ಸೊಮಾಲಿಯಾದಲ್ಲಿ ಅವಳಿ ಸ್ಫೋಟ: 6 ಮಂದಿ ಸಾವು, 10 ಜನರಿಗೆ ಗಾಯ

ಮೊಗಾದಿಶು ಮತ್ತು ಸೊಮಾಲಿಯಾ ನಡುವಿನ ಶಾಬೆಲ್ಲೆ ಪ್ರದೇಶದಲ್ಲಿ  ಅವಳಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ವಾಯ್ಸ್ ಆಫ್ ಅಮೇರಿಕ ವರದಿಯ ಪ್ರಕಾರ, ಪೊಲೀಸ್ ವರದಿಗಳ ಪ್ರಕಾರ, ಮಾರಣಾಂತಿಕ ಸ್ಫೋಟಗಳಲ್ಲಿ ಕನಿಷ್ಠ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ.

ಸೊಮಾಲಿಯಾದಲ್ಲಿ ಅವಳಿ ಸ್ಫೋಟ: 6 ಮಂದಿ ಸಾವು, 10 ಜನರಿಗೆ ಗಾಯ
ಸ್ಫೋಟ
Image Credit source: Yahoo

Updated on: Sep 29, 2024 | 10:37 AM

ಮೊಗಾದಿಶು ಮತ್ತು ಸೊಮಾಲಿಯಾ ನಡುವಿನ ಶಾಬೆಲ್ಲೆ ಪ್ರದೇಶದಲ್ಲಿ  ಅವಳಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ವಾಯ್ಸ್ ಆಫ್ ಅಮೇರಿಕ ವರದಿಯ ಪ್ರಕಾರ, ಪೊಲೀಸ್ ವರದಿಗಳ ಪ್ರಕಾರ, ಮಾರಣಾಂತಿಕ ಸ್ಫೋಟಗಳಲ್ಲಿ ಕನಿಷ್ಠ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ.

ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿವೆ – ಒಂದು ಮೊಗಾಡಿಶುವಿನ ನ್ಯಾಷನಲ್ ಥಿಯೇಟರ್ ಬಳಿ, ಅಧ್ಯಕ್ಷರ ಕಚೇರಿಯಿಂದ ಸುಮಾರು ಒಂದು ಕಿಲೋಮೀಟರ್, ಮತ್ತು ಇನ್ನೊಂದು ಜೊಹೋರ್ ನಗರದ ಜಾನುವಾರು ಮಾರುಕಟ್ಟೆಯಲ್ಲಿ ನಡೆದಿದೆ.

ಜಾನುವಾರು ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಗೊಂಡಾಗ ಸೋಮಾಲಿಯಾದ ಮಿಡಲ್ ಶಾಬೆಲ್ಲೆ ಪ್ರದೇಶದ ಜೋಹರ್ ನಗರದಲ್ಲಿ ದುರಂತ ಸಂಭವಿಸಿದೆ, ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಜೋವರ್ ಪೊಲೀಸ್ ಕಮಾಂಡರ್ ಬಶೀರ್ ಹಸನ್ ಹೇಳಿದ್ದಾರೆ.

ಜನನಿಬಿಡ ಹಮರ್ ವೆಯ್ನ್ ಜಿಲ್ಲೆಯ ರೆಸ್ಟೋರೆಂಟ್ ಬಳಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸ್ಫೋಟಕ ತುಂಬಿದ ವಾಹನವು ಸ್ಫೋಟಗೊಂಡಿತ್ತು. ದಾಳಿ ನಡೆಸಿದವರು ಯಾರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ, ಇಸ್ಲಾಮಿ ಉಗ್ರಗಾಮಿ ಗುಂಪು ಅಲ್-ಶಬಾಬ್ ಮೊಗಾದಿಶುನಲ್ಲಿ ಬಾಂಬ್ ಸ್ಫೋಟಗಳು ಮತ್ತು ಗುಂಡಿನ ದಾಳಿಗಳನ್ನು ಹಲವು ಬಾರಿ ನಡೆಸಿದೆ.

ಮತ್ತಷ್ಟು ಓದಿ: ಕೊಲ್ಕತ್ತಾದಲ್ಲಿ ಹಾಡಹಗಲೇ ಭಾರೀ ಸ್ಫೋಟ; ಒಬ್ಬರ ಸ್ಥಿತಿ ಗಂಭೀರ

ಜುಲೈನಲ್ಲಿ ಮತ್ತೊಂದು ಘಟನೆ ನಡೆದಿತ್ತು
ಸೊಮಾಲಿಯಾದಲ್ಲಿ ಬ್ಯುಸಿ ಕೆಫೆಯಲ್ಲಿ ಪ್ರಬಲ ಸ್ಫೋಟದಲ್ಲಿ 5 ಸಾವು
ಸೊಮಾಲಿ ರಾಜಧಾನಿ ಮೊಗಾದಿಶುನಲ್ಲಿ ಭಾನುವಾರ ಕೆಫೆಯೊಂದರ ಹೊರಗೆ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದರು.

ಸ್ಪೇನ್ ಮತ್ತು ಇಂಗ್ಲೆಂಡ್ ನಡುವಿನ ಯುರೋಪಿಯನ್ ಫುಟ್ಬಾಲ್ ಫೈನಲ್ ಪಂದ್ಯವನ್ನು ಕೆಫೆಯೊಳಗಿನ ಪರದೆಯ ಮೇಲೆ ಕೆಲವರು ವೀಕ್ಷಿಸುತ್ತಿದ್ದಾಗ ಸ್ಫೋಟಕಗಳನ್ನು ತುಂಬಿದ ಕಾರು ಹೊರಗೆ ಸ್ಫೋಟಿಸಿತು ಎಂದು ಸೊಮಾಲಿ ಪೊಲೀಸ್ ವಕ್ತಾರ ಮೇಜರ್ ಅಬ್ದಿಫಿತಾ ಅಡೆನ್ ಹಸ್ಸಾ ಹೇಳಿದ್ದಾರೆ. ದಾಳಿಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ