Fact Check: ವಿಮಾನದ ರೆಕ್ಕೆಯ ಮೇಲೆ ಹಾವು ನೇತಾಡುತ್ತಿರುವ ವೈರಲ್ ವಿಡಿಯೋದ ಸತ್ಯಾಂಶ ಏನು?: ಇಲ್ಲಿದೆ ನೋಡಿ
ಈ ವೈರಲ್ ವಿಡಿಯೋವನ್ನು ಸಂಶೋಧಿಸಿದಾಗ ಇದು ಡಿಜಿಟಲ್ ಎಡಿಟ್ ಮಾಡಿರುವುದು ಎಂದು ನಮಗೆ ತಿಳಿಯಿತು. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಾವಿನ ಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ನೈಸರ್ಗಿಕವಾಗಿ ಕಾಣುವುದಿಲ್ಲ.
ಈ ವರ್ಷದ ಜನವರಿಯಲ್ಲಿ ಬ್ಯಾಂಕಾಕ್‌ನಿಂದ ಟೇಕ್ ಆಫ್ ಆದ ಏರ್ ಏಷ್ಯಾ ಥಾಯ್ಲೆಂಡ್ ವಿಮಾನದ ಒಳಗೆ ಹಾವನ್ನು ಕಂಡು ನೀರಿನ ಬಾಟಲಿಯಲ್ಲಿ ಅದನ್ನು ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ, 30,000 ಅಡಿ ಎತ್ತರದಲ್ಲಿ ಸಣ್ಣ ಹಾವು ವಿಮಾನದ ರೆಕ್ಕೆಯಲ್ಲಿ ನೇತಾಡುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತದೆ. ಈ ವಿಡಿಯೋ ಯಾವಾಗಿನದ್ದು, ಎಲ್ಲಿಯದ್ದು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, “ಇಂಡಿಗೋ ವಿಮಾನದ ರೆಕ್ಕೆಯಲ್ಲಿ ಹಾವು ನೇತಾಡುತ್ತಿರುವುದು ಕಂಡುಬಂದಿದೆ, ಪ್ರಯಾಣಿಕರು ದಿಗ್ಭ್ರಮೆಗೊಂಡಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
Fact Check:
ಟಿವಿ9 ಇನ್ನಡ ಫ್ಯಾಕ್ಟ್ ಚೆಕ್ ತನ್ನ ತನಿಖೆಯ ಸಮಯದಲ್ಲಿ ಈ ವಿಡಿಯೋದ ಕುರಿತು ಯಾವುದೇ ಖಚಿತವಾದ ತೀರ್ಮಾನಕ್ಕೆ ಬಂದಿಲ್ಲ, ಆದಾಗ್ಯೂ, ಸಂಶೋಧನೆಯ ಆಧಾರದ ಮೇಲೆ ವಿಮಾನದ ಈ ವಿಡಿಯೋನ್ನು ತಿರುಚಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ವೈರಲ್ ವಿಡಿಯೋವನ್ನು ಸಂಶೋಧಿಸಿದಾಗ ಇದು ಡಿಜಿಟಲ್ ಎಡಿಟ್ ಮಾಡಿರುವುದು ಎಂದು ನಮಗೆ ತಿಳಿಯಿತು. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹಾವಿನ ಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ನೈಸರ್ಗಿಕವಾಗಿ ಕಾಣುವುದಿಲ್ಲ. ಅಲ್ಲದೆ ಹಾವಿನ ಚಲನವಲನ ಸಹಜವಾಗಿರುವುದಿಲ್ಲ. ಇದನ್ನು ಕೃತಕವಾಗಿ ರಚಿಸಿರುವಂತೆ ತೋರುತ್ತಿದೆ.
ಅಲ್ಲದೆ ವಿಮಾನವು ಅಷ್ಟು ಎತ್ತರವನ್ನು ತಲುಪಿದಾಗ, ಅಂತಹ ಸಣ್ಣ ಸರೀಸೃಪವು ತಂಪಾದ ವಾತಾವರಣದಲ್ಲಿ ಬದುಕಲು ಸಾಧ್ಯವಿಲ್ಲ. ಹಾವು ಶೀತ-ರಕ್ತದ ಪ್ರಾಣಿಯಾಗಿದ್ದು, ಬದುಕಲು ಒಂದು ನಿರ್ದಿಷ್ಟ ತಾಪಮಾನದ ಅಗತ್ಯವಿದೆ. ಈ ರೀತಿಯ ಹೆಚ್ಚಿನ ತಾಪಮಾನದಲ್ಲಿ, ಹಾವು ಬದುಕಲು ಅಸಾಧ್ಯವಾಗಿದೆ. ಈ ವಾತಾವರಣದ ಜೊತೆಗೆ ಇಷ್ಟು ಎತ್ತರದಲ್ಲಿ ಆಮ್ಲಜನಕದ ಕೊರತೆ ಮತ್ತು ಗಂಟೆಗೆ ಸುಮಾರು 900 ಕಿ.ಮೀ ವೇಗದಲ್ಲಿ ಹಾರುವ ವಿಮಾನದ ವೇಗ ಮತ್ತು ಅದರ ಸುತ್ತಲಿನ ಗಾಳಿಯಿಂದಾಗಿ ಹಾವು ಕೆಳಕ್ಕೆ ಉರುಳುತ್ತದೆ. ಅಲ್ಲದೆ, ವಿಮಾನದ ನಿರಂತರ ಕಂಪನದಿಂದಾಗಿ ಹಾವು ತನ್ನ ರೆಕ್ಕೆಗೆ ಹೆಚ್ಚು ಕಾಲ ಅಂಟಿಕೊಳ್ಳುವುದಿಲ್ಲ.
ಹಾಗೆಯೆ ವಿಡಿಯೋ ನೋಡಿದಾಗ ಹಾವಿನ ಮೇಲೆ ಬಿಸಿಲು ಬಿದ್ದಂತೆ ಕಾಣುತ್ತದೆ. ಹಾವಿನ ಚಲನೆಯನ್ನು ಹೈಲೈಟ್ ಮಾಡಲು ಮಾತ್ರ ಇಲ್ಲಿ ಹೆಚ್ಚಿನ ಬ್ರೈಟ್ನೆಸ್ ನೀಡಿದಂತೆ ತೋರುತ್ತದೆ. ನೈಸರ್ಗಿಕ ಸೂರ್ಯನ ಬೆಳಕು ಇದ್ದರೆ, ಹಾವು ಹೊರತುಪಡಿಸಿ, ಫ್ಲಿಪ್ ಟ್ರ್ಯಾಕ್ ಫೇರಿಂಗ್ ಕೂಡ ಬೆಳಕಿನಿಂದ ಕಾಣಬೇಕಿತ್ತು. ಅಲ್ಲದೆ ಹಾವಿನ ನೆರಳು ಕೂಡ ಕಾಣಿಸುವುದಿಲ್ಲ.
2013 ರಲ್ಲಿ, ಕೇರ್ನ್ಸ್‌ನಿಂದ ಪಪುವಾ ನ್ಯೂಗಿನಿಯಾಗೆ ಎರಡು ಗಂಟೆಗಳ ಕ್ವಾಂಟಾಸ್ ಏರ್‌ಲೈನ್ಸ್ ವಿಮಾನದ ರೆಕ್ಕೆಯ ಮೇಲೆ ಡ್ರ್ಯಾಗನ್ ಕಾಣಿಸಿಕೊಂಡಿತ್ತು. ಆದರೆ ಈ ಘಟನೆಯಲ್ಲಿ ಹಾವು ಇಳಿಯುವ ವೇಳೆಗೆ ಮೃತಪಟ್ಟಿರುವುದು ಕಂಡುಬಂದಿದೆ. ಗಾಳಿಯ ವೇಗಕ್ಕೆ ಹಾವು ಬೀಸುತ್ತಿರುವುದನ್ನು ಈ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಇಷ್ಟು ಎತ್ತರದಲ್ಲಿ ಹಾವು ಬದುಕಲು ಸಾಧ್ಯವಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.
ಈ ಎಲ್ಲ ತನಿಖೆಯ ನಂತರ ನಾವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಡಿಜಿಟಲ್ ಎಡಿಟ್ ಮಾಡಲಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಡಿಯೋದಲ್ಲಿ ತೋರಿಸಿರುವ ದೃಶ್ಯ ವಾಸ್ತವದಲ್ಲಿ ನಡೆದಿಲ್ಲ. ಈ ರೀತಿಯ ಘಟನೆ ನಡೆಯಲು ಸಾಧ್ಯವೇ ಇಲ್ಲ ಎಂಬ ಬಗ್ಗೆ ನಾವು ಯಾವುದೇ ಖಚಿತವಾದ ತೀರ್ಮಾನಕ್ಕೆ ಬಂದಿಲ್ಲ, ಆದರೆ ಈ ವಿಡಿಯೋವನ್ನು ಡಿಜಿಟಲ್ ಆಗಿ ನಿರ್ಮಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ