ಬ್ರೆಜಿಲ್ನಲ್ಲಿ ಕೊರೊನಾ ವಿರುದ್ಧ ವಿಶಿಷ್ಟವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕು ಹರಡದಂತೆ ತಡೆಯೋದಕ್ಕೆ, ಹಾಗೂ ಮಾಸ್ಕ್ ತೊಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬ್ರೆಜಿಲ್ನ ಪ್ರತಿಮೆಗಳಿಗೂ ಮಾಸ್ಕ್ ಹಾಕಲಾಗಿದೆ. ಬ್ರೆಜಿಲ್ ಸರ್ಕಾರದ ಈ ನಿರ್ಧಾರಕ್ಕೆ ಎಲ್ಲೆಡಯಿಂದ ಶ್ಲಾಘನೆ ವ್ಯಕ್ತವಾಗಿದೆ.
ಕೊರೊನಾ v/s ಮಾಲಿನ್ಯ..!
ಒಂದೂವರೆ ಲಕ್ಷಕ್ಕೂ ಹೆಚ್ಚು ಸೋಂಕಿತರನ್ನು ಹೊಂದಿರುವ ಜರ್ಮನಿಯಲ್ಲಿ ಮತ್ತೊಂದು ತಲೆನೋವು ಶುರುವಾಗಿದೆ. ಜಾಗತಿಕ ತಾಪಮಾನ ಹೆಚ್ಚಳ ವಿರೋಧಿಸಿ ಹಾಗೂ ಜರ್ಮನಿಯಲ್ಲಿ ಕಲ್ಲಿದ್ದಲಿನ ಬಳಕೆ ಹೆಚ್ಚುಗೊಂಡಿರುವುದರ ಕುರಿತು ಸ್ಥಳೀಯರು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.
ಆಫ್ರಿಕಾದಲ್ಲಿ ತುರ್ತು ಪರಿಸ್ಥಿತಿ..?
ಆಫ್ರಿಕಾದಲ್ಲಿರುವ ಅಮೆರಿಕದ ಮಿಲಿಟರಿ ಬೇಸ್ನಲ್ಲಿ ತುರ್ತು ಪರಿಸ್ಥಿತಿಯನ್ನ ಘೋಷಣೆ ಮಾಡಲಾಗಿದೆ. ‘ಕೊರೊನಾ’ ಸೋಂಕು ಆಫ್ರಿಕಾ ಖಂಡದಲ್ಲಿ ವ್ಯಾಪಕವಾಗಿ ಹಬ್ಬುವ ಆತಂಕ ಎದುರಾಗಿದ್ದು, ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ. ಇನ್ನು ಸೈನಿಕರಿಗೆ ಮಾಸ್ಕ್ಗಳನ್ನ ತಯಾರಿಸುವ ಬಗ್ಗೆ ತರಬೇತಿಯನ್ನೂ ನೀಡಲಾಗ್ತಿದೆ.
ಪ್ರಾಕೃತಿಕ ವಿಕೋಪಕ್ಕೆ ದೊಡ್ಡಣ್ಣ ತತ್ತರ
ಅಮೆರಿಕದಲ್ಲಿ ಒಂದ್ಕಡೆ ಕೊರೊನಾ ಸೋಂಕು ಬಾಧಿಸುತ್ತಿದ್ರೆ ಇನ್ನೊಂದೆಡೆ ಪ್ರಾಕೃತಿಕ ವಿಕೋಪಗಳಿಂದಲೂ ದೊಡ್ಡಣ್ಣ ನಲುಗುವಂತಾಗಿದೆ. ಅಮೆರಿಕದ ಹಲವೆಡೆ ಸುಂಟರಗಾಳಿ ಬೀಸಿದ್ದು, ಗಾಳಿಯ ರಭಸಕ್ಕೆ ಹತ್ತಾರು ನಗರ ಪ್ರದೇಶಗಳು ಕೊಚ್ಚಿ ಹೋಗಿವೆ. ಕೊರೊನಾ ತುರ್ತು ಪರಿಸ್ಥಿತಿ ನಡುವೆ ಅಮೆರಿಕಾಗೆ ಮತ್ತೊಂದು ಸವಾಲು ಎದುರಾಗಿದೆ.