ಪೆನ್ಸಿಲ್ವೇನಿಯಾದ ವ್ಯಕ್ತಿಯೊಬ್ಬ ತನಗೆ ಇಷ್ಟವಿಲ್ಲದ ಹೇರ್ಕಟ್ ಮಾಡಿಕೊಂಡ ನಂತರ ತನ್ನ ಗೆಳತಿಯನ್ನು ಇರಿದು ಕೊಂದಿದ್ದಾನೆ. ರಕ್ತಸಿಕ್ತ ಚಾಕುವಿನ ಜೊತೆಗಿದ್ದ ಆತನನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಯಿತು. ಹಿಂಸಾತ್ಮಕ ದಾಳಿಯಲ್ಲಿ ತನ್ನ ಗೆಳತಿಯನ್ನು ಮಾರಣಾಂತಿಕವಾಗಿ ಇರಿದ ನಂತರ ಪೆನ್ಸಿಲ್ವೇನಿಯಾದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬೆಂಜಮಿನ್ ಗುಯಲ್ ಎಂಬ 49 ವರ್ಷದ ವ್ಯಕ್ತಿ ತನ್ನ 50 ವರ್ಷದ ಗೆಳತಿ ತನಗಿಷ್ಟವಿಲ್ಲದ ಹೇರ್ಕಟ್ ಮಾಡಿಸಿಕೊಂಡು ಬಂದಿದ್ದಕ್ಕೆ ಅಸಮಾಧಾನಗೊಂಡು ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ತನ್ನ ತಾಯಿಯ ಹೊಸ ಹೇರ್ಕಟ್ ಕಾರಣಕ್ಕೆ ಈ ಕೊಲೆಯಾಗಿದೆ ಎಂದು ಮೃತ ಮಹಿಳೆಯ ಮಗಳು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಮ್ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು; ಶಾಕಿಂಗ್ ವಿಡಿಯೋ ವೈರಲ್
ಈ ವೇಳೆ ಚಾಕುವಿನ ಇರಿತವನ್ನು ತಡೆಯಲೆತ್ನಿಸಿದ ಆ ಮಹಿಳೆಯ ಸಹೋದರರಿಗೂ ಆರೋಪಿ ಇರಿದಿದ್ದಾನೆ. ಬಳಿಕ ರಕ್ತಸಿಕ್ತವಾದ ಚಾಕುವಿನ ಜೊತೆಗೆ ಆರೋಪಿಯನ್ನು ಬಂಧಿಸಲಾಗಿದೆ. ಹೊಸ ಹೇರ್ಕಟ್ ಮಾಡಿಸಿಕೊಂಡು ಬಂದಾಗ ಆಕೆಯನ್ನು ನೋಡಿದ ಆರೋಪಿ ಕೋಪಗೊಂಡಿದ್ದ. ಆ ಹೇರ್ಕಟ್ ಬದಲಿಸಿಕೊಳ್ಳದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಗಾಬರಿಯಾಗಿದ್ದ ಆ ಮಹಿಳೆ ಆತನಿಗೆ ಕಾಣದಂತೆ ಅಡಗಿದ್ದಳು. ಆದರೆ, ಆತ ಆಕೆಯನ್ನು ಹುಡುಕಿ ಕೊಂದಿದ್ದಾನೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ