ಹೋಟೆಲ್​ನ ಸೌನಾ ಕೊಠಡಿಯಲ್ಲಿ ಮಲಗಿದ್ದ ಕಾರಣ ಕೆಲಸ ಕಳೆದುಕೊಂಡ ಟೆಕ್ ಕಂಪನಿಯ ಅಧಿಕಾರಿಗೆ ಈಗ 9,637 ಕೋಟಿ ರೂ. ಪರಿಹಾರ ಕೇಳುವ ಹಕ್ಕು

ಟೆಕ್ ಕಂಪನಿ ಅಧಿಕಾರಿಯೊಬ್ಬರು ಸೌನಾದಲ್ಲಿ ಮಲಗಿದ್ದ ಕಾರಣ ಕೆಲಸ ಕಳೆದುಕೊಂಡಿದ್ದರು. ಇದೀಗ ADHD ಅಂಗವೈಕಲ್ಯ ತಾರತಮ್ಯದ ಆಧಾರದ ಮೇಲೆ, ಅವರು ಕಂಪನಿಯಿಂದ 9,637 ಕೋಟಿ ರೂ. ಪರಿಹಾರಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ನ್ಯಾಯಮಂಡಳಿ ಅವರ ಅರ್ಜಿಯನ್ನು ಬೆಂಬಲಿಸಿದೆ, ಭವಿಷ್ಯದ ಆದಾಯ ನಷ್ಟದ ಲೆಕ್ಕಾಚಾರಗಳನ್ನು ಪರಿಗಣಿಸಿ ಭಾರೀ ಪರಿಹಾರಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಅಂಗವೈಕಲ್ಯ ಹೊಂದಿರುವ ಉದ್ಯೋಗಿಗಳ ಹಕ್ಕುಗಳಿಗೆ ಮಹತ್ವದ ಗೆಲುವು.

ಹೋಟೆಲ್​ನ ಸೌನಾ ಕೊಠಡಿಯಲ್ಲಿ ಮಲಗಿದ್ದ ಕಾರಣ ಕೆಲಸ ಕಳೆದುಕೊಂಡ ಟೆಕ್ ಕಂಪನಿಯ ಅಧಿಕಾರಿಗೆ ಈಗ 9,637 ಕೋಟಿ ರೂ. ಪರಿಹಾರ ಕೇಳುವ ಹಕ್ಕು
ಅಧಿಕಾರಿ
Image Credit source: @karishannon.

Updated on: Sep 25, 2026 | 12:44 PM

ಲಂಡನ್, ಸೆಪ್ಟೆಂಬರ್ 25: ಕೆಲಸದ ಪ್ರವಾಸದ ವೇಳೆ ಹೋಟೆಲ್ ಕೊಠಡಿಗೆ ಹೋಗಲು ಸಾಧ್ಯವಾಗದೇ ಹೋಟೆಲ್​ನ ಸೌನಾ ಕೊಠಡಿಯಲ್ಲಿ ರಾತ್ರಿ ಕಳೆದಿದ್ದ ಟೆಕ್ ಕಂಪನಿಯ ಮಾಜಿ ಹಿರಿಯ ಅಧಿಕಾರಿಗೆ, ಅಂಗವೈಕಲ್ಯ ತಾರತಮ್ಯ ಪ್ರಕರಣದಲ್ಲಿ ದೊಡ್ಡ ಕಾನೂನು ಗೆಲುವು ಸಿಕ್ಕಿದೆ. ಬ್ರಿಟನ್ ಉದ್ಯೋಗ ನ್ಯಾಯಮಂಡಳಿ ಅವರ ಅರ್ಜಿಯನ್ನು ಮುಂದುವರೆಸಲು ಅನುಮತಿ ನೀಡಿದ್ದು, ಅವರು ಸುಮಾರು 9,637 ಕೋಟಿ ರೂ. ಪರಿಹಾರವನ್ನು ಕೋರುವ ಹಕ್ಕು ಪಡೆದಿದ್ದಾರೆ.

ಪ್ರಕರಣ ಏನು?

ಶಾನನ್ ಬರ್ನ್ಸ್ ಎಂಬವವರು ಟೆಕ್ ಕಂಪನಿ Gitpodನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. 2023ರಲ್ಲಿ ಆಸ್ಟ್ರಿಯಾದಲ್ಲಿ ನಡೆದ ಟೀಮ್ ಬಿಲ್ಡ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾತ್ರಿ ಮದ್ಯ ಸೇವಿಸಿದ್ದರು, ವೇಳೆ ಕೊಠಡಿಯ ಕೀಲಿಯನ್ನು ಮರೆತ ಕಾರಣ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಸೌನಾದಲ್ಲೇ ರಾತ್ರಿ ಕಳೆದಿದ್ದರು. ಬಳಿಕ ಕಂಪನಿ ಅವರ ವೃತ್ತಿಪರ ನಡವಳಿಕೆ ಬಗ್ಗೆ ಪ್ರಶ್ನೆ ಎತ್ತಿ ಕೆಲ ವಾರಗಳ ನಂತರ ಉದ್ಯೋಗದಿಂದ ವಜಾಗೊಳಿಸಿತು.

ನ್ಯಾಯಮಂಡಳಿ ಏನು ಹೇಳಿತು?

ಬರ್ನ್ಸ್ ಅವರಿಗೆ ADHD ಇರುವುದರಿಂದ, ಕಂಪನಿಯ ಕ್ರಮದಲ್ಲಿ ಅಂಗವೈಕಲ್ಯ ತಾರತಮ್ಯ ನಡೆದಿದೆ ಎಂದು ಉದ್ಯೋಗ ನ್ಯಾಯಮಂಡಳಿ ತೀರ್ಪು ನೀಡಿತು. ಪ್ರಕರಣದಲ್ಲಿ ಪರಿಹಾರ ಕೋರುವ ಅವಕಾಶವನ್ನು ನಿರಾಕರಿಸಲು ಸಾಧ್ಯವಿಲ್ಲ. ಪರಿಹಾರದ ಮೊತ್ತ ದೊಡ್ಡದಾಗಿದ್ದರೂ ಅದನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಕಷ್ಟು ಆಧಾರಗಳಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.

ಮತ್ತಷ್ಟು ಓದಿ: ಆಪಲ್​ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ; ಎರಡು ತಿಂಗಳಲ್ಲಿ ಎರಡನೇ ಬಾರಿ ಲೇಆಫ್

9,637 ಕೋಟಿ ರೂ. ಪರಿಹಾರ ಯಾಕೆ?

ಬರ್ನ್ಸ್ ಅವರ ವಾದದ ಪ್ರಕಾರ, ಉದ್ಯೋಗ ಕಳೆದುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ಸಂಬಳ, ಬೋನಸ್ ಮತ್ತು ಕಂಪನಿಯ ಷೇರುಗಳಿಂದ ಅಪಾರ ಆದಾಯ ಗಳಿಸಬಹುದಿತ್ತು. ಅವರು Gitpodನಲ್ಲಿ ಸುಮಾರು ಶೇ.0.85 ಷೇರು ಹೊಂದಿದ್ದರು. ಕಂಪನಿಯ ಭವಿಷ್ಯದ ಮೌಲ್ಯ ಮತ್ತು ಷೇರುಗಳ ಬೆಳವಣಿಗೆಯನ್ನು ಆಧರಿಸಿ ಪರಿಹಾರದ ಲೆಕ್ಕಾಚಾರ ಸಲ್ಲಿಸಿದ್ದಾರೆ.

ಕಂಪನಿಯ ವಾದ

Gitpod ಈ ಬೇಡಿಕೆಯನ್ನು ವಿರೋಧಿಸಿದೆ.9,637 ಕೋಟಿ ರೂ. ಪರಿಹಾರ ಅತಿಯಾದ ಮತ್ತು ಅಸಾಧಾರಣ ಬೇಡಿಕೆ ಎಂದು ಹೇಳಿದೆ. ಪರಿಹಾರವನ್ನು ಬಹಳ ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಬೇಕು ಎಂದು ನ್ಯಾಯಮಂಡಳಿಗೆ ಮನವಿ ಮಾಡಿತ್ತು. ಆದರೆ ನ್ಯಾಯಾಧೀಶರು ಕಂಪನಿಯ ಅರ್ಜಿಯನ್ನು ತಿರಸ್ಕರಿಸಿದರು.

ಅಂತಿಮ ಪರಿಹಾರದ ಮೊತ್ತ ಇನ್ನೂ ನಿರ್ಧಾರವಾಗಿಲ್ಲ. ಮುಂದಿನ ವಿಚಾರಣೆಯಲ್ಲಿ ಸಂಬಳ, ಷೇರು ಮೌಲ್ಯ ಮತ್ತು ಇತರ ನಷ್ಟಗಳ ಬಗ್ಗೆ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತದೆ. ಬರ್ನ್ಸ್ ಈಗ ಟೆಕ್ ಕ್ಷೇತ್ರವನ್ನು ತೊರೆದು ಚಿಕಿತ್ಸಕಿಯಾಗಿ ಮರು ತರಬೇತಿ ಪಡೆಯುತ್ತಿದ್ದಾರೆ.

ಸೌನಾ ಎಂದರೇನು?
ಸೌನಾ ಒಂದು ಸಣ್ಣ ಕೊಠಡಿಯಾಗಿದ್ದು, ಅದರೊಳಗೆ ತುಂಬಾ ಹೆಚ್ಚಿನ ಉಷ್ಣಾಂಶ (ಸುಮಾರು 70°C ರಿಂದ 100°C) ಇರುತ್ತದೆ. ಜನರು ಕೆಲವು ನಿಮಿಷಗಳು ಅಲ್ಲಿ ಕುಳಿತು ಅಥವಾ ಮಲಗಿ ದೇಹಕ್ಕೆ ವಿಶ್ರಾಂತಿ ಪಡೆಯುತ್ತಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us