
ಬೆಂಗಳೂರು (ಸೆ. 30): ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ನಡೆಯುತ್ತಿದೆ. ಇದರಲ್ಲಿ ಕೇವಲ ಸ್ಮಾರ್ಟ್ಫೋನ್ಗಳು, ಟಿವಿ, ಡ್ರೆಸ್ಗಳ ಮೇಲೆ ಮಾತ್ರವಲ್ಲದೆ ಅಟೋಮೊಬೈಲ್ ಸೆಕ್ಷನ್ನಲ್ಲೂ ಬಂಪರ್ ಆಫರ್ ನೀಡಲಾಗಿದೆ. ನೀವು ದಸರಾ ನವರಾತ್ರಿ ಪ್ರಯುಕ್ತ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ರಿಯಾಯಿತಿಯನ್ನು ತಪ್ಪಿಸಿಕೊಳ್ಳಬೇಡಿ. ಜನಪ್ರಿಯ ಇವಿ ಕಂಪನಿ ಆಂಪಿಯರ್ ಇತ್ತೀಚೆಗೆ ಮ್ಯಾಗ್ನಸ್ ಎಂಬ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಈಗ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ರೂ. 20 ಸಾವಿರ ರಿಯಾಯಿತಿಯೊಂದಿಗೆ ಲಭ್ಯವಿದೆ.
ಆಂಪಿಯರ್ ಮ್ಯಾಗ್ನಸ್ ನಿಯೋ ಎಲೆಕ್ಟ್ರಿಕ್ ಸ್ಕೂಟರ್‌ನ ಶೋ ರೂಂ ಬೆಲೆ ಸುಮಾರು 90 ಸಾವಿರ ರೂ. ಆದರೆ, ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಇದು 81,999 ರೂ. ಗಳಿಗೆ ಲಭ್ಯವಿದೆ. ನೀವು ಐಸಿಐಸಿಐ ಅಥವಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ನಿಮಗೆ 11 ಸಾವಿರ ರೂ. ಗಳವರೆಗೆ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಒಟ್ಟಾರೆಯಾಗಿ, ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 70 ಸಾವಿರ ರೂ. ಗಳಿಗೆ ಮನೆಗೆ ತರಬಹುದು.
ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೆ, ಯುಪಿಐ ಪಾವತಿಯ ಮೂಲಕ ಕನಿಷ್ಠ 7 ಸಾವಿರ ರೂ. ಗಳ ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್‌ನಲ್ಲಿ ನೀವು ಆಯ್ಕೆ ಮಾಡಬಹುದಾದ ಉತ್ತಮ ಕೊಡುಗೆ ಇದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್, ಸ್ಯಾಮ್‌ಸಂಗ್, ವಿವೋದಂತಹ ಪ್ರೀಮಿಯಂ ಫೋನ್‌ಗಳ ಬೆಲೆಗಳಿಗಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ.
EV ವೈಶಿಷ್ಟ್ಯಗಳ ವಿಷಯದಲ್ಲಿ, ಇದು 2.5 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಬರುತ್ತದೆ. ಇದು ಒಂದೇ ಚಾರ್ಜ್‌ನಲ್ಲಿ 90 ಕಿಲೋ ಮೀಟರ್‌ಗಳವರೆಗೆ ಚಲಿಸಬಹುದು. ಗರಿಷ್ಠ ವೇಗ ಗಂಟೆಗೆ 65 ಕಿಲೋ ಮೀಟರ್. ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 5 ಗಂಟೆಗಳು ಬೇಕಾಗುತ್ತದೆ. ಇದು 3.5-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಇದು IP67 ಜಲನಿರೋಧಕ ರೇಟಿಂಗ್ ಅನ್ನು ಕೂಡ ಹೊಂದಿದೆ. ಇದು USB ಚಾರ್ಜಿಂಗ್ ಪೋರ್ಟ್ ಮತ್ತು LED ಹೆಡ್‌ಲೈಟ್‌ಗಳನ್ನು ಹೊಂದಿದೆ. ಇದು 22 ಲೀಟರ್ ಅಂಡರ್ ಸೀಟ್ ಸ್ಟೋರೇಜ್‌ನೊಂದಿಗೆ ಬರುತ್ತದೆ.
ಈ ಸ್ಕೂಟರ್ ಐದು ವರ್ಷ ಅಥವಾ 75 ಸಾವಿರ ಕಿಲೋ ಮೀಟರ್ ವಾರಂಟಿಯೊಂದಿಗೆ ಬರುತ್ತದೆ. ಬ್ಯಾಟರಿಯು ಮೂರು ವರ್ಷ ಅಥವಾ 30 ಸಾವಿರ ಕಿಲೋ ಮೀಟರ್ ವಾರಂಟಿಯನ್ನು ಹೊಂದಿದೆ. ಇದು ಮೆಟಾಲಿಕ್ ರೆಡ್, ಗ್ಲೇಶಿಯಲ್ ವೈಟ್, ಓಷನ್ ಬ್ಲೂ, ಗ್ಯಾಲಕ್ಟಿಕ್ ಗ್ರೇ ಮತ್ತು ಗ್ಲಾಸಿ ಬ್ಲ್ಯಾಕ್‌ನಂತಹ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ನಗರ ಪ್ರದೇಶಗಳಲ್ಲಿ ದೈನಂದಿನ ಪ್ರಯಾಣಕ್ಕೆ ಸೂಕ್ತವಾದ ಒಂದು ಕುಟುಂಬ ಸ್ಕೂಟರ್ ಇದಾಗಿದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ