ಪಾಕಿಸ್ತಾನದಲ್ಲಿ ಕೊವಿಡ್ 2ನೇ ಅಲೆ ನವೆಂಬರ್ನಲ್ಲಿ ಆರಂಭವಾಗಿದೆ. ಕಳೆದ 24 ಗಂಟೆಯಲ್ಲಿ 111 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದು, 2ನೇ ಅಲೆ ಆರಂಭವಾದ ಮೇಲೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸಾವಿನ ಸಂಖ್ಯೆ ಇದಾಗಿದೆ ಎಂದು ಪಾಕ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ನವೆಂಬರ್ನಲ್ಲಿ ಕೊವಿಡ್ 2ನೇ ಅಲೆ ಆರಂಭವಾದ ನಂತರ ಡಿಸೆಂಬರ್ 15ರಂದು ಒಂದೇ ದಿನ 105 ಜನ ಸೋಂಕಿತರು ಮೃತಪಟ್ಟಿದ್ದು ಗರಿಷ್ಠ ಸಾವಿನ ಪ್ರಮಾಣವಾಗಿತ್ತು. ಆದರೆ, ಈಗ 111 ಜನ ಸಾವಿಗೀಡಾಗುವ ಮೂಲಕ ಕೊರೊನಾ ಅಟ್ಟಹಾಸ ಮುಂದುವರೆಯುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಮೊದಲ ಅಲೆಗೆ ಜೂನ್ 20ರಂದು 24 ಗಂಟೆ ಅವಧಿಯಲ್ಲಿ 153 ಜನ ಮೃತಪಟ್ಟಿದ್ದರು. ಇದು ಪಾಕಿಸ್ತಾನದಲ್ಲಿ ಇದುವರೆಗೆ ಕೊರೊನಾ ಸೋಂಕಿಗೆ ಒಂದು ದಿನದಲ್ಲಿ ಮೃತಪಟ್ಟವರ ಗರಿಷ್ಠ ಸಂಖ್ಯೆಯಾಗಿದೆ. ಸದ್ಯ ಪಾಕಿಸ್ತಾನದ ಕೊರೊನಾ ಸೋಂಕಿತರ ಸಂಖ್ಯೆ 4,65,070 ಕ್ಕೆ ತಲುಪಿದ್ದು ಆ ಪೈಕಿ 4,17,134 ಜನ ಗುಣಮುಖರಾಗಿದ್ದಾರೆ.
ಪಾಕಿಸ್ತಾನದಲ್ಲಿ ಪ್ರಸ್ತುತ 38,268 ಸಕ್ರಿಯ ಪ್ರಕರಣಗಳಿದ್ದು, 2,361 ಜನ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ ಒಟ್ಟು 9,668 ಜನ ಕೊರೊನಾ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪಾಕಿಸ್ತಾನದ ಡ್ರೋನ್ ರವಾನಿಸಿದ್ದ 11 ಗ್ರೆನೇಡ್ ಪಂಜಾಬ್ನಲ್ಲಿ ಪತ್ತೆ