ವರ್ಜೀನಿಯಾ, ಮಾರ್ಚ್ 23: ಅಮೆರಿಕದ ವರ್ಜೀನಿಯಾದಲ್ಲಿ ಅಂಗಡಿಯೊಂದರೊಳಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಗುಜರಾತ್ ಮೂಲದ ತಂದೆ-ಮಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರದೀಪ್‌ಭಾಯ್ ಪಟೇಲ್ (56) ಮತ್ತು ಅವರ 24 ವರ್ಷದ ಮಗಳು ಉರ್ವಿ ಪಟೇಲ್ ಮೇಲೆ ಅಕೋಮ್ಯಾಕ್ ಕೌಂಟಿಯಲ್ಲಿ ಬಂದೂಕುಧಾರಿಯೊಬ್ಬ ದಾಳಿ ನಡೆಸಿದ್ದಾನೆ. ಇವರು ಗುಜರಾತ್‌ನ ಮೆಹ್ಸಾನಾದ ಕನೋಡಾ ಗ್ರಾಮದವರಾಗಿದ್ದು, ಪಾಟಿದಾರ್ ಕುಟುಂಬಕ್ಕೆ ಸೇರಿದವರು.
ಸುದ್ದಿಯ ಪ್ರಕಾರ, ಗುಂಡೇಟಿನಿಂದ ಪ್ರದೀಪ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರ ಮಗಳು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾಳೆ. ಅಮೆರಿಕದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ದಾಳಿ ನಡೆದಾಗ, ಪ್ರದೀಪ್‌ಭಾಯ್ ಪಟೇಲ್ ಮತ್ತು ಅವರ ಮಗಳು ಉರ್ವಿ ಪಟೇಲ್ ವರ್ಜೀನಿಯಾದ ಅಕೋಮ್ಯಾಕ್ ಕೌಂಟಿಯಲ್ಲಿರುವ ಅಂಗಡಿಯಲ್ಲಿದ್ದರು. ಅಷ್ಟರಲ್ಲಿ, ಒಬ್ಬ ಬಂದೂಕುಧಾರಿ ಅಂಗಡಿಯೊಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ. ತಲೆಗೆ ಗುಂಡು ತಗುಲಿ ಪ್ರದೀಪ್‌ಭಾಯ್ ಸ್ಥಳದಲ್ಲೇ ಮೃತಪಟ್ಟರು. ಏತನ್ಮಧ್ಯೆ, ಅವರ ಮಗಳು ಉರ್ವಿ ಕೂಡ 36 ಗಂಟೆಗಳ ಚಿಕಿತ್ಸೆಯ ನಂತರ ನಿಧನರಾದರು.
ಮತ್ತಷ್ಟು ಓದಿ: ಕೇಂದ್ರ ಸಚಿವರ ಇಬ್ಬರು ಸೋದರಳಿಯರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು
ನಡೆದಿದ್ದೇನು?
ಮಾರ್ಚ್ 20 ರಂದು ಬೆಳಗ್ಗೆ 5:30 ಕ್ಕೆ, ಕೊಲೆ ಆರೋಪಿ ಮದ್ಯ ಖರೀದಿಸಲು ಅಂಗಡಿಗೆ ಬಂದಿದ್ದ. ಇದಾದ ನಂತರ, ಅಂಗಡಿಯನ್ನು ರಾತ್ರಿ ಏಕೆ ತೆರೆಯಲಿಲ್ಲ ಎಂದು ತಂದೆಯೊಂದಿಗೆ ಜಗಳವಾಡಿ ತಂದೆ ಮತ್ತು ಮಗಳು ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ. ಪ್ರದೀಪ್ ಪಟೇಲ್, ಅವರ ಪತ್ನಿ ಹಂಸಬೆನ್ ಮತ್ತು ಮಗಳು ಉರ್ವಿ 6 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಪ್ರದೀಪ್‌ಭಾಯ್‌ಗೆ 3 ಹೆಣ್ಣು ಮಕ್ಕಳಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಅವರ ಮಗಳು, ಅಳಿಯ ಅಮೆರಿಕಕ್ಕೆ ತಲುಪಿದರು.
ಅಮೆರಿಕದಲ್ಲಿ ನಡೆದ ತಂದೆ-ಮಗಳ ಹತ್ಯೆ ಘಟನೆ ವಿದೇಶಗಳಲ್ಲಿ ವಾಸಿಸುವ ಭಾರತೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ಅತನಿಖೆಯ ನಂತರ ಒನಾನ್‌ಕಾಕ್‌ನ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ವಾರ್ಟನ್ ಪ್ರಸ್ತುತ ಕೊಲೆ, ಕೊಲೆ ಯತ್ನ, ಮತ್ತು ಮಾರಕ ಆಯುಧ ಬಳಕೆ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ