ ವ್ಯಾಪಾರ ಮುಂದುವರಿಸುವ ಇತರ ದೇಶಗಳ ಮೇಲೂ ‘ದ್ವಿತೀಯ ನಿರ್ಬಂಧ’ ವಿಧಿಸುವುದಾಗಿ ಎಚ್ಚರಿಸಿದೆ.

ವಿಡಿಯೋ

ವಿಶ್ವದ ತೈಲ ಮತ್ತು ನೈಸರ್ಗಿಕ ಅನಿಲ ವ್ಯಾಪಾರದ ಶೇಕಡಾ 20 ರಷ್ಟು ಸಾಗಣೆಯಾಗುವ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಬಿಗಿ ಹಿಡಿತ ಸಾಧಿಸಲು ಯತ್ನಿಸುತ್ತಿದ್ದು, ಇದು ಜಾಗತಿಕ ಕಚ್ಚಾ ತೈಲ ಪೂರೈಕೆ ಮತ್ತು ಭಾರತ ಸೇರಿದಂತೆ ಪ್ರಮುಖ ಆಮದು ರಾಷ್ಟ್ರಗಳ ಆರ್ಥಿಕತೆಯ ಮೇಲೆ ನೇರ ಪ್ರಭಾವ ಬೀರುತ್ತಿದೆ.

ಇರಾನ್ ರಾಜಕೀಯ ಹಾಗೂ ಸೇನಾ ಪಡೆಗಳಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಮೊಜ್ತಬಾ, ಬಹಿರಂಗವಾಗಿ ಬಾರದೆ ರಹಸ್ಯ ನೆಲೆಗಳಿಂದಲೇ ಯುದ್ಧ ತಂತ್ರಗಳನ್ನು ಮುನ್ನಡೆಸುತ್ತಿರುವುದು ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ಅನಿಶ್ಚಿತತೆಯನ್ನು ಹೆಚ್ಚಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us