ಇಸ್ಲಾಮಾಬಾದ್ ಡಿಸೆಂಬರ್ 5: ಪಾಕಿಸ್ತಾನದ (Pakistan) ಪೇಶಾವರದ (Peshawar blast) ವಾರ್ಸಾಕ್ ರಸ್ತೆಯಲ್ಲಿರುವ ಪೇಶಾವರ ಪಬ್ಲಿಕ್ ಸ್ಕೂಲ್ ಬಳಿ ಬಾಂಬ್ ಸ್ಫೋಟ (Bomb blast) ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ದಾಳಿಯ ಹಿಂದೆ ಟಿಟಿಪಿ ಕೈವಾಡ ಇದೆ ಎಂದು ಶಂಕಿಸಲಾಗಿದೆ. ರಸ್ತೆಯಲ್ಲಿ ಹಾಕಲಾಗಿದ್ದ ಸ್ಫೋಟಕಗಳು ಸ್ಫೋಟಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಆಸ್ಪತ್ರೆಯ ವಕ್ತಾರರ ಪ್ರಕಾರ, ಗಾಯಗೊಂಡ ಮಕ್ಕಳು 7-10 ವರ್ಷ ವಯಸ್ಸಿನವರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಸ್ಫೋಟದ ನಂತರ, ಪೇಶಾವರದ ಬಾಬು ಗರ್ಹಿ ಪ್ರದೇಶದಲ್ಲಿ ಘಟನೆಯ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ತಂಡವಾದ 1122 ತಂಡಗಳನ್ನು ಕಳುಹಿಸಲಾಗಿದೆ. ಜಿಯೋ ನ್ಯೂಸ್‌ನೊಂದಿಗೆ ಮಾತನಾಡಿದ ಪೊಲೀಸ್ ಸುಪರಿಡೆಂಟೆಂಟ್ ಅರ್ಷದ್ ಖಾನ್, ಬೆಳಿಗ್ಗೆ 9:10 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದಾರೆ.
#BREAKING: Bomb blast reported near Peshawar Public School on Warsak Road in Peshawar, Pakistan. Seven people including children injured as per initial reports. TTP likely behind the attack. Yet another incident exposing Pakistan’s decades long policy of nurturing Snakes. pic.twitter.com/g75Ose19Tr
— Aditya Raj Kaul (@AdityaRajKaul) December 5, 2023
ಸ್ಫೋಟಕ್ಕೆ ಬಳಸಲಾದ ಸ್ಫೋಟಗಳು 4 ಕಿಲೋಗ್ರಾಂಗಳಷ್ಟು ತೂಕವಿದ್ದು, ರಸ್ತೆಬದಿಯಲ್ಲಿ ಹೂತಿಡಲಾಗಿತ್ತು ಎಂದು ಅವರು ಹೇಳಿದರು. ರಸ್ತೆ ಬದಿಯ ಸಿಮೆಂಟ್ ಬ್ಲಾಕ್‌ನಲ್ಲಿ ಸ್ಫೋಟಕಗಳನ್ನು ಬಚ್ಚಿಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಗುರಿಪಡಿಸಲಾಗಿದೆ ಎಂದು ಈಗ ಹೇಳಲು ಸಾಧ್ಯವಿಲ್ಲ. ಸ್ಫೋಟದ ತೀವ್ರತೆಗೆ ಎರಡು ವಾಹನಗಳ ಗಾಜು ಮತ್ತು ಹತ್ತಿರದ ಕಟ್ಟಡಗಳು ಪುಡಿಪುಡಿಯಾಗಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋಪಾಲಿಟನ್ ಮೇಯರ್ ಜುಬೈರ್ ಅಲಿ ಅವರು ಶಿಕ್ಷಣ ಸಂಸ್ಥೆಗಳ ಬಳಿ ನಡೆದ ಸ್ಫೋಟವನ್ನು “ದುರದೃಷ್ಟಕರ” ಎಂದು ಹೇಳಿದ್ದಾರೆ. ಇದು ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನವಾಗಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಈ ನವೆಂಬರ್‌ನ ಆರಂಭದಲ್ಲಿ, ಖೈಬರ್ ಪಖ್ತುಂಕ್ವಾದ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ನಡೆದ ಸ್ಫೋಟದಲ್ಲಿ ಐದು ಜನರು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಎಂದು ಪಾಕಿಸ್ತಾನ ಮೂಲದ ಡಾನ್ ವರದಿ ಮಾಡಿದೆ.
ಇದನ್ನೂ ಓದಿ: ಪಾಕಿಸ್ತಾನದ ಬೌದ್ಧ ಮಂದಿರದಲ್ಲಿ ಸಿಕ್ತು 2000 ವರ್ಷಗಳಷ್ಟು ಹಳೆಯ ನಿಧಿ! ಮುಂದೇನು?
ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್‌ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ (ಪಿಐಸಿಎಸ್‌ಎಸ್) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪಾಕಿಸ್ತಾನವು ನವೆಂಬರ್‌ನಲ್ಲಿ ರಾಜ್ಯ ವಿರೋಧಿ ಹಿಂಸಾಚಾರದಲ್ಲಿ ಶೇಕಡಾ 34 ರಷ್ಟು ಹೆಚ್ಚಳವನ್ನು ಕಂಡಿದೆ ಎಂದು ಡಾನ್ ವರದಿ ಮಾಡಿದೆ.
PICSS ಪ್ರಕಾರ, ಖೈಬರ್ ಪಖ್ತುಂಖ್ವಾ ಅತ್ಯಂತ ಪೀಡಿತ ಪ್ರಾಂತ್ಯವಾಗಿ ಹೊರಹೊಮ್ಮಿದೆ. ಇಲ್ಲಿ 51 ದಾಳಿಗಳು ನಡೆದಿದ್ದು, 54 ಜನರ ಜೀವವನ್ನು ಬಲಿ ತೆಗೆದುಕೊಂಡಿದೆ. ಈ ದಾಳಿಯಲ್ಲಿ 81 ಮಂದಿ ಗಾಯಗೊಂಡಿದ್ದಾರೆ ಎಂದು ಡಾನ್ ವರದಿ ಮಾಡಿತ್ತು. ಏತನ್ಮಧ್ಯೆ, ಬಲೂಚಿಸ್ತಾನ್ ಒಂಬತ್ತು ದಾಳಿಗಳನ್ನು ವರದಿ ಮಾಡಿದೆ. ಈ ದಾಳಿಗಳು 15 ಭದ್ರತಾ ಪಡೆಗಳ ಸಿಬ್ಬಂದಿ ಮತ್ತು ಮೂವರು ನಾಗರಿಕರು ಸೇರಿದಂತೆ 18 ಜನರ ಜೀವವನ್ನು ಬಲಿತೆಗೆದುಕೊಂಡಿತ್ತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ