Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಆಕಾಶದಿಂದ ಜಾರಿ ಭೂಮಿಗೆ ಬಿದ್ದ ಮೋಡ; ಹಿಂಗೆಲ್ಲಾ ನಡೆಯೋಕೆ ಸಾಧ್ಯಾನಾ?

ಮೋಡಗಳು ಕರಗಿ ಧರಗೆ ಮಳೆ ಸುರಿಯುವುದನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಘಟನೆಯೊಂದು ನಡೆದಿದ್ದು, ಒಂದು ಸಣ್ಣ ಮೋಡವೇ ಧರೆಗಿಳಿದು ಬಂದಿದೆ. ಈ ಕುರಿತ ಅಚ್ಚರಿಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಹಿಂಗೆಲ್ಲಾ ನಡೆಯೋಕೆ ಹೇಗೆ ಸಾಧ್ಯ ಎಂದು ನೋಡುಗರು ಪ್ರಶ್ನೆ ಕೇಳಿದ್ದಾರೆ. ನಿಜಕ್ಕೂ ಇದು ಮೋಡವೇ ಅಥವಾ ಬೇರೆ ಏನಾದ್ರೂ ವಸ್ತುವೇ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 21, 2024 | 2:48 PM

ಪ್ರಕೃತಿಯ ಮಡಿಲಲ್ಲಿ ಹಲವಾರು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಇಂತಹ ಕೆಲವೊಂದು ವಿಷಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಇದೀಗ ಅಂತಹದ್ದೇ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮೋಡ ಕರಗಿ ಮಳೆಯಾಗುವ ಬದಲು ಒಂದು ಸಣ್ಣ ಮೋಡವೇ ಧರೆಗಿಳಿದು ಬಂದಿದೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಅರೇ ಹಿಂಗೆಲ್ಲಾ ನಡೆಯೋಕೆ ಸಾಧ್ಯನಾ ಎಂದು ನೋಡುಗರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಜಕ್ಕೂ ಇದು ಮೋಡವೇ ಅಥವಾ ಬೇರೆ ಏನಾದ್ರೂ ವಸ್ತುವೇ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಈ ಅಚ್ಚರಿಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ಇಲ್ಲಿನ ಬೋರ್ನಿಯೋ ದ್ವೀಪದ ಕಾಲಿಮಂಟನ್‌ನಲ್ಲಿರುವ ಮುರಾ ತುಹುಪ್‌, ಮುರುಂಗ್‌ ರಾಯಾದಲ್ಲಿನ ಗಣಿಗಾರಿಕೆ ಪ್ರದೇಶದ ಹತ್ತಿರ ಆಕಾಶದಿಂದ ಮೋಡದಂತಹ ವಸ್ತುವೊಂದು ಭೂಮಿಗೆ ಬಿದ್ದಿದೆ. ಮೋಡ ಬೀಳುವಂತಹ ಅಲ್ಲಿದ್ದ ಕೆಲಸಗಾರರು ವಿಡಿಯೋ ಮಾಡಿದ್ದು, ಮೋಡ ಭೂಮಿಗೆ ಬೀಳಲು ಅದು ಹೇಗೆ ಸಾಧ್ಯ ಎಂದು ಹಲವರು ಅಚ್ಚರಿಪಟ್ಟಿದ್ದಾರೆ. ಈ ಕುರಿತ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ (BMKG) ಇದು ನಿಜವಾದ ಮೋಡವಲ್ಲ ಬದಲಿಗೆ ಇದೊಂದು ಫೋಮ್‌ ತರಹದ ವಸ್ತು ಎಂಬುದನ್ನು ಸ್ಪಷ್ಟಪಡಿಸಿದೆ.

“ಇಲ್ಲಿ ಹತ್ತಿರದ್ದಲೇ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದ್ದು, ಇದರಿಂದ ಹೊರ ಬರುವ ಅನಿಲಗಳು ಹೆಚ್ಚಿನ ಒತ್ತಡದಿಂದಾಗಿ ಗಾಳಿ ಮತ್ತು ತೇವಾಂಶದ ಜೊತೆ ಸಂಯೋಜನೆಗೊಂಡು ನಂತರ ಆ ಅನಿಲ ಘನೀಕರಣಗೊಂಡು ಮೋಡದ ರೀತಿಯಲ್ಲಿ ಪರಿವರ್ತನೆಯಾಗಿದೆ. ಆದ್ದರಿಂದ ಇದು ಮೋಡವಲ್ಲ ಬದಲಿಗೆ ಫೋಮ್‌ ಆಗಿದೆ. ಮೋಡಗಳು ಯಾವತ್ತು ಬೀಳುವುದಿಲ್ಲ. ಏಕೆಂದರೆ ಅವುಗಳ ಕಣಗಳು ತುಂಬಾ ಹಗುರವಾಗಿರುತ್ತದೆ ಮತ್ತು ಕ್ಷಣ ಮಾತ್ರದಲ್ಲಿ ಚದುರಿ ಹೋಗುತ್ತವೆ. ಅಲ್ಲದೆ ಮೋಡಗಳ ಕಣಗಳು ನೆಲವನ್ನು ತಲುಪುವ ಮೊದಲೇ ಆವಿಯಾಗುತ್ತದೆ” ಎಂದು BMKG ಸಾರ್ವಜನಿಕ ಹವಾಮಾನ ಇಲಾಖೆಯ ನಿರ್ದೇಶಕ ಆಂಡ್ರಿ ರಾಮ್‌ಧಾನಿ ಹೇಳಿದ್ದಾರೆ.

Undercover.id ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಗಣಿಗಾರಿಕೆ ಸ್ಥಳದ ಸಮೀಪ ಮೋಡದಂತಹ ವಸ್ತುವೊಂದು ಆಕಾಶದಿಂದ ಧರೆಗುರುಳಿ ಬರುವಂತಹ ದೃಶ್ಯವನ್ನು ಕಾಣಬಹುದು. ಅಲ್ಲಿದ್ದ ಕೆಲಸಗಾರರು ಇದು ಮೋಡವೇ ಎನ್ನುತ್ತಾ ಅದರ ಹತ್ತಿರಕ್ಕೆ ಓಡಿ ಹೋಗಿದ್ದಾರೆ.

ಇದನ್ನೂ ಓದಿ: 12 ದೈತ್ಯ ರೋಬೋಟ್‌ಗಳನ್ನು ಅಪಹರಣ ಮಾಡಿದ ಪುಟಾಣಿ ರೋಬೋಟ್; ವಿಡಿಯೋ ವೈರಲ್‌

ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೋಡವಲ್ಲ ಇದು ನೊರೆ ಇದ್ದಂಗೆ ಕಾಣುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೋಡ ಬೀಳಲು ಸಾಧ್ಯವೇʼ ಎಂದು ಅಚ್ಚರಿ ಪಟ್ಟಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ