Jeep Grand Cherokee: ನವೆಂಬರ್ 11ರಂದು ಬಿಡುಗಡೆಯಾಗಲಿದೆ ಹೊಸ ಜೀಪ್ ಗ್ರ್ಯಾಂಡ್ ಚರೋಕಿ

|

Updated on: Oct 27, 2022 | 6:49 PM

ಜೀಪ್ ಇಂಡಿಯಾ ಕಂಪನಿಯು ತನ್ನ ಹೊಸ ಗ್ರ್ಯಾಂಡ್ ಚರೋಕಿ ಐಷಾರಾಮಿ ಎಸ್ ಯುವಿ ಆವೃತ್ತಿಯ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ನವೆಂಬರ್ 11ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

Jeep Grand Cherokee: ನವೆಂಬರ್ 11ರಂದು ಬಿಡುಗಡೆಯಾಗಲಿದೆ ಹೊಸ ಜೀಪ್ ಗ್ರ್ಯಾಂಡ್ ಚರೋಕಿ
Jeep Grand Cherokee
Follow us on

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೀಪ್ ಇಂಡಿಯಾ ಕಂಪನಿಯು ತನ್ನ ಹೊಸ ಗ್ರ್ಯಾಂಡ್ ಚರೋಕಿ ಎಸ್ ಯುವಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ಜೀಪ್ ಕಂಪನಿಯು ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದನೆ ಮಾಡಲಾಗುತ್ತಿರುವ ನಾಲ್ಕನೇ ಕಾರು ಮಾದರಿ ಇದಾಗಿದ್ದು, ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಭಾರತದಲ್ಲಿ ಜೀಪ್ ಕಂಪನಿಯು ಕಂಪಾಸ್, ಮೆರಿಡಿಯನ್ ಮತ್ತು ವ್ರ್ಯಾಂಗ್ಲರ್ ಕಾರುಗಳನ್ನು ಸದ್ಯ ಸ್ಥಳೀಯವಾಗಿ ಉತ್ಪಾದನೆ ಮಾಡುತ್ತಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಲಿರುವ ಗ್ರ್ಯಾಂಡ್ ಚರೋಕಿ ಕಾರು ಮಾದರಿಯನ್ನು ಸಹ ದೇಶಿಯ ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಕೈಗೊಳ್ಳಲಿದೆ.

ಅಂದಾಜು ಬೆಲೆ(ಎಕ್ಸ್ ಶೋರೂಂ ಪ್ರಕಾರ)

ಮೆರಿಡಿಯನ್ ಮತ್ತು ವ್ರ್ಯಾಂಗ್ಲರ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ಫೀಚರ್ಸ್ ಮತ್ತು ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ ಹೊಸ ಗ್ರ್ಯಾಂಡ್ ಚರೋಕಿ ಎಕ್ಸ್ ಶೋರೂಂ ಪ್ರಕಾರ ರೂ. 80 ಲಕ್ಷದಿಂದ ರೂ. 90 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಗೊಳ್ಳಬಹುದಾಗಿದ್ದು, ಇದು ಮರ್ಸಿಡಿಸ್ ಬೆಂಝ್ ಜಿಎಲ್ಇ, ಬಿಎಂಡಬ್ಲ್ಯು ಎಕ್ಸ್5 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಇವಿ ಕಾರು ಬಿಡುಗಡೆ ಮಾಡಲಿದೆ ಓಲಾ ಎಲೆಕ್ಟ್ರಿಕ್

ಡಿಸೈನ್ ಮತ್ತು ಫೀಚರ್ಸ್

ಹೊಸ ಕಾರು ಈ ಬಾರಿ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ವಿನ್ಯಾಸದಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಹೊಸ ಕಾರಿನಲ್ಲಿ ಕಂಪನಿಯು ಸೆವೆನ್ ಸ್ಲಾಟ್ ಗ್ರಿಲ್, ಸ್ಲಿಮ್ ಹೆಡ್ ಲೈಟ್ಸ್ ಜೊತೆಗೆ ಎಲ್ಇಡಿ ಡಿಆರ್ ಎಲ್ಎಸ್ ಹೊಂದಿದ್ದು, ಡಿ ಪಿಲ್ಲರ್ ಗೆ ಹೊಂದಿಕೊಂಡಂತಿರುವ ರೂಫ್ ಎಫೆಕ್ಟ್ ಮತ್ತು ಎಲ್ಇಡಿ ಟೈಲ್ ಲೈಟ್ ಗಳು ಸ್ಪೋರ್ಟಿ ಲುಕ್ ಹೆಚ್ಚಿಸಲಿವೆ.

ಕಾರಿನ ಒಳಭಾಗದಲ್ಲೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ವಿಸ್ತರಿತ ಮೂರನೇ ಸಾಲಿನ ಆಸನದೊಂದಿಗೆ ಆರಾಮದಾಯಕ ಕ್ಯಾಬಿನ್ ಹೊಂದಿದೆ. ಇದರಲ್ಲಿ ಹೊಸದಾಗಿ 10.1 ಇಂಚಿನ ಸೆಂಟರ್ ಟಚ್ ಸ್ಕ್ರೀನ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದ ಸಹ ಪ್ರಯಾಣಿಕರಿಗೆ ಪ್ರತ್ಯೇಕ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಹಾಗೂ ಲೆವಲ್ 2 ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಹೊಂದಿರಲಿದೆ.

ಇದನ್ನೂ ಓದಿ: ಬಿಡುಗಡೆಯಾಗಲಿದೆ ಭರ್ಜರಿ ಮೈಲೇಜ್ ನೀಡುವ ಮಾರುತಿ ಬ್ರೆಝಾ ಸಿಎನ್‌ಜಿ!

ಹಾಗೆಯೇ ಹೊಸ ಕಾರಿನಲ್ಲಿ ಈ ಬಾರಿ ಪನರೊಮಿಕ್ ಸನ್ ರೂಫ್, ಲೆದರ್ ಆಸನಗಳು, ವೆಂಟಿಲೇಷನ್ ಹೊಂದಿರುವ ಮುಂಭಾಗದ ಆಸನಗಳು, ಎಲೆಕ್ಟ್ರಿಕ್ ಪವರ್ಡ್ ಹೊಂದಿರುವ ಟೈಲ್ ಗೇಟ್, ಹೆಡ್ಸ್ ಅಪ್ ಡಿಸ್ ಪ್ಲೇ ಸೇರಿದಂತೆ ಹಲವಾರು ಐಷಾರಾಮಿ ಫೀಚರ್ಸ್ ಈ ಕಾರಿನಲ್ಲಿರಲಿವೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಗ್ರ್ಯಾಂಡ್ ಚರೋಕಿ ಕಾರಿನಲ್ಲಿ ಜೀಪ್ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಬಲಶಾಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನೀಡಲಿದ್ದು, ಇದರಲ್ಲಿ ಕಂಪನಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ ಮಾಡಬಹುದಾಗಿದೆ. ಈ ಹಿಂದಿನ ಮಾದರಿಯಲ್ಲಿ ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ನೀಡುತ್ತಿದ್ದ ಜೀಪ್ ಕಂಪನಿಯು ಇದೀಗ ಕೇವಲ ಪೆಟ್ರೋಲ್ ವರ್ಷನ್ ಮಾತ್ರ ಬಿಡುಗಡೆ ಮಾಡುತ್ತಿದ್ದು, ಹೊಸ ಮಾದರಿಯಲ್ಲಿ ಆಟೋ, ಸ್ಪೋರ್ಟ್, ಸ್ಯಾಂಡ್/ಮಡ್ ಮತ್ತು ಸ್ನೋ ಡ್ರೈವಿಂಗ್ ಮೋಡ್ ನೀಡಲಾಗಿದೆ.

Published On - 6:46 pm, Thu, 27 October 22