ಹದ್ದಿನಕಣ್ಣಿಡಲು ಚೀನಾ ಸಮುದ್ರಕ್ಕೆ ಯುದ್ಧ ವಿಮಾನ ಕಳಿಸಿದ ಅಮೆರಿಕ

| Updated By:

Updated on: Jul 04, 2020 | 12:38 PM

ಒಂದೆಡೆ ಚೀನಾ ಭಾರತದ ವಿರುದ್ಧ ಕಾಲು ಕೆರೆದು ಗಡಿ ತಂಟೆಯಲ್ಲಿ ತೊಡಗಿದೆ. ಇನ್ನೊಂದೆಡೆ ಇದೇ ತೆರನಾದ ತಂಟೆಯನ್ನ ಥೈವಾನ್‌ ದೇಶದ ವಿರುದ್ಧವೂ ಆರಂಭಿಸಿದೆ. ಹೀಗಾಗಿ ಅಮೆರಿಕಾ ಈಗ ಚೀನಾಗೆ ಎಚ್ಚರಿಕೆ ಸಂದೇಶ ನೀಡಿದೆ. ಹೌದು ಚೀನಾ ತನ್ನ ಗಡಿರಗಳೆಯನ್ನ ಭಾರತವಷ್ಟೇ ಅಲ್ಲ, ನೆರೆಯ ಪುಟ್ಟ ರಾಷ್ಟ್ ಥೈವಾನ್‌ ಮೇಲೂ ಕಾಲು ಕೆರೆದುಕೊಂಡು ಗಡಿ ತಂಟೆ ಮಾಡ್ತಿದೆ. ಆದ್ರೆ ಭಾರತವೇನೋ ಚೀನಾಕ್ಕೆ ಸೆಡ್ಡು ಹೊಡೆದು ನಿಂತಿತು. ಆದ್ರೆ ಥೈವಾನ್‌ಗೆ ಆ ಶಕ್ತಿ ಇಲ್ಲವಲ್ಲ. ಹೀಗಾಗಿ ಇದೇ ಅವಕಾಶ ಅಂತಾ […]

ಹದ್ದಿನಕಣ್ಣಿಡಲು ಚೀನಾ ಸಮುದ್ರಕ್ಕೆ ಯುದ್ಧ ವಿಮಾನ ಕಳಿಸಿದ ಅಮೆರಿಕ
Follow us on

ಒಂದೆಡೆ ಚೀನಾ ಭಾರತದ ವಿರುದ್ಧ ಕಾಲು ಕೆರೆದು ಗಡಿ ತಂಟೆಯಲ್ಲಿ ತೊಡಗಿದೆ. ಇನ್ನೊಂದೆಡೆ ಇದೇ ತೆರನಾದ ತಂಟೆಯನ್ನ ಥೈವಾನ್‌ ದೇಶದ ವಿರುದ್ಧವೂ ಆರಂಭಿಸಿದೆ. ಹೀಗಾಗಿ ಅಮೆರಿಕಾ ಈಗ ಚೀನಾಗೆ ಎಚ್ಚರಿಕೆ ಸಂದೇಶ ನೀಡಿದೆ.

ಹೌದು ಚೀನಾ ತನ್ನ ಗಡಿರಗಳೆಯನ್ನ ಭಾರತವಷ್ಟೇ ಅಲ್ಲ, ನೆರೆಯ ಪುಟ್ಟ ರಾಷ್ಟ್ ಥೈವಾನ್‌ ಮೇಲೂ ಕಾಲು ಕೆರೆದುಕೊಂಡು ಗಡಿ ತಂಟೆ ಮಾಡ್ತಿದೆ. ಆದ್ರೆ ಭಾರತವೇನೋ ಚೀನಾಕ್ಕೆ ಸೆಡ್ಡು ಹೊಡೆದು ನಿಂತಿತು. ಆದ್ರೆ ಥೈವಾನ್‌ಗೆ ಆ ಶಕ್ತಿ ಇಲ್ಲವಲ್ಲ. ಹೀಗಾಗಿ ಇದೇ ಅವಕಾಶ ಅಂತಾ ಚೀನಾದ ಬದ್ದವೈರಿ ಅಮೆರಿಕಾ ಈಗ ಥೈವಾನ್‌ನ ನೆರವಿಗೆ ಧಾವಿಸಿದೆ.

ತನ್ನ ಎರಡು ಯುದ್ಧ ವಿಮಾನಗಳು ಮತ್ತು ಎರಡು ಯುದ್ಧ ನೌಕೆಗಳನ್ನ ದಕ್ಷಿಣ ಚೀನಾದ ಸಮುದ್ರಕ್ಕೆ ರವಾನಿಸಿದೆ. ದಕ್ಷಿಣ ಚೀನಾದ ಸಮುದ್ರದಲ್ಲಿ ಚೀನಾದ ನೌಕಾಪಡೆಗಳ ಚಲನವಲನದ ಮೇಲೆ ಹದ್ದಿನ‌ ಕಣ್ಣಿಡಲಿವೆ ವಿಶ್ವದ ದೊಡ್ಡಣ್ಣನ ಈ ಯುದ್ಧ ನೌಕೆ ಮತ್ತು ಯುದ್ದವಿಮಾನಗಳು.

Published On - 12:16 pm, Sat, 4 July 20