ತನ್ನ ‘ಕಾಲು’ಗಳ ಮೇಲೆ ತಾನೇ ನಡೆದುಬಂದ 85 ವರ್ಷದ ಹಳೆ ಚೀನಾ ಶಾಲೆ.. ಇದು ಹೇಗೆ ಸಾಧ್ಯ?

|

Updated on: Oct 30, 2020 | 6:38 PM

ಇಡೀ ಜಗತ್ತು ಚೀನಾದಿಂದ ಬಂದ ಕೊರೊನಾ ವೈರಸ್​ನ ಕರಿಛಾಯೆಯಲ್ಲಿ ಆವರಿಸಿಹೋಗಿದೆ. ಕಮ್ಯೂನಿಸ್ಟ್​ ರಾಷ್ಟ್ರದ ಈ ಕೆಟ್ಟ ‘ಗಿಫ್ಟ್​’ನಿಂದ ಚೀನಾ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಇದೆಲ್ಲದರ ನಡುವೆಯೂ ಚೀನಾದ ತಾಂತ್ರಿಕ ಸಾಮರ್ಥ್ಯ ಹಾಗೂ ವೈಜ್ಞಾನಿಕ ಸಾಧನೆಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದಕ್ಕೆ ತಕ್ಕ ಹಾಗೆ, ಸರಿಸುಮಾರು 85 ವರ್ಷದ ಹಳೇ ಶಾಲಾ ಕಟ್ಟಡವೊಂದನ್ನು ಚೀನಾ ನಿರ್ಮಾಣ ತಜ್ಞರು ರೋಬೋಟಿಕ್​ ಕಾಲುಗಳ ಮುಖಾಂತರ ಕಟ್ಟಡಕ್ಕೆ ಯಾವುದೇ ಹಾನಿಯಾದಗಂತೆ ಬೇರೊಂದು ಜಾಗಕ್ಕೆ ಸ್ಥಳಾಂತರಗೊಳಿಸಿದ್ದಾರೆ. ಹೌದು, 1935ರಲ್ಲಿ ನಿರ್ಮಿಸಲಾದ ಚೀನಾದ ಶಾಂಘೈನಲ್ಲಿರುವ ಲಗೇನಾ […]

ತನ್ನ ‘ಕಾಲು’ಗಳ ಮೇಲೆ ತಾನೇ ನಡೆದುಬಂದ 85 ವರ್ಷದ ಹಳೆ ಚೀನಾ ಶಾಲೆ.. ಇದು ಹೇಗೆ ಸಾಧ್ಯ?
Follow us on

ಇಡೀ ಜಗತ್ತು ಚೀನಾದಿಂದ ಬಂದ ಕೊರೊನಾ ವೈರಸ್​ನ ಕರಿಛಾಯೆಯಲ್ಲಿ ಆವರಿಸಿಹೋಗಿದೆ. ಕಮ್ಯೂನಿಸ್ಟ್​ ರಾಷ್ಟ್ರದ ಈ ಕೆಟ್ಟ ‘ಗಿಫ್ಟ್​’ನಿಂದ ಚೀನಾ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಇದೆಲ್ಲದರ ನಡುವೆಯೂ ಚೀನಾದ ತಾಂತ್ರಿಕ ಸಾಮರ್ಥ್ಯ ಹಾಗೂ ವೈಜ್ಞಾನಿಕ ಸಾಧನೆಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಇದಕ್ಕೆ ತಕ್ಕ ಹಾಗೆ, ಸರಿಸುಮಾರು 85 ವರ್ಷದ ಹಳೇ ಶಾಲಾ ಕಟ್ಟಡವೊಂದನ್ನು ಚೀನಾ ನಿರ್ಮಾಣ ತಜ್ಞರು ರೋಬೋಟಿಕ್​ ಕಾಲುಗಳ ಮುಖಾಂತರ ಕಟ್ಟಡಕ್ಕೆ ಯಾವುದೇ ಹಾನಿಯಾದಗಂತೆ ಬೇರೊಂದು ಜಾಗಕ್ಕೆ ಸ್ಥಳಾಂತರಗೊಳಿಸಿದ್ದಾರೆ.

ಹೌದು, 1935ರಲ್ಲಿ ನಿರ್ಮಿಸಲಾದ ಚೀನಾದ ಶಾಂಘೈನಲ್ಲಿರುವ ಲಗೇನಾ ಪ್ರಾಥಮಿಕ ಶಾಲೆಯ ಜಾಗದಲ್ಲಿ ನೂತನ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ, ಅದರ ಸಲುವಾಗಿ ಇಷ್ಟು ಪುರಾತನ ಶಾಲಾ ಕಟ್ಟಡವನ್ನು ನೆಲಸಮ ಮಾಡುವುದು ಸೂಕ್ತವಲ್ಲ ಎಂದು ನಿರ್ಧರಿಸಿದ ನಗರದ ಅಧಿಕಾರಿಗಳು ಅದನ್ನು ಸ್ಥಳಾಂತರಗೊಳಿಸುವ ನಿರ್ಧಾರಕ್ಕೆ ಮುಂದಾದರು.

ಅಂತೆಯೇ, ಕಾರ್ಮಿಕರು ಕಟ್ಟಡದ ಸುತ್ತ ಗುಂಡಿ ತೋಡಿ 198 ವಿಶೇಷ ರೋಬೋಟಿಕ್​ ಕಾಲುಗಳನ್ನು ಬಿಲ್ಡಿಂಗ್​ ಕೆಳಗಡೆ ಅಳವಡಿಸಿದರು. ವಾಕಿಂಗ್​ ಟೆಕ್ನಾಲಜಿ ಎಂಬ ವಿಶೇಷ ತಂತ್ರಜ್ಞಾನವನ್ನು ಒಳಗೊಂಡ ಇದರಲ್ಲಿ ಕೆಲ ರೋಬೋಟಿಕ್​ ಕಾಲುಗಳಿಗೆ ಗಾಲಿಯನ್ನು ಸಹ ಅಳವಡಿಸಿ ಅದರ ಮುಖಾಂತರ 7,600 ಟನ್​ ಕಟ್ಟಡವನ್ನು ಸ್ಥಳಾಂತರಗೊಳಿಸಿದ್ದಾರೆ. ಕಟ್ಟಡದ ಸ್ಥಳಾಂತರ ಕಾರ್ಯವನ್ನು ಕಂಡ ಜನರು ಶಾಲೆಯೇ ತನ್ನ ಕಾಲುಗಳ ಮೇಲೆ ನಡೆದಾಡುತ್ತಿದೆ ಎಂಬಂತೆ ಕಂಡುಬಂತು. ಅಂದ ಹಾಗೆ, ಈ ತಂತ್ರಜ್ಞಾನವನ್ನು ಬಳಸಿದ ಚೀನಾ ತಜ್ಞರು ಇಡೀ ಶಾಲೆಯನ್ನು ಕೇವಲ 18 ದಿನಗಳಲ್ಲಿ ಸ್ಥಳಾಂತರ ಮಾಡಿದ್ದಾರೆ.

Published On - 6:34 pm, Fri, 30 October 20