ಪೋರ್ಚುಗಲ್​ನ ಈ ಪಟ್ಟಣದ ರಸ್ತೆಗಳಲ್ಲಿ ನದಿಯಂತೆ ಹರಿದ ರೆಡ್​ವೈನ್

|

Updated on: Sep 12, 2023 | 8:48 AM

ಪೋರ್ಚುಗಲ್​ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದ ರಸ್ತೆಗಳಲ್ಲಿ ರೆಡ್​ ವೈನ್​ನ ಹೊಳೆಯೇ ಹರಿದಿದೆ. ಸ್ಥಳೀಯರು ಮೊದಲು ಪ್ರವಾಹ ಬಂತೆಂದು ಭಯ ಪಟ್ಟಿದ್ದರು, ಆ ರೀತಿ ಇಡೀ ರಸ್ತೆಗಳೆಲ್ಲಾ ನದಿಯಂತೆ ರೆಡ್​ವೈನ್ ತುಂಬಿಕೊಂಡಿತ್ತು. ಆದರೆ ಅಲ್ಲಿ ಆಗಿದ್ದೇ ವೇರೆ. 600,000 ಗ್ಯಾಲನ್​ಗಳಷ್ಟು ಅಂದರೆ 2.2 ಮಿಲಿಯ್ ಲೀಟರ್​ನಷ್ಟು ರೆಡ್ ವೈನ್​ಗಳನ್ನು ಸಾಗಿಸುತ್ತಿದ್ದ ಬ್ಯಾರೆಲ್​ಗಳು ಕುಸಿದುಬಿದ್ದಿತ್ತು.

ಪೋರ್ಚುಗಲ್​ನ ಈ ಪಟ್ಟಣದ ರಸ್ತೆಗಳಲ್ಲಿ ನದಿಯಂತೆ ಹರಿದ ರೆಡ್​ವೈನ್
ರೆಡ್​ ವೈನ್
Follow us on

ಪೋರ್ಚುಗಲ್​ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದ ರಸ್ತೆಗಳಲ್ಲಿ ರೆಡ್​ ವೈನ್​ನ ಹೊಳೆಯೇ ಹರಿದಿದೆ. ಸ್ಥಳೀಯರು ಮೊದಲು ಪ್ರವಾಹ ಬಂತೆಂದು ಭಯ ಪಟ್ಟಿದ್ದರು, ಆ ರೀತಿ ಇಡೀ ರಸ್ತೆಗಳೆಲ್ಲಾ ನದಿಯಂತೆ ರೆಡ್​ವೈನ್ ತುಂಬಿಕೊಂಡಿತ್ತು. ಆದರೆ ಅಲ್ಲಿ ಆಗಿದ್ದೇ ವೇರೆ.
600,000 ಗ್ಯಾಲನ್​ಗಳಷ್ಟು ಅಂದರೆ 2.2 ಮಿಲಿಯ್ ಲೀಟರ್​ನಷ್ಟು ರೆಡ್ ವೈನ್​ಗಳನ್ನು ಸಾಗಿಸುತ್ತಿದ್ದ ಬ್ಯಾರೆಲ್​ಗಳು ಕುಸಿದುಬಿದ್ದಿತ್ತು.

ಕೆಲವೇ ಕೆಲವು ನಿಮಿಷಗಳಲ್ಲಿ ಈ ಸುದ್ದಿ ವೈರಲ್ ಆಗಿತ್ತು. ಕೇವಲ 2 ಸಾವಿರ ಜನರನ್ನು ಹೊಂದಿರುವ ಬೈರೋ ಪಟ್ಟಣದಲ್ಲಿ ಜನರಿಗಿಂತಲೂ ವೈನ್ ಪ್ರಮಾಣ ಹೆಚ್ಚಿತ್ತು.

ಮತ್ತಷ್ಟು ಓದಿ:Bihar: ನಕಲಿ ಮದ್ಯ ಸೇವನೆ, ಬಿಹಾರದಲ್ಲಿ 22 ಮಂದಿ ಸಾವು

ಸ್ವಲ್ಪ ಎತ್ತರ ಪ್ರದೇಶದಿಂದ ಕೆಳಗಿನ ಪ್ರದೇಶಕ್ಕೆ ರೆಡ್ ವೈನ್ ನೀರಿನಂತೆ ಹರಿಯುವುದನ್ನು ನೀವು ಕಾಣಬಹುದು. ಮನೆಯೊಂದರ ನೆಲ ಮಾಳಿಗೆಗೂ ವೈನ್ ನುಗ್ಗಿದೆ. ಸೆರ್ಟಿಮಾ ನದಿ ವೈನ್ ನದಿಯಾಗಿ ಪರಿವರ್ತನೆಗೊಳ್ಳುವ ಮೊದಲು ಅಗ್ನಿಶಾಮಕ ಇಲಾಖೆ ಕ್ರಮ ಕೈಗೊಂಡಿತ್ತು. ವೈನ್​ ಅನ್ನು ಬೇರೆ ಪ್ರದೇಶಕ್ಕೆ ಹರಿಯುವಂತೆ ಮಾಡಿತ್ತು.

ಈ ಘಟನೆಗಾಗಿ ಲೆವಿರಾ ಡಿಸ್ಟಿಲರಿ ಜನರ ಕ್ಷಮೆಯಾಚಿಸಿದೆ. ನಾವು ಈ ಪ್ರದೇಶವನ್ನು ಸ್ವಚ್ಛಗೊಳಿಸುವ , ಹಾನಿಯನ್ನು ಸರಿಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಲೆವಿರಾ ತಿಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:48 am, Tue, 12 September 23