ಪುರಾತನ ಬೆಳ್ಳಿಯಿಂದ ಮಾಡಿದ ರೈಲು ಮಾದರಿಯನ್ನು ಜೋ ಬೈಡನ್​ಗೆ ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಪ್ರವಾಸದಲ್ಲಿ ಸದ್ಯ ಅಮೆರಿಕದಲ್ಲಿದ್ದಾರೆ. ಅವರು ಸೆಪ್ಟೆಂಬರ್ 21 ರಂದು ಅಮೆರಿಕವನ್ನು ತಲುಪಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಾಯಿತು.

ಪುರಾತನ ಬೆಳ್ಳಿಯಿಂದ ಮಾಡಿದ ರೈಲು ಮಾದರಿಯನ್ನು ಜೋ ಬೈಡನ್​ಗೆ ಉಡುಗೊರೆಯಾಗಿ ನೀಡಿದ ಪ್ರಧಾನಿ ಮೋದಿ
ರೈಲು

Updated on: Sep 22, 2024 | 11:44 AM

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಪ್ರವಾಸದಲ್ಲಿ ಸದ್ಯ ಅಮೆರಿಕದಲ್ಲಿದ್ದಾರೆ. ಅವರು ಸೆಪ್ಟೆಂಬರ್ 21 ರಂದು ಅಮೆರಿಕವನ್ನು ತಲುಪಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಾಯಿತು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಪುರಾತನ ಬೆಳ್ಳಿಯಿಂದ ತಯಾರಿಸಿದ ರೈಲು ಮಾದರಿಯನ್ನು ಅಧ್ಯಕ್ಷ ಜೋ ಬೈಡನ್ ಅವರಿಗೆ ನೀಡಿದ್ದಾರೆ. ಪ್ರಥಮ ಮಹಿಳೆ ಜಿಲ್​ಗೆ ಪಶ್ಮಿನಾ ಶಾಲು ನೀಡಿದ್ದಾರೆ. ಈ ರೈಲಿನ ಮಾದರಿಯು 92.5 ಬೆಳ್ಳಿಯಿಂದ ಮಾಡಲ್ಪಟ್ಟಿದೆ.

ಈ ಮಾದರಿಯಲ್ಲಿ “ದೆಹಲಿ – ಡೆಲವೇರ್” ಎಂದು ಬರೆಯಲಾಗಿದೆ. ಇದಲ್ಲದೆ ಇಂಜಿನ್‌ನ ಬದಿಗಳಲ್ಲಿ ಭಾರತೀಯ ರೈಲ್ವೆ ಎಂದು ಬರೆಯಲಾಗಿದೆ. ಈ ಪೆಟ್ಟಿಗೆಗಳನ್ನು ಕೈಯಿಂದ ತಯಾರಿಸಲಾಗುತ್ತದೆ ಮತ್ತು ಕಾಗದ, ಅಂಟು ಮತ್ತು ನೈಸರ್ಗಿಕ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಪ್ರತಿ ಪೆಟ್ಟಿಗೆಯ ಮೇಲಿನ ಕಲಾಕೃತಿಗಳು ವಿಭಿನ್ನವಾಗಿದ್ದು, ಕಾಶ್ಮೀರಿ ಕಲೆಯನ್ನು ಪ್ರತಿಬಿಂಬಿಸುತ್ತದೆ.

ಮತ್ತಷ್ಟು ಓದಿ: Quad Summit 2024: ನಾವು ಯಾರ ವಿರುದ್ಧವೂ ಅಲ್ಲ, ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತು

ಪ್ರಧಾನಿ ಮೋದಿ ಅವರು ಅಮೆರಿಕದ ಪ್ರಥಮ ಮಹಿಳೆಗೆ ಪೇಪರ್ ಮ್ಯಾಚ್ ಬಾಕ್ಸ್‌ನಲ್ಲಿ ಪಶ್ಮಿನಾ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಸಾಧಾರಣ ಗುಣಮಟ್ಟದ ಮತ್ತು ಅನನ್ಯ ಸೌಂದರ್ಯದ ಪಶ್ಮಿನಾ ಶಾಲುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಸಿದ್ಧಪಡಿಸಲಾಗಿದೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಉನ್ನತ ನಾಯಕರು ಕ್ವಾಡ್ ಸಭೆಯಲ್ಲಿ ಭಾಗವಹಿಸಿದ್ದಾರೆ.

ಈ ಮೇರುಕೃತಿಯು ಕುಶಲಕರ್ಮಿಗಳ ಅಸಾಧಾರಣ ಕೌಶಲ್ಯಗಳನ್ನು ಎತ್ತಿ ತೋರಿಸುತ್ತದೆ ಮಾತ್ರವಲ್ಲದೆ ಭಾರತೀಯ ರೈಲ್ವೆಯ ಸುದೀರ್ಘ ಇತಿಹಾಸವನ್ನು ಹೇಳುತ್ತದೆ.

ಕ್ವಾಡ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅಧ್ಯಕ್ಷ ಜೋ ಬೈಡನ್ 297 ಪುರಾತನ ವಸ್ತುಗಳನ್ನು ಹಸ್ತಾಂತರಿಸಿದರು. 2014 ರಿಂದ ಭಾರತಕ್ಕೆ ಹಸ್ತಾಂತರಿಸಲಾದ ಪ್ರಾಚೀನ ವಸ್ತುಗಳ ಒಟ್ಟು ಸಂಖ್ಯೆ 640 ಕ್ಕೆ ಏರಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us