ಲಂಡನ್: ಗಡ್ಡ ಇರುವ ವೈದ್ಯರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಂತಿಲ್ಲ. ಫಿಟ್ ಟೆಸ್ಟ್ನಲ್ಲಿ ಪಾಸಾಗದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಬರದಂತೆ ಸರ್ಕಾರ ಸೂಚನೆ ನೀಡಿದೆ. ಹಾಗಾಗಿ ಇಂಗ್ಲೆಂಡ್ನಲ್ಲಿರುವ ಸಿಖ್ ಸಮುದಾಯದ ವೈದ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡ್ಡ ಇರುವುದರಿಂದ ಫೇಸ್ ಮಾಸ್ಕ್ ಫಿಟ್ ಆಗಲ್ಲ. ಇದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಆದ್ರೆ ಗಡ್ಡ ತೆಗೆಯಲು ಐವರು ಸಿಖ್ ವೈದ್ಯರು ನಿರಾಕರಿಸಿದ್ದಾರೆ. ಹಾಗಾಗಿ ಕರ್ತವ್ಯಕ್ಕೆ ಬರದಂತೆ ವೈದ್ಯರಿಗೆ ಸರ್ಕಾರ ಸೂಚನೆ ನೀಡಿದೆ.
ಸರ್ಕಾರದ ನಿರ್ಧಾರಕ್ಕೆ ಸಿಖ್ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಗಡ್ಡಕ್ಕೆ ಅನುಗುಣವಾಗಿ ಪಿಪಿಇ ಕಿಟ್ ತಯಾರಿಸುವಂತೆ ಆಗ್ರಹಿಸಿದ್ದಾರೆ.
Published On - 3:12 pm, Wed, 6 May 20