ಕಲಬುರಗಿ: ಚಿಂಚೋಳಿಯಲ್ಲಿ ವೃದ್ಧೆಯೊಬ್ಬಳನ್ನು ಮಕ್ಕಳ ಕಳ್ಳಿ ಅಂತ ಭಾವಿಸಿ ಥಳಿತ!
ಪೋಲಕಹಳ್ಳಿ ಗ್ರಾಮದಲ್ಲಿ ತೆಲಂಗಾಣದಿಂದ ತನ್ನ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ ಒಬ್ಬ ವೃದ್ಧೆಯನ್ನು ಜನ ಮಕ್ಕಳ ಕಳ್ಳಿ ಅಂತ ಭಾವಿಸಿ ಥಳಿಸಿದ್ದಾರೆ. ಆಕೆಯೊಂದಿಗಿರುವ ಇನ್ನೊಬ್ಬ ಮಹಿಳೆ ನಾವು ಕಳ್ಳರಲ್ಲ ಅಂತ ಗೋಗರೆಯುತ್ತಿದ್ದರೂ ಜನ ನಂಬಿಲ್ಲ.
ಕಲಬುರಗಿ: ಜನ ಯಾರೇ ಆಗಿರಲಿ, ಕಾನೂನನ್ನು ತಮ್ಮ ಕೈಗೆತ್ತಿಕೊಂಡರೆ ಆಗೋದು ಅನಾಹುತಗಳೇ ಬೇರೇನೂ ಅಲ್ಲ. ಕಲಬುರಗಿಯ (Kalaburagi) ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲ್ಲೂಕು ಎಂದೇ ಗುರುತಿಸಿಕೊಂಡಿರುವ ಚಿಂಚೋಳಿಯಲ್ಲಿ (Chincholli) ಮಕ್ಕಳರನ್ನು ಕದ್ದೊಯ್ಯುವ ಭೀತಿ ಹೆಚ್ಚಾಗಿದೆ. ಈ ಅತಂಕದಲ್ಲಿರುವ ತಾಲ್ಲೂಕಿನ ಪೋಲಕಹಳ್ಳಿ ಗ್ರಾಮದಲ್ಲಿ ತೆಲಂಗಾಣದಿಂದ (Telangana) ತನ್ನ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ ಒಬ್ಬ ವೃದ್ಧೆಯನ್ನು ಜನ ಮಕ್ಕಳ ಕಳ್ಳಿ (child-lifter) ಅಂತ ಭಾವಿಸಿ ಥಳಿಸಿದ್ದಾರೆ. ಆಕೆಯೊಂದಿಗಿರುವ ಇನ್ನೊಬ್ಬ ಮಹಿಳೆ ನಾವು ಕಳ್ಳರಲ್ಲ ಅಂತ ಗೋಗರೆಯುತ್ತಿದ್ದರೂ ಜನ ನಂಬಿಲ್ಲ. ಅಂತಿಮವಾಗಿ ಆಕೆಯನ್ನು ತನ್ನೂರಿಗೆ ಕಳಿಸಲಾಯಿತು.
Loading...
Unable to load recommendations.
Follow Us
