IPL 2026: ಮೊದಲು ಹರಾಜಾಗಲಿರುವ 6 ಆಟಗಾರರು ಇವರೇ..!
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (ಐಪಿಎಲ್ 2026) ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ಜರುಗಲಿರುವ ಈ ಹರಾಜಿನಲ್ಲಿ 359 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ಗರಿಷ್ಠ 77 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಏಕೆಂದರೆ 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿಯಿದ್ದು, ಈ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.
Updated on: Dec 15, 2025 | 11:03 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜಿಗಾಗಿ ಕೌಂಟ್ ಡೌನ್ ಶುರುವಾಗಿದೆ. ಮಂಗಳವಾರ (ಡಿ.16) ನಡೆಯಲಿರುವ ಹರಾಜಿನಲ್ಲಿ 359 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ 359 ಆಟಗಾರರಲ್ಲಿ 6 ಮಂದಿಗಾಗಿ ಮೊದಲ ಸುತ್ತಿನಲ್ಲಿ ಬಿಡ್ಡಿಂಗ್ ನಡೆಯಲಿದೆ. ಅದರಂತೆ ಮೊದಲ ಸೆಟ್ನಲ್ಲಿ ಕಾಣಿಸಿಕೊಳ್ಳಲಿರುವ 6 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಡೆವೊನ್ ಕಾನ್ವೆ: ನ್ಯೂಝಿಲೆಂಡ್ ತಂಡದ ಎಡಗೈ ದಾಂಡಿಗ ಡೆವೊನ್ ಕಾನ್ವೆ ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಇದಾಗ್ಯೂ ಅವರನ್ನು ಈ ಬಾರಿ ಸಿಎಸ್ಕೆ ರಿಟೈನ್ ಮಾಡಿಕೊಂಡಿಲ್ಲ. ಅದರಂತೆ ಇದೀಗ 2 ಕೋಟಿ ರೂ. ಮೂಲ ಬೆಲೆ ಘೋಷಿರುವ ಕಾನ್ವೆ ಮೊದಲ ಸುತ್ತಿನಲ್ಲೇ ಹರಾಜಾಗಲಿದ್ದಾರೆ.

ಜೇಕ್ ಫ್ರೇಸರ್ ಮೆಕ್ಗುರ್ಕ್: ಆಸ್ಟ್ರೇಲಿಯಾದ ಯುವ ಸ್ಫೋಟಕ ದಾಂಡಿಗ ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ ಡಿಸಿ ಬಳಗದಿಂದ ರಿಲೀಸ್ ಆಗಿರುವ ಜೇಕ್ ಫ್ರೇಸರ್ ಮೆಕ್ಗುರ್ಕ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದು, ಮೊದಲ ಸೆಟ್ನಲ್ಲೇ ಯುವ ದಾಂಡಿಗನಿಗಾಗಿ ಬಿಡ್ಡಿಂಗ್ ನಡೆಯಲಿದೆ.

ಕ್ಯಾಮರೋನ್ ಗ್ರೀನ್: ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್ನೆಸ್ ಸಮಸ್ಯೆಯ ಕಾರಣ ಕಳೆದ ಸೀಸನ್ನಿಂದ ಹೊರಗುಳಿದಿದ್ದ ಗ್ರೀನ್ ಅವರ ಖರೀದಿಗೆ ಮೊದಲ ಸುತ್ತಿನಲ್ಲೇ ಭರ್ಜರಿ ಪೈಪೋಟಿ ಕಂಡು ಬರಲಿದೆ.

ಸರ್ಫರಾಝ್ ಖಾನ್: ಭಾರತದ ಬಲಗೈ ದಾಂಡಿಗ ಸರ್ಫರಾಝ್ ಖಾನ್ ಕಳೆದ ಸೀಸನ್ನಲ್ಲಿ ಅನ್ಸೋಲ್ಡ್ ಆಗಿದ್ದರು. ಆದರೆ ಈ ಬಾರಿ ಮೊದಲ ಸುತ್ತಿನಲ್ಲೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ 75 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ ಸರ್ಫರಾಝ್ಗಾಗಿ ಮೊದಲ ಸುತ್ತಿನಲ್ಲೇ ಬಿಡ್ಡಿಂಗ್ ನಡೆಯಲಿದೆ.

ಡೇವಿಡ್ ಮಿಲ್ಲರ್: ಸೌತ್ ಆಫ್ರಿಕಾ ತಂಡದ ಸ್ಫೋಟಕ ದಾಂಡಿಗ ಡೇವಿಡ್ ಮಿಲ್ಲರ್ ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಎಲ್ಎಸ್ಜಿ ಅವರನ್ನು ರಿಟೈನ್ ಮಾಡಿಕೊಂಡಿಲ್ಲ. ಹೀಗಾಗಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಿಲ್ಲರ್ ಸಹ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಪೃಥ್ವಿ ಶಾ: ಟೀಮ್ ಇಂಡಿಯಾ ದಾಂಡಿಗ ಪೃಥ್ವಿ ಶಾ ಕಳೆದ ಸೀಸನ್ನಲ್ಲಿ ಬಿಕರಿಯಾಗದೇ ಉಳಿದಿದ್ದರು. ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಪೃಥ್ವಿ ಶಾ ಕೂಡ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



