AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 12 ದೈತ್ಯ ರೋಬೋಟ್‌ಗಳನ್ನು ಅಪಹರಣ ಮಾಡಿದ ಪುಟಾಣಿ ರೋಬೋಟ್; ವಿಡಿಯೋ ವೈರಲ್‌

ಈ ಪ್ರಪಂಚದಲ್ಲಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳನ್ನು ಕೇಳಿದ್ರೆ ತಲೆ ತಿರುಗಿದಂತಾಗುತ್ತದೆ. ಇಂತಹದ್ದೊಂದು ಅಚ್ಚರಿಯ ಘಟನೆ ಇದೀಗ ನಡೆದಿದ್ದು, ಪುಟ್ಟ ರೋಬೋಟ್‌ ಶೋರೂಮ್‌ ಒಂದರಿಂದ 12 ದೈತ್ಯ ರೋಬೋಟ್‌ಗಳನ್ನು ಅಪಹರಣ ಮಾಡಿದೆ. ಈ ಅಪಹರಣದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮಾಲಾಶ್ರೀ ಅಂಚನ್​
| Edited By: |

Updated on: Nov 21, 2024 | 12:48 PM

Share

ಮನುಷ್ಯರು ಮನುಷ್ಯರನ್ನು, ಪ್ರಾಣಿಗಳನ್ನು ಅಪಹರಣ ಮಾಡುವಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಇಂತಹ ಅಪಹರಣದ ಸಾಕಷ್ಟು ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಂತ್ರಜ್ಞಾನದ ಈ ಯುಗದಲ್ಲಿ ಒಂದು ರೋಬೋಟ್‌ ಮತ್ತೊಂದು ರೋಬೋಟ್‌ ಅನ್ನು ಕಿಡ್ನಾಪ್‌ ಮಾಡಿದೆ. ಹೌದು ಪುಟಾಣಿ ಎಐ ರೋಬೋಟ್‌ ಒಂದು ಶೋರೂಮ್‌ಗೆ ನುಗ್ಗಿ ಇಲ್ಲಿ ನಿಮಗೆ ರಜೆ ಸಿಗಲ್ಲ, ನೀವು ನನ್ನೊಂದಿಗೆ ಮನೆಗೆ ಬನ್ನಿ ಎಂದು ಮನುಷ್ಯರಂತೆ ಸಂಭಾಷಣೆ ನಡೆಸಿ 12 ದೈತ್ಯ ರೋಬೋಟ್‌ಗಳನ್ನು ಅಪಹರಣ ಮಾಡಿದೆ. ಈ ಅಪಹರಣದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ನಮ್ಮ ನೆರೆ ರಾಷ್ಟ್ರ ಚೀನಾದಲ್ಲಿ ನಡೆದಿದ್ದು, ರಾತ್ರಿ ವೇಳೆ ಶೋ ರೂಮ್‌ ಒಂದಕ್ಕೆ ನುಗ್ಗಿದ AI ರೋಬೋಟ್‌ ಅಲ್ಲಿದ್ದ 12 ರೋಬೋಟ್‌ಗಳನ್ನು ಕಿಡ್ನಾಪ್‌ ಮಾಡಿದೆ. ಈ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಕುತೂಹಲಕಾರಿ ಘಟನೆಯು ಓದಲು ಮತ್ತು ಕೇಳಲು ತಮಾಷೆಯಾಗಿ ಕಾಣಿಸಿದರೂ ಇದು AI ಯ ದುರುಪಯೋಗದ ಬಗ್ಗೆ ಕಾಳಜಿ ಮತ್ತು ಚರ್ಚೆಯನ್ನು ಹುಟ್ಟಿಹಾಕಿದೆ. ವರದಿಗಳ ಪ್ರಕಾರ, ಹ್ಯಾಂಗ್‌ಝೌ ಕಂಪೆನಿಯ ಇರ್ಬೈ ಹೆಸರಿನ ಎಐ ಚಾಲಿತ ರೋಬೋಟ್‌ ಶಾಂಘೈ ರೋಬೋಟಿಕ್ಸ್ ಕಂಪನಿಯ ಶೋರೂಮ್‌ಗೆ ಬಂದು ಅಲ್ಲಿದ್ದ 12 ದೊಡ್ಡ ರೋಬೋಟ್‌ಗಳೊಂದಿಗೆ ಮಾನವರಂತೆ ಸಂವಹನ ನಡೆಸಿ ಅವುಗಳನ್ನು ಅಪಹರಿಸಿದೆ. ಇರ್ಬೈ ಜೊತೆ ಮಾತನಾಡಿದ ಇತರೆ ರೋಬೋಟ್‌ಗಳು ನಮಗೆ ರಜೆ ಇಲ್ಲ ಹಾಗಾಗಿ ನಮಗೆ ಮನೆಗೆ ಕೂಡಾ ಹೋಗಲು ಆಗುತ್ತಿಲ್ಲ ಎಂದು ಹೇಳಿದಾಗ, ಹಾಗಾದ್ರೆ ನೀವು ನನ್ನೊಂದಿಗೆ ಮನೆಗೆ ಬನ್ನಿ ಎಂದು ಮನವೊಲಿಸಿ ಅಲ್ಲಿದ್ದ 12 ರೋಬೋಟ್‌ಗಳನ್ನು ಅಪಹರಣ ಮಾಡಿದೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ರೋಬೋಟ್‌ಗಳ ನಡುವಿನ ಸಂಭಾಷಣೆಯೂ ರೆಕಾರ್ಡ್‌ ಆಗಿದೆ.

ಆರಂಭದಲ್ಲಿ ಇದೊಂದು ನಕಲಿ ವಿಡಿಯೋ ಎಂದು ಪರಿಗಣಿಸಲಾಗಿತ್ತು. ಆದರೆ ನಂತರ ಈ ಎರಡೂ ಕಂಪನಿಗಳು ಈ ಹೈಜಾಕ್‌ ಘಟನೆ ನಡೆದದ್ದು ನಿಜವೆಂದು ದೃಢಪಡಿಸಿದೆ. ಇರ್ಬೈ ರೋಬೋಟ್‌ ಇತರೆ ದೊಡ್ಡ ರೋಬೋಟ್‌ಗಳಲ್ಲಿನ ಭದ್ರತಾ ದುರ್ಬಲತೆಯನ್ನು ದುರ್ಬಳಕೆ ಮಾಡಿಕೊಂಡು, ಅವುಗಳ ಕ್ರಿಯೆಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು ಈ ಮೂಲಕ ಸಣ್ಣ ರೋಬೋಟ್‌ ದೊಡ್ಡ ರೋಬೋಟ್‌ಗಳನ್ನು ಅಪಹರಣ ಮಾಡಿದ್ದು ಎಂಬುದು ತಿಳಿದು ಬಂದಿದೆ. ಇದೀಗ ಈ ಘಟನೆ AI ವ್ಯವಸ್ಥೆಯ ಸುರಕ್ಷತೆ ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: ವಿಮಾನದ ರೆಕ್ಕೆಯ ಮೇಲೆ ಹಾವು ನೇತಾಡುತ್ತಿರುವ ವೈರಲ್ ವಿಡಿಯೋದ ಸತ್ಯಾಂಶ ಏನು?: ಇಲ್ಲಿದೆ ನೋಡಿ

LaikCumhuriyett ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಶೋರೂಮ್‌ ಒಂದಕ್ಕೆ ನುಗ್ಗಿದ್ದ ಪುಟಾಣಿ ರೋಬೋಟ್‌ ಅಲ್ಲಿದ್ದ ಇತರೆ 12 ದೈತ್ಯ ರೋಬೋಟ್‌ಗಳನ್ನು ಮನೆಗೆ ಬನ್ನಿ ಎಂದು ಮನವೊಲಿಸಿ ಕಿಡ್ನಾಪ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ಅಪಹರಣದ ಶಾಕಿಂಗ್‌ ದೃಶ್ಯವನ್ನು ಕಂಡು ನೋಡುಗರು ಫುಲ್‌ ಶಾಕ್‌ ಆಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ