- Kannada News Photo gallery Cricket photos IPL vs PSL Clash: Pakistan Cricket Board Challenges BCCI's Million-Dollar League
IPL vs PSL; ಬಿಸಿಸಿಐ ಜೊತೆ ಮತ್ತೆ ಪೈಪೋಟಿಗಿಳಿದ ಪಾಕ್ ಕ್ರಿಕೆಟ್ ಮಂಡಳಿ
PSL vs IPL Schedule Battle: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತೊಮ್ಮೆ ಬಿಸಿಸಿಐ ಜೊತೆ ಕದನಕ್ಕಿಳಿದಿದೆ. 2026ರ ಪಾಕಿಸ್ತಾನ ಸೂಪರ್ ಲೀಗ್ (PSL) ಅನ್ನು ಐಪಿಎಲ್ ನಡೆಯುವ ಅವಧಿಯಲ್ಲೇ (ಮಾರ್ಚ್ 26 - ಮೇ 3) ನಡೆಸಲು ನಿರ್ಧರಿಸಿದೆ. ಈ ಮುಖಾಮುಖಿಯು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಐಪಿಎಲ್‌ನಲ್ಲಿ ಅವಕಾಶ ಸಿಗದ ಆಟಗಾರರು ಹೆಚ್ಚಾಗಿ ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಾರೆ. 2026ರಲ್ಲಿ ಪಿಎಸ್‌ಎಲ್ 8 ತಂಡಗಳೊಂದಿಗೆ ವಿಸ್ತರಿಸಲಿದೆ.
Updated on: Dec 15, 2025 | 7:19 PM

ಬಿಸಿಸಿಐ ಎಂದರೇ ಸದಾ ಕಾಲ್ಗೆರದು ಜಗಳಕ್ಕೆ ಬರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿ ಬಾರಿಯೂ ಸೋತು ಸುಣ್ಣವಾಗಿ ಮನೆ ಸೇರಿಕೊಂಡಿದೆ. ಇದೀಗ ಮತ್ತೊಮ್ಮೆ ಬಿಸಿಸಿಐ ಜೊತೆ ಕದನಕ್ಕಿಳಿಯುವ ನಿರ್ಧಾರ ಮಾಡಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಜೊತೆಗೆ ಪಾಕಿಸ್ತಾನ ಸೂಪರ್ ಲೀಗ್ ಅನ್ನು ಕದನಕ್ಕಿಳಿಯಲು ನಿರ್ಧರಿಸಿದೆ.

ಅಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಪಿಎಲ್ ನಡೆಯುವ ಸಮಯದಲ್ಲೇ ತನ್ನ ಪಾಕಿಸ್ತಾನ ಸೂಪರ್ ಲೀಗ್ ಅನ್ನು ನಡೆಸಲು ತೀರ್ಮಾನಿಸಿದೆ. ಆದಾಗ್ಯೂ, ಪಿಎಸ್ಎಲ್ ಮತ್ತು ಐಪಿಎಲ್ ಏಕಕಾಲದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಈ ಎರಡು ಲೀಗ್ಗಳು ಒಂದೇ ಸಮಯದಲ್ಲಿ ನಡೆದಿದ್ದವು. ಇದೀಗ ಪಿಎಸ್ಎಲ್ ನ 11 ನೇ ಸೀಸನ್ ಮುಂದಿನ ವರ್ಷ ಮಾರ್ಚ್ 26 ರಿಂದ ಮೇ 3 ರವರೆಗೆ ನಡೆಯಲಿದ್ದು, ಐಪಿಎಲ್ ಕೂಡ ಇದೇ ಸಮಯದಲ್ಲಿ ನಡೆಯಲಿದೆ.

ನ್ಯೂಯಾರ್ಕ್‌ನಲ್ಲಿ ನಡೆದ ಪಿಎಸ್‌ಎಲ್ ರೋಡ್‌ಶೋ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಾಕಿಸ್ತಾನ ಸೂಪರ್ ಲೀಗ್‌ನ ಮುಂದಿನ ಆವೃತ್ತಿಯ ವೇಳಾಪಟ್ಟಿಯನ್ನು ಘೋಷಿಸಿದರು. ಅದರಂತೆ ಪಿಎಸ್ಎಲ್ ಮಾರ್ಚ್ 26 ರಂದು ಆರಂಭವಾಗಲಿದ್ದು, ಇತ್ತ ಐಪಿಎಲ್ ಕೂಡ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಮೇ ಅಂತ್ಯದವರೆಗೆ ನಡೆಯುತ್ತದೆ.

ಮುಂದಿನ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್‌ನ ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ, 2026 ರ ಪಿಎಸ್‌ಎಲ್‌ನಲ್ಲಿ ಆರು ತಂಡಗಳ ಬದಲು ಎಂಟು ತಂಡಗಳು ಭಾಗವಹಿಸಲಿವೆ. ಪಿಸಿಬಿ ಫೈಸಲಾಬಾದ್, ರಾವಲ್ಪಿಂಡಿ, ಹೈದರಾಬಾದ್, ಸಿಯಾಲ್ಕೋಟ್, ಮುಜಫರಾಬಾದ್ ಮತ್ತು ಗಿಲ್ಗಿಟ್ ತಂಡಗಳನ್ನು ಸಂಭಾವ್ಯ ಆತಿಥೇಯರನ್ನಾಗಿ ಆಯ್ಕೆ ಮಾಡಿದೆ. ಆದಾಗ್ಯೂ ಈ ಫ್ರಾಂಚೈಸಿಗಳ ಹರಾಜು ಜನವರಿ 8, 2026 ರಂದು ಹರಾಜಿನ ದಿನದಂದು ನಡೆಯಲಿದೆ.

ಆದರೆ ಐಪಿಎಲ್‌ನಿಂದ ನಿವೃತ್ತರಾದ ಅಥವಾ ಐಪಿಎಲ್‌ನಿಂದ ಬಿಡುಗಡೆಯಾದ ಅನೇಕ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನ ಭಾಗವಾಗುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಆಟಗಾರರು ಐಪಿಎಲ್ಗಿಂತ ಪಿಎಸ್ಎಲ್ಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತ ಬರುತ್ತಿದೆ. ಆದರೆ ನಿಜ ಸಂಗತಿಯೆಂದರೆ, ಐಪಿಎಲ್‌ನಲ್ಲಿ ಕಡೆಗಣಿಸಲ್ಪಟ್ಟ ವಿದೇಶಿ ಕ್ರಿಕೆಟಿಗರು ಮಾತ್ರ ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಾರೆ ಎಂಬುದು ಅಕ್ಷರಶಃ ಸತ್ಯ.
