ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ನೂತನ ಮುಖ್ಯಸ್ಥನ ಹತ್ಯೆ?

|

Updated on: Oct 04, 2024 | 8:19 AM

ಇಸ್ರೇಲ್ ಕಳೆದ ವಾರ ವೈಮಾನಿಕ ದಾಳಿಯಲ್ಲಿ ಲೆಬನಾನಿನ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಂದಿದೆ. ಇದರ ನಂತರ, ಈಗ ಇಸ್ರೇಲ್ ಸೇನೆಯು ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿ ಹಾಶೆಂ ಸಫೆದ್ದೀನ್ ಅನ್ನು ಕೂಡ ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ನೂತನ ಮುಖ್ಯಸ್ಥನ ಹತ್ಯೆ?
ಹಾಶೆಂ
Image Credit source: Reuters
Follow us on

ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಹತ್ಯೆ ನಡೆದು ವಾರ ಕಳೆಯುವ ಮುನ್ನವೇ ನೂತನ ಮುಖ್ಯಸ್ಥ ಹಾಶೆಂ ಸೈಫೆದ್ದೀನ್​ನನ್ನು ಇಸ್ರೇಲ್​ ಹತ್ಯೆ ಮಾಡಿದೆ. ಇರಾನ್​ನ ಬೈರುತ್​ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಶೆಮ್ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಕೇಳಿಬಂದಿದೆ. 35 ವರ್ಷಗಳಿಗೂ ಹೆಚ್ಚು ಕಾಲ ಹಿಜ್ಬುಲ್ಲಾದ ಮುಖ್ಯಸ್ಥರಾಗಿದ್ದ ಹಸನ್ ನಸ್ರಲ್ಲಾ ಅವರ ಸಾವಿನ ನಂತರ ಹಶೆಮ್ ಸೈಫೆದ್ದೀನ್ ಹಿಜ್ಬುಲ್ಲಾದ ಉತ್ತರಾಧಿಕಾರಿಯಾಗಿದ್ದರು.

ಎರಡು ಇಸ್ರೇಲಿ ಮೂಲಗಳನ್ನು ಉಲ್ಲೇಖಿಸಿ ಆಕ್ಸಿಯೋಸ್‌ನ ಬರಾಕ್ ರವಿದ್, ಸೈಫೆದ್ದೀನ್ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ. ಆದರೆ, ಇಸ್ರೇಲ್ ಸೇನೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಶೆಂ ಸೈಫೆದ್ದೀನ್​ ಯಾರು?
ಲೆಬನಾನ್ ಕೂಡ ಹೆಜ್ಬೊಲ್ಲಾದ ಹೊಸ ಮುಖ್ಯಸ್ಥನ ಹತ್ಯೆಯನ್ನು ದೃಢಪಡಿಸಿಲ್ಲ. ಗುರುವಾರ ರಾತ್ರಿ ಬೈರುತ್‌ನಲ್ಲಿ ಇಸ್ರೇಲ್ ಭಾರಿ ಬಾಂಬ್ ದಾಳಿ ನಡೆಸಿತು. ಗುರುವಾರ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಸೈಫಿದ್ದೀನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಇಸ್ರೇಲ್ ಹಸನ್ ನಸ್ರಲ್ಲಾ ಅವರನ್ನು ಈ ರೀತಿ ಬಾಂಬ್ ಸ್ಫೋಟಿಸಿ ಕೊಂದಿತ್ತು.
2017ರಲ್ಲಿ ಹಶೆಂ ಸೈಫೆದ್ದೀನ್​ನನ್ನು ಅಮೆರಿಕ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು.

ಮತ್ತಷ್ಟು ಓದಿ: ಇಸ್ರೇಲ್​ನಿಂದ ಸಿರಿಯಾ ಮೇಲೆ ವೈಮಾನಿಕ ದಾಳಿ, ಹಿಜ್ಬುಲ್ಲಾ ಮಾಜಿ ಮುಖ್ಯಸ್ಥ ನಸ್ರಲ್ಲಾ ಅಳಿಯ ಸೇರಿ 3 ಮಂದಿ ಸಾವು

ಹಶೇಂ ಹಿಜ್ಬುಲ್ಲಾ ಅವರ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಜಿಹಾದ್ ಕೌನ್ಸಿಲ್‌ನ ಪ್ರಮುಖ ಸದಸ್ಯರಾಗಿದ್ದರು.
ಇನ್ನೊಬ್ಬ ಹಿರಿಯ ಹಿಜ್ಬುಲ್ಲಾ ನಾಯಕ ಮೊಹಮ್ಮದ್ ಅನಿಸಿ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಅನಿಸಿ ಹಿಜ್ಬುಲ್ಲಾದ ಕ್ಷಿಪಣಿಗಳ ಉಸ್ತುವಾರಿ ವಹಿಸಿದ್ದ.

ಬೈರುತ್‌ನ ದಕ್ಷಿಣ ಪ್ರದೇಶದಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದೆ, ಅನೇಕ ಜನರು ಸಾವನ್ನಪ್ಪಿದ್ದಾರೆ. ಇರಾಕ್‌ನ ನಜಾಫ್ ಮತ್ತು ಇರಾನ್‌ನ ಕುಮ್ ಧಾರ್ಮಿಕ ಕೇಂದ್ರಗಳಲ್ಲಿ ಶಿಕ್ಷಣ ಪಡೆದ ಸೈಫೆದ್ದೀನ್, 1994 ರಲ್ಲಿ ಲೆಬನಾನ್‌ಗೆ ಮರಳಿದರು ಮತ್ತು ಶೀಘ್ರವಾಗಿ ಹಿಜ್ಬುಲ್ಲಾದ ಶ್ರೇಣಿಯಲ್ಲಿ ಉನ್ನತ ಸ್ಥಾನಕ್ಕೆ ಏರಿದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ