ಕೊರೊನಾ ಲಾಕ್​ಡೌನ್: ತೈಲ ಬೆಲೆ ಕುಸಿತ, ಉತ್ಪಾದಕ ರಾಷ್ಟ್ರಗಳಲ್ಲಿ ತಲ್ಲಣ

|

Updated on: Apr 28, 2020 | 6:16 AM

ಒಂದ್ಕಡೆ ಕೊರೊನಾ ಆತಂಕ ಎದುರಾಗಿರುವಾಗಲೇ, ಇರಾಕ್​ನಲ್ಲಿ ತೈಲ ಬೆಲೆ ಕುಸಿತದ ಪರಿಣಾಮ ಆರ್ಥಿಕ ಪರಿಸ್ಥಿತಿ ಮೇಲೆ ಏಳಲಾರದ ಪರಿಸ್ಥಿತಿ ತಲುಪಿದೆ. ಇತ್ತೀಚೆಗಷ್ಟೇ ತೈಲ ಬೆಲೆ ಇತಿಹಾಸದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಇದರ ಪರಿಣಾಮ, ತೈಲವನ್ನೇ ನೆಚ್ಚಿ ಬದುಕುತ್ತಿರುವ ಇರಾಕ್​ನ ಎಕಾನಮಿ ಕುಸಿದು ಬಿದ್ದಿದೆ. ‘ದೊಡ್ಡಣ್ಣ’ನ ಸೈನಿಕರಿಗೂ ಆತಂಕ: ಕೊರೊನಾ ವೈರಸ್ ಆರ್ಭಟಕ್ಕೆ ಇಡೀ ಅಮೆರಿಕ ತತ್ತರಿಸಿ ಹೋಗಿದ್ದು, ವಿಶ್ವದ ಬಲಾಢ್ಯ ಸೇನೆ ಎಂಬ ಹೆಗ್ಗಳಿಕೆಯಿರುವ ಅಮೆರಿಕ ಮಿಲಿಟರಿ ಕೂಡ ಕೊರೊನಾ ಅಬ್ಬರಕ್ಕೆ ಬೆಚ್ಚಿಬಿದ್ದಿದೆ. ಈಗಾಗ್ಲೇ ಸಾವಿರಾರು ಅಮೆರಿಕ […]

ಕೊರೊನಾ ಲಾಕ್​ಡೌನ್: ತೈಲ ಬೆಲೆ ಕುಸಿತ, ಉತ್ಪಾದಕ ರಾಷ್ಟ್ರಗಳಲ್ಲಿ ತಲ್ಲಣ
Follow us on

ಒಂದ್ಕಡೆ ಕೊರೊನಾ ಆತಂಕ ಎದುರಾಗಿರುವಾಗಲೇ, ಇರಾಕ್​ನಲ್ಲಿ ತೈಲ ಬೆಲೆ ಕುಸಿತದ ಪರಿಣಾಮ ಆರ್ಥಿಕ ಪರಿಸ್ಥಿತಿ ಮೇಲೆ ಏಳಲಾರದ ಪರಿಸ್ಥಿತಿ ತಲುಪಿದೆ. ಇತ್ತೀಚೆಗಷ್ಟೇ ತೈಲ ಬೆಲೆ ಇತಿಹಾಸದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಇದರ ಪರಿಣಾಮ, ತೈಲವನ್ನೇ ನೆಚ್ಚಿ ಬದುಕುತ್ತಿರುವ ಇರಾಕ್​ನ ಎಕಾನಮಿ ಕುಸಿದು ಬಿದ್ದಿದೆ.

‘ದೊಡ್ಡಣ್ಣ’ನ ಸೈನಿಕರಿಗೂ ಆತಂಕ:
ಕೊರೊನಾ ವೈರಸ್ ಆರ್ಭಟಕ್ಕೆ ಇಡೀ ಅಮೆರಿಕ ತತ್ತರಿಸಿ ಹೋಗಿದ್ದು, ವಿಶ್ವದ ಬಲಾಢ್ಯ ಸೇನೆ ಎಂಬ ಹೆಗ್ಗಳಿಕೆಯಿರುವ ಅಮೆರಿಕ ಮಿಲಿಟರಿ ಕೂಡ ಕೊರೊನಾ ಅಬ್ಬರಕ್ಕೆ ಬೆಚ್ಚಿಬಿದ್ದಿದೆ. ಈಗಾಗ್ಲೇ ಸಾವಿರಾರು ಅಮೆರಿಕ ಸೈನಿಕರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಮಾಸ್ಕ್ ಇದ್ದರೆ ಮಾತ್ರ ಪ್ರವೇಶ!
ಜರ್ಮನಿಯಲ್ಲಿ ಲಕ್ಷಾಂತರ ಸೋಂಕಿತರು ಇದ್ರೂ ಲಾಕ್​ಡೌನ್ ಸಡಿಲಗೊಳಿಸಲಾಗಿದೆ. ಜರ್ಮನಿಯ ಸಾರ್ವಜನಿಕ ಸಾರಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ‘ಮಾಸ್ಕ್’ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಚೀನಾದಿಂದ ಜರ್ಮನಿ ಭಾರಿ ಪ್ರಮಾಣದಲ್ಲಿ ಮಾಸ್ಕ್ ಆಮದು ಮಾಡಿಕೊಳ್ಳುತ್ತಿದೆ.