- Kannada News Photo gallery Cricket photos IPL 2026 to begin on March 26 with the final scheduled to be held on May 31.
IPL 2026: ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್
IPL 2026 Schedule: ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ಆವೃತ್ತಿಯ ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮಾರ್ಚ್ ಕೊನೆಯ ವಾರದಲ್ಲಿ ಐಪಿಎಲ್ ಶುರುವಾಗಲಿದೆ. ಇನ್ನು ಮೇ ಅಂತ್ಯಕ್ಕೆ ಐಪಿಎಲ್ ಗೆ ತೆರೆಬೀಳಲಿದೆ. ಅಂದರೆ ಟಿ೨೦ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಪಿಎಲ್ ಶುರುವಾಗಲಿರುವುದು ವಿಶೇಷ.
Updated on:Dec 16, 2025 | 11:32 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 26 ರಿಂದ ರಂಗು ರಂಗಿನ ಕ್ರಿಕೆಟ್ ಟೂರ್ನಿ ಶುರುವಾಗಲಿದ್ದು, ಮೇ ತಿಂಗಳ ಕೊನೆಯ ದಿನಾಂಕದಂದು ಫೈನಲ್ ಪಂದ್ಯ ಆಯೋಜಿಸಲು ನಿರ್ಧರಿಸಲಾಗಿದೆ.

ಅದರಂತೆ ಈ ಬಾರಿ ಗುರುವಾರದಿಂದ (ಮಾರ್ಚ್ 26) ಐಪಿಎಲ್ ಶುರುವಾಗಲಿದ್ದು, ಮೇ 31 ರಂದು ಭಾನುವಾರ ಫೈನಲ್ ಪಂದ್ಯ ಜರುಗಲಿದೆ. ಈ ಮೂಲಕ 67 ದಿನಗಳ ಕಾಲ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಭಾರತದಲ್ಲಿ ಟಿ೨೦ ವಿಶ್ವಕಪ್ ಕೂಡ ಜರುಗಲಿದೆ. ಭಾರತ-ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ೨೦ ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ. ಇನ್ನು ಫೈನಲ್ ಪಂದ್ಯ ಮಾರ್ಚ್ 8 ರಂದು ನಡೆಯಲಿದೆ. ಅಂದರೆ ಟಿ೨೦ ವಿಶ್ವಕಪ್ ಮುಗಿದು 17 ದಿನಗಳ ಬಳಿಕ ಐಪಿಎಲ್ ಆರಂಭವಾಗಲಿದೆ.

ಇನ್ನು ಟಿ೨೦ ವಿಶ್ವಕಪ್ ಆರಂಭಕ್ಕೂ ಮುನ್ನವೇ ವುಮೆನ್ಸ್ ಪ್ರೀಮಿಯರ್ ಲೀಗ್ ಆಯೋಜಿಸಲು ನಿರ್ಧರಿಸಲಾಗಿದೆ. ವುಮೆನ್ಸ್ ಪ್ರೀಮಿಯರ್ ಲೀಗ್ ಜನವರಿ 9 ರಿಂದ ಆರಂಭವಾಗಲಿದೆ. ಐದು ತಂಡಗಳ ನಡುವಿನ ಈ ಟೂರ್ನಿಯ ಫೈನಲ್ ಪಂದ್ಯವು ಫೆಬ್ರವರಿ 5 ರಂದು ಜರುಗಲಿದೆ.

ಅಂದರೆ ಜನವರಿ ತಿಂಗಳಿಂದ ಭಾರತದಲ್ಲಿ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಮೊದಲಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ನಡೆದರೆ, ಅದರ ಬೆನ್ನಲ್ಲೇ ಟಿ೨೦ ವಿಶ್ವಕಪ್ ಆರಂಭವಾಗಲಿದೆ. ಟಿ೨೦ ವಿಶ್ವಕಪ್ ಮುಕ್ತಾಯದ ವಾರಗಳ ಬಳಿಕ ಐಪಿಎಲ್ ಶುರುವಾಗಲಿದೆ. ಅಂದರೆ 5 ತಿಂಗಳುಗಳ ಕಾಲ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗುವುದು ಖಚಿತ.
Published On - 7:23 am, Tue, 16 December 25
