Auto Tips: ಟ್ರಾಫಿಕ್​ನಲ್ಲಿ 1 ನಿಮಿಷ ಕಾರು ನಿಲ್ಲಿಸಿದ್ರೆ ಎಷ್ಟು ಪೆಟ್ರೋಲ್ ಖಾಲಿ ಆಗುತ್ತದೆ?: ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 07, 2024 | 4:04 PM

ಕಾರನ್ನು ನಿಲ್ಲಿಸುವಾಗ ಇಂಧನ (ಪೆಟ್ರೋಲ್/ಡೀಸೆಲ್) ಬಳಕೆಯು ಕಾರಿನ ಪ್ರಕಾರ, ಎಂಜಿನ್ ಸಾಮರ್ಥ್ಯ ಮತ್ತು ಎಂಜಿನ್ ದಕ್ಷತೆಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ನಿಮ್ಮ ಕಾರಿನ ಎಂಜಿನ್ 1000 ರಿಂದ 2000 cc ನಡುವೆ ಇದ್ದರೆ, 1-ನಿಮಿಷದ ನಿಲುಗಡೆಗೆ ಸುಮಾರು 0.01 ರಿಂದ 0.02 ಲೀಟರ್ ಪೆಟ್ರೋಲ್ ಅನ್ನು ವ್ಯಯಿಸಲಾಗುತ್ತದೆ.

Auto Tips: ಟ್ರಾಫಿಕ್​ನಲ್ಲಿ 1 ನಿಮಿಷ ಕಾರು ನಿಲ್ಲಿಸಿದ್ರೆ ಎಷ್ಟು ಪೆಟ್ರೋಲ್ ಖಾಲಿ ಆಗುತ್ತದೆ?: ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಕಾರು ಡ್ರೈವ್ ಮಾಡುವಾಗ ಟ್ರಾಫಿಕ್​ನಲ್ಲಿ ಸಿಲುಕಿಕೊಳ್ಳುವುದು ಕಾಮನ್. ಅದರಲ್ಲೂ ಬೆಂಗಳೂರಿನ ಟ್ರಾಫಿಕ್​ನಲ್ಲಿ ಕೆಲವೊಂದು ಬಾರಿ ಗಂಟೆಗಳ ಕಾಲ ನಿಲ್ಲಬೇಕಾಗುತ್ತದೆ. ಕೆಲವರು ಟ್ರಾಫಿಕ್​ನಲ್ಲಿ ಕಾರು ಸಿಲುಕಿಕೊಂಡಾಗ ಸ್ವಿಚ್ ಆಫ್ ಮಾಡದೆ ಹಾಗೆ ನಿಲ್ಲಿಸಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕಾರಿನಲ್ಲಿ ಇಂಧನ ಬಳಕೆ ಕೂಡ ಖಾಲಿ ಆಗುತ್ತಲೇ ಇರುತ್ತದೆ. ಆದರೆ, ಈ ಸಂದರ್ಭ ಇಂಧನ ಬಳಕೆ ಎಷ್ಟು ಆಗಬಹುದು ಎಂದು ನೀವು ಊಹಿಸಿದ್ದೀರಾ?.

ಕಾರನ್ನು ನಿಲ್ಲಿಸುವಾಗ ಇಂಧನ (ಪೆಟ್ರೋಲ್/ಡೀಸೆಲ್) ಬಳಕೆಯು ಕಾರಿನ ಪ್ರಕಾರ, ಎಂಜಿನ್ ಸಾಮರ್ಥ್ಯ ಮತ್ತು ಎಂಜಿನ್ ದಕ್ಷತೆಯನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ನಿಮ್ಮ ಕಾರಿನ ಎಂಜಿನ್ 1000 ರಿಂದ 2000 cc ನಡುವೆ ಇದ್ದರೆ, 1-ನಿಮಿಷದ ನಿಲುಗಡೆಗೆ ಸುಮಾರು 0.01 ರಿಂದ 0.02 ಲೀಟರ್ ಪೆಟ್ರೋಲ್ ಅನ್ನು ವ್ಯಯಿಸಲಾಗುತ್ತದೆ.

ಸಣ್ಣ ಇಂಜಿನ್‌ಗಳು (1000 ರಿಂದ 1200 ಸಿಸಿ): ಸಣ್ಣ ಎಂಜಿನ್ ಹೊಂದಿರುವ ವಾಹನಗಳು 1 ನಿಮಿಷದಲ್ಲಿ ಸರಿಸುಮಾರು 0.01 ಲೀಟರ್ ಪೆಟ್ರೋಲ್ ಅನ್ನು ಸೇವಿಸಬಹುದು.

ಮಧ್ಯಮ ಎಂಜಿನ್‌ಗಳು (1500 cc ವರೆಗೆ): ಈ ವಾಹನಗಳು ಪ್ರತಿ ನಿಮಿಷಕ್ಕೆ ಸುಮಾರು 0.015 ಲೀಟರ್‌ಗಳನ್ನು ಸೇವಿಸಬಹುದು.

ದೊಡ್ಡ ಎಂಜಿನ್‌ಗಳು (2000 cc ಗಿಂತ ಹೆಚ್ಚು): ದೊಡ್ಡ ಎಂಜಿನ್‌ಗಳು 1 ನಿಮಿಷದಲ್ಲಿ ಸುಮಾರು 0.02 ಲೀಟರ್ ಅಥವಾ ಹೆಚ್ಚಿನ ಇಂಧನವನ್ನು ಬಳಸಬಹುದು.

ಈ ಆಧಾರದ ಮೇಲೆ, ನಿಮ್ಮ ಕಾರು ನಿರಂತರವಾಗಿ ಟ್ರಾಫಿಕ್ ಲೈಟ್​ನಲ್ಲಿ ನಿಲ್ಲಬೇಕಾದರೆ, ಇದು ಒಂದು ತಿಂಗಳಲ್ಲಿ ಎಷ್ಟು ಇಂಧನ ವೆಚ್ಚಕ್ಕೆ ಕಾರಣವಾಗಬಹುದು ಎಂಬುದನ್ನು ಯೋಚಿಸಿ.

ಇದನ್ನೂ ಓದಿ: ಹಿಲ್ ಹೋಲ್ಡ್ ಕಂಟ್ರೋಲ್‌ನ ಪ್ರಯೋಜನವೇನು?: ಹೊಸ ಕಾರು ಖರೀದಿಸುವ ಮೊದಲು ಇದನ್ನು ತಿಳಿದುಕೊಳ್ಳಿ

ಟ್ರಾಫಿಕ್ ಲೈಟ್‌ನಲ್ಲಿ ಕಾರನ್ನು ಆಫ್ ಮಾಡುವುದು ಉತ್ತಮ:

ಟ್ರಾಫಿಕ್ ಲೈಟ್‌ನಲ್ಲಿ ದೀರ್ಘಕಾಲ ನಿಲ್ಲಿಸಿದಾಗ ವಾಹನದ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುವುದರಿಂದ ಸಾಕಷ್ಟು ಇಂಧನವನ್ನು ಉಳಿಸಬಹುದು. ತಜ್ಞರ ಪ್ರಕಾರ, ನಿಲ್ಲಿಸುವ ಸಮಯ 30 ಸೆಕೆಂಡುಗಳಿಗಿಂತ ಹೆಚ್ಚಿದ್ದರೆ, ಇಂಧನ ಬಳಕೆಯನ್ನು ಕಡಿಮೆ ಮಾಡಲು ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮ ಮಾರ್ಗವಾಗಿದೆ.

ಇದರ ಅನುಕೂಲಗಳು ಈ ಕೆಳಗಿನಂತಿವೆ:

ಇಂಧನ ಮಿತವ್ಯಯ: ಎಂಜಿನ್ ಚಾಲನೆಯಲ್ಲಿರುವಾಗ ಇಂಧನವನ್ನು ನಿರಂತರವಾಗಿ ಬಳಸಲಾಗುತ್ತದೆ. ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುವ ಮೂಲಕ, ಇಂಧನ ಬಳಕೆ ನೇರವಾಗಿ ನಿಲ್ಲುತ್ತದೆ.

ಮಾಲಿನ್ಯ ಕಡಿತ: ವಾಹನದ ಎಂಜಿನ್ ಸ್ವಿಚ್ ಆಫ್ ಮಾಡುವುದರಿಂದ ಹೊರಸೂಸುವಿಕೆ ನಿಲ್ಲುತ್ತದೆ, ಇದು ಪರಿಸರದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ಇಂಜಿನ್ ಬಾಳಿಕೆ ಹೆಚ್ಚುತ್ತದೆ: ಇಂಜಿನ್ ಅನ್ನು ದೀರ್ಘಕಾಲ ಚಾಲನೆಯಲ್ಲಿ ಇಡುವುದರಿಂದ ಅದರ ಜೀವಿತಾವಧಿ ಕಡಿಮೆಯಾಗುತ್ತದೆ. ಆದ್ದರಿಂದ, ಅದನ್ನು ಆಫ್ ಮಾಡುವುದರಿಂದ ಅದರ ದಕ್ಷತೆಯೂ ಹೆಚ್ಚಾಗುತ್ತದೆ.

ಆದ್ದರಿಂದ, ನೀವು 30 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಟ್ರಾಫಿಕ್ ಲೈಟ್‌ನಲ್ಲಿ ನಿಲ್ಲಬೇಕಾದರೆ, ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮ ನಿರ್ಧಾರ ಆಗಿದೆ.

ಮತ್ತಷ್ಟು ಆಟೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ