ಇದು ನಿಮ್ಮ ಕರ್ಮದ ಫಲ, ಜಗತ್ತನ್ನು ದೂಷಿಸಬೇಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಜೈಶಂಕರ್

|

Updated on: Sep 29, 2024 | 9:19 AM

ಇದು ನಿಮ್ಮ ಕರ್ಮದ ಫಲ, ಜಗತ್ತನ್ನು ದೂಷಿಸಬೇಡಿ ಎಂದು ವಿದೇಶಾಂಗ ಸಚಿವ ಎಚ್​ ಜೈಶಂಕರ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದು ನಿಮ್ಮ ಕರ್ಮದ ಫಲ, ಜಗತ್ತನ್ನು ದೂಷಿಸಬೇಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಜೈಶಂಕರ್
ಜೈಶಂಕರ್
Image Credit source: PTI
Follow us on

ಇದು ನಿಮ್ಮ ಕರ್ಮದ ಫಲ, ಜಗತ್ತನ್ನು ದೂಷಿಸಬೇಡಿ ಎಂದು ವಿದೇಶಾಂಗ ಸಚಿವ ಎಚ್​ ಜೈಶಂಕರ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಾಕಿಸ್ತಾನದ ಜಿಡಿಪಿಯನ್ನು ಮೂಲಭೂತವಾದ ಮತ್ತು ಭಯೋತ್ಪಾದನೆಯನ್ನು ಹರಡುವ ದೃಷ್ಟಿಯಿಂದ ಮಾತ್ರ ಅಳೆಯಬಹುದು, ಇದಕ್ಕಾಗಿ ಅವರು ಜಗತ್ತನ್ನು ದೂಷಿಸಲು ಸಾಧ್ಯವಿಲ್ಲ, ಅದು ಅವರ ಕರ್ಮ ಎಂದರು. ಕೆಲವು ದೇಶಗಳು ನಮ್ಮ ನಿಯಂತ್ರಣದಲ್ಲಿಲ್ಲ, ಇನ್ನೂ ಕೆಲವು ದೇಶಗಳು ಉದ್ದೇಶಪೂರ್ವಕವಾಗಿಯೇ ಹಾನಿಕಾರಕ ಪರಿಣಾಮವನ್ನು ಉಂಟುಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ, ಇದಕ್ಕೆ ಪಾಕಿಸ್ತಾನವೇ ದೊಡ್ಡ ಉದಾಹರಣೆ.

ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯ ನೀತಿಯು ಎಂದಿಗೂ ಯಶಸ್ವಿಯಾಗುವುದಿಲ್ಲ, 1947 ರಲ್ಲಿ ರಚನೆಯಾದಾಗಿನಿಂದ ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನವು ತನ್ನ ಪ್ರಜ್ಞಾಪೂರ್ವಕ ಆಯ್ಕೆಗಳಿಂದಾಗಿಯೇ ಹಿಂದುಳಿದಿದೆ ಎಂದರು.

ಮತ್ತಷ್ಟು ಓದಿ: ಗಾಜಾದಲ್ಲಿನ ಪರಿಸ್ಥಿತಿ ಅತ್ಯಂತ ಕಳವಳಕಾರಿ, ಕದನ ವಿರಾಮಕ್ಕೆ ಭಾರತ ಬೆಂಬಲ: ಜೈಶಂಕರ್

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಪ್ಯಾಲೆಸ್ತೀನ್‌ನೊಂದಿಗೆ ಹೋಲಿಸಿದ್ದಾರೆ ಮತ್ತು ಜನರು ತಮ್ಮ ಸ್ವಾತಂತ್ರ್ಯ ಮತ್ತು ಸ್ವ-ನಿರ್ಣಯದ ಹಕ್ಕಿಗಾಗಿ ಶತಮಾನದಿಂದ ಹೋರಾಡಿದ್ದಾರೆ ಎಂದು ಹೇಳಿದ್ದರು. ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಇಚ್ಛೆಗೆ ಅನುಗುಣವಾಗಿ ಮಾತುಕತೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

ಪರಸ್ಪರ ವ್ಯೂಹಾತ್ಮಕ ಸಂಯಮದ ವ್ಯವಸ್ಥೆಗಾಗಿ ಪಾಕಿಸ್ತಾನದ ಪ್ರಸ್ತಾವನೆಯನ್ನು ಭಾರತ ತಿರಸ್ಕರಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿಕೊಂಡರು, ಭಾರತೀಯ ನಾಯಕತ್ವವು “ಆಜಾದ್ ಕಾಶ್ಮೀರ” ಎಂದು ಕರೆಯುವ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಲು ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದರು.

ಶೆಹಬಾಜ್ ಷರೀಫ್ ಅವರ ಹೇಳಿಕೆಯನ್ನು ಭಾರತ ತೀವ್ರವಾಗಿ ಟೀಕಿಸಿದೆ. ಭಾರತೀಯ ರಾಯಭಾರಿ ಭಾವಿಕಾ ಮಂಗಳಾನಂದನ್, ಜಗತ್ತಿಗೆ ತಿಳಿದಿರುವಂತೆ, ಪಾಕಿಸ್ತಾನವು ತನ್ನ ನೆರೆಹೊರೆಯವರ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ಹೇಳಿದರು ಅಂತಹ ದೇಶವು ಎಲ್ಲಿಯಾದರೂ ಹಿಂಸೆಯ ಬಗ್ಗೆ ಮಾತನಾಡುವುದು ಬೂಟಾಟಿಕೆಯಾಗಿದೆ ಎಂದು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ