ಏನಿದು ಡ್ರೆಕೋನಿಯನ್ ಕಾನೂನು? ಅಥೆನ್ಸ್​​ನ ಕಾನೂನಿಗೆ ಈ ಹೆಸರು ಹೇಗೆ ಬಂತು?

ಡ್ರೆಕೋನಿಯನ್ ಕಾನೂನುಗಳು ಕ್ರಿಸ್ತಪೂರ್ವ 7 ನೇ ಶತಮಾನದಲ್ಲಿ ಪ್ರಾಚೀನ ಅಥೆನಿಯನ್ ಆಡಳಿತಗಾರ ಡ್ರಾಕೋ ಸ್ಥಾಪಿಸಿದ ಕಾನೂನು ಸಂಹಿತೆ. ಡ್ರಾಕೋನ ಕಾನೂನುಗಳು ಕಠಿಣ ಶಿಕ್ಷೆಗಳಿಗೆ ಹೆಸರುವಾಸಿಯಾಗಿದ್ದವು. ಸಣ್ಣ ಪುಟ್ಟ ಅಪರಾಧಗಳಿಗೂ ಇಲ್ಲಿ ಮರಣದಂಡನೆ ಶಿಕ್ಷೆ ಇರುತ್ತಿತ್ತು. ಪ್ರಾಚೀನ ಗ್ರೀಸ್‌ನಲ್ಲಿ ಕಾನೂನುಗಳನ್ನು ಕ್ರೋಡೀಕರಿಸುವ ಆರಂಭಿಕ ಪ್ರಯತ್ನಗಳಲ್ಲಿ ಕಾನೂನು ವ್ಯವಸ್ಥೆಗೆ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ತರುವ ಗುರಿಯನ್ನು ಹೊಂದಿರುವ ಈ ಕಾನೂನುಗಳು ಮಹತ್ವದ್ದಾಗಿವೆ. ಸೊಲೊನ್ ಪರಿಚಯಿಸಿದಂತಹ ಕಾನೂನು ವ್ಯವಸ್ಥೆಗಳಿಂದ ಬದಲಾಯಿಸಲ್ಪಡುವ ಮೊದಲು ಡ್ರೆಕೋನಿಯನ್ ಕಾನೂನುಗಳು ಗಮನಾರ್ಹ ಅವಧಿಯವರೆಗೆ ಜಾರಿಯಲ್ಲಿದ್ದವು. ಈ ಕಾನೂನಿನ ಬಗ್ಗೆ ಇಲ್ಲಿದೆ ಮಾಹಿತಿ

ಏನಿದು ಡ್ರೆಕೋನಿಯನ್ ಕಾನೂನು? ಅಥೆನ್ಸ್​​ನ ಕಾನೂನಿಗೆ ಈ ಹೆಸರು ಹೇಗೆ ಬಂತು?
ಡ್ರೆಕೋ
ರಶ್ಮಿ ಕಲ್ಲಕಟ್ಟ

Updated on: Apr 04, 2024 | 6:32 PM

ಸಾಮಾನ್ಯವಾಗಿ ಯಾವುದೇ ಕಾನೂನು ಜಾರಿಗೊಳಿಸಿದಾಗ ಅದರ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಆದರೆ ಕೆಲವೊಂದು ನಿಯಮ ಅಥವಾ ಕಾನೂನು ಇರುತ್ತದೆ, ಅದು ಕಠಿಣ ಕಾನೂನು. ಅಂದಹಾಗೆ ಸರ್ಕಾರ ಜಾರಿಗೆ ತರುವಯಾವುದೇ ಕಾನೂನು ಮಾನವ ಹಕ್ಕುಗಳನ್ನು ಉಲ್ಲಂಘಿಸಬಾರದು, ಹಾಗೇನಾದರೂ ಕಾನೂನು ಜಾರಿಯಾದರೆ ಇದೇನು ಡ್ರೆಕೋನಿಯನ್ ಕಾನೂನಾ? ಎಂದು ಕೇಳುತ್ತೇವೆ. ಹಾಗಾದರೆ ಡ್ರೆಕೋನಿಯನ್ ಕಾನೂನು ಎಂದರೆ ಏನು? ಈ ಹೆಸರು ಹೇಗೆ ಬಂತು? ಡ್ರೆಕೋನಿಯನ್ ಕಾನೂನು ರಚಿಸಿದವರು ಯಾರು? ಇತಿಹಾಸದ ಪುಟಗಳಲ್ಲಿ ಡ್ರೆಕೋನಿಯನ್ ಸಂವಿಧಾನವನ್ನು ಯಾವ ರೀತಿ ವ್ಯಾಖ್ಯಾನಿಸಲಾಗಿದೆ ಎಂಬುದನ್ನು ನೋಡೋಣ. ಡ್ರೆಕೋನಿಯನ್ ಪದ ಹುಟ್ಟಿದ್ದು ಇಲ್ಲಿಂದ ‘ ಡ್ರೆಕೋನಿಯನ್ ‘ ಎಂಬ ಪದ ಹುಟ್ಟಿದ್ದು ಡ್ರೆಕೊ ಎಂಬ ವ್ಯಕ್ತಿಯಿಂದ. ಡ್ರಾಕೋ ಅಥವಾ ಡ್ರೆಕೋ ಎಂದಾಗ ಡ್ರಾಕುಲಾ ನೆನಪಾಗದೇ ಇರಲಿಕ್ಕಿಲ್ಲ. ಡ್ರೆಕೋ ಕೂಡಾ ಒಂಥರಾ ಭಯ ಹುಟ್ಟಿಸುವ ಆಡಳಿತಗಾರ. ಅಥೆನ್ಸ್ ಆಡಳಿತಗಾರನಾದ ಈತ ಕ್ರಿಸ್ತಪೂರ್ವ 621ರಲ್ಲಿ ಡ್ರೆಕೋನಿಯನ್ ಸಂವಿಧಾನವನ್ನು ಜಾರಿಗೆ ತಂದಿದ್ದ. ಈತ ಜಾರಿಗೆ ತಂದ ಹೆಚ್ಚಿನ ಕಾನೂನುಗಳು ಹೇಗಿದ್ದವು ಅಂದರೆ ಸಣ್ಣ ಕೃತ್ಯಗಳಿಗೂ ಮರಣದಂಡನೆ ವಿಧಿಸಲಾಗುತ್ತಿತ್ತು..ಸಣ್ಣ ಅಪರಾಧಗಳಿಗೆ ದಂಡ ವಿಧಿಸುವುದು ಯಾಕೆ ಎಂದು ಕೇಳಿದಾಗ “ಸಣ್ಣ ಅಪರಾಧಗಳನ್ನು ನಿಲ್ಲಿಸಲು ಮರಣದಂಡನೆ ಬೇಕು. ದೊಡ್ಡ ಅಪರಾಧಗಳಿಗೆ, ನಾನು ಯಾವುದೇ ಕಠಿಣ ಶಿಕ್ಷೆಯನ್ನು ಕಲ್ಪಿಸಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದನಂತೆ. ಅಂದರೆ ಯಾವುದೇ ಅತ್ಯಂತ ಕಠಿಣ ಕಾನೂನು ಅಥವಾ ದಯೆಯಿಲ್ಲದ ಇತರ ಕಠಿಣ...

Published On - 6:30 pm, Thu, 4 April 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ