Delhi Chalo | ಅಮೆರಿಕದ ಇನ್ನೂ ಏಳು ಸಂಸದರಿಂದ ಬೆಂಬಲ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 25, 2020 | 12:46 PM

ಭಾರತದ ಜೊತೆಗಿನ ಮಾತುಕತೆಯಲ್ಲಿ ದೆಹಲಿ ಚಲೋ ಚಳವಳಿಯನ್ನು ಪ್ರಸ್ತಾಪಿಸುವಂತೆ ಪತ್ರ ಬರೆದವರಲ್ಲಿ ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ್ ಸಹ ಇದ್ದಾರೆ.

Delhi Chalo | ಅಮೆರಿಕದ ಇನ್ನೂ ಏಳು ಸಂಸದರಿಂದ ಬೆಂಬಲ
ಘಾಜಿಪುರ ಗಡಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ನಿರತನಾಗಿರುವ ಸಿಖ್ ಸಮುದಾಯದ ವ್ಯಕ್ತಿ
Follow us on

ವಾಷಿಂಗ್ಟನ್: ಪಂಜಾಬ್ ರೈತರ ಚಳವಳಿ ಬೆಂಬಲಿಸಿ ಅಮೆರಿಕದ 7 ಸಂಸದರು ವಿದೇಶಾಂಗ ವ್ಯವಹಾರಗಳ ವಿಭಾಗದ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರಿಗೆ ಪತ್ರ ಬರೆದಿದ್ದಾರೆ. ಭಾರತದ ಜೊತೆಗಿನ ಮಾತುಕತೆಯಲ್ಲಿ ದೆಹಲಿ ಚಲೋ ಚಳವಳಿಯನ್ನು ಪ್ರಸ್ತಾಪಿಸುವಂತೆ ಪತ್ರ ಬರೆದವರಲ್ಲಿ ಭಾರತೀಯ ಮೂಲದ ಸಂಸದೆ ಪ್ರಮೀಳಾ ಜಯಪಾಲ್ ಸಹ ಇದ್ದಾರೆ.

ಭಾರತದ ಮೂಲದ ಅಮೇರಿಕನ್ನರು ಭಾರತದಲ್ಲಿರುವ ತಮ್ಮ ಕುಟುಂಬಸ್ಥರ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಪಂಜಾಬ್​​ನಲ್ಲೇ ಎಷ್ಟೋ ಜನರ ಕುಟುಂಬ ವಾಸವಿದೆ. ಇವರ ಕುಟುಂಬದ ಬಗ್ಗೆ ಕಾಳಜಿ ವಹಿಸುವುದು ಸರ್ಕಾರದ ಹೊಣೆ. ಚಳವಳಿ ನಿರತ ರೈತರ ಉದ್ದೇಶಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಈ ಕುರಿತು ಭಾರತ ಸರ್ಕಾರದ ಜೊತೆಗಿನ ಮಾತುಕತೆಯಲ್ಲಿ ಪ್ರಸ್ತಾಪಿಸುವಂತೆ ಸಂಸದರು ಬರೆದ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಸಂಸದರಾದ ಡೊನಾಲ್ಡ್ದ್ ನೊರ್​ಕ್ರೋಸ್, ಬ್ರೆಂಡನ್ ಎಫ್ ಬೋಯ್ಲ್, ಬ್ರಿಯಾನ್ ಫಿಟ್ಜ್​ಪಾಟ್ರಿಕ್, ಮಾರಿ ಗೇ ಸ್ಕಾನ್ಲೋನ್, ಡೆಬ್ಬೀ ಡಿಂಜೆಲ್ ಮತ್ತು ಡೇವಿಡ್ ಟ್ರೋನ್ ಮುಂತಾದವರು ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ಮೂಲಕ ಕೆಲ ವಾರಗಳಿಂದ ಪಂಜಾಬ್ ರೈತರ ಚಳವಳಿ ಕುರಿತು ಪ್ರತಿಕ್ರಿಯಿಸದ ಸಂಸದರ ಸಂಖ್ಯೆ ಒಂದು ಡಜನ್ ಮೀರಿದೆ.

ಡೆಮಾಕ್ರಟಿಕ್ ಸಂಸದ ಡೇವಿಡ್ ಟ್ರೋನ್, ಚಳವಳಿ ನಿರತ ರೈತರಿಗೆ ರಕ್ಷಣೆ ಒದಗಿಸುವ ಹೊಣೆಯನ್ನು ಭಾರತ ಸರ್ಕಾರ ಹೋರಬೇಕಿತ್ತು. ಅಲ್ಲದೇ, ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೆಹಲಿ ಚಲೋ ಚಳವಳಿ ಡಿಸೆಂಬರ್ 25ರಂದು 30ನೇ ದಿನ ಪ್ರವೇಶಿಸಿದೆ.