Bajaj CNG Bike: ದೇಶದ 77 ನಗರಗಳಲ್ಲಿ ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್ ವಿತರಣೆ ಶುರು!

|

Updated on: Aug 19, 2024 | 6:57 PM

ಬಜಾಜ್ ಆಟೋ ಕಂಪನಿ ತನ್ನ ಹೊಸ ಫ್ರೀಡಂ 125 ಸಿಎನ್​ಜಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಹೊಸ ಬೈಕಿನ ವಿತರಣೆ ಆರಂಭಿಸಿದೆ.

Bajaj CNG Bike: ದೇಶದ 77 ನಗರಗಳಲ್ಲಿ ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್ ವಿತರಣೆ ಶುರು!
ಬಜಾಜ್ ಫ್ರೀಡಂ 125 ಸಿಎನ್​ಜಿ ಬೈಕ್
Follow us on

ಬಜಾಜ್ ಆಟೋ ಕಂಪನಿಯು ತನ್ನ ಬಹುನೀರಿಕ್ಷಿತ ಫ್ರೀಡಂ 125 ಸಿಎನ್​ಜಿ (Freedom 125 CNG ) ಬೈಕ್ ಬಿಡುಗಡೆ ಮಾಡಿ ವಿತರಣೆ ಆರಂಭಿಸಿದೆ. ಹೊಸ ಬೈಕ್ ಬಿಡುಗಡೆಯ ಆರಂಭದಲ್ಲಿ ಆಯ್ದ ಕೆಲವೇ ನಗರಗಳಲ್ಲಿ ವಿತರಣೆ ಆರಂಭಿಸಿದ್ದ ಬಜಾಜ್ ಕಂಪನಿಯು ಇದೀಗ ಟೈರ್ 2 ಮತ್ತು ಟೈರ್ 3 ಯಲ್ಲಿರುವ 77 ನಗರಗಳಿಗೂ ಮಾರಾಟವನ್ನು ವಿಸ್ತರಿಸಿದೆ.

ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುವ ಫ್ರೀಡಂ 125 ಸಿಎನ್​ಜಿ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ಡ್ರಮ್ ವೆರಿಯೆಂಟ್ ಗೆ ರೂ. 95 ಸಾವಿರ, ಡ್ರಮ್ ಎಲ್ಇಡಿ ವೆರಿಯೆಂಟ್ ಗೆ ರೂ. 1.05 ಲಕ್ಷ ಮತ್ತು ಡಿಸ್ಕ್ ಎಲ್ಇಡಿ ವೆರಿಯೆಂಟ್ ರೂ. 1.10 ಲಕ್ಷ ಬೆಲೆ ಹೊಂದಿದೆ. ಆಕರ್ಷಕ ಬೆಲೆಯೊಂದಿಗೆ ಹೊಸ ಬೈಕ್ ಮಾದರಿಯು ಈಗಾಗಲೇ 50 ಸಾವಿರಕ್ಕೂ ಹೆಚ್ಚು ಯುನಿಟ್ ಗಳಿಗೆ ಬುಕಿಂಗ್ ಪಡೆದುಕೊಂಡಿದ್ದು, ಇದೀಗ ಮಾರಾಟ ಜಾಲ ವಿಸ್ತರಣೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ.

ಪೆಟ್ರೋಲ್ ಮತ್ತು ಸಿಎನ್​ಜಿ ಎರಡೂ ಮಾದರಿಯಲ್ಲೂ ಚಾಲನೆಗೊಳ್ಳುವ ಹೊಸ ಬೈಕ್ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, 125ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಲಾಗಿದೆ. ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 9.37 ಹಾರ್ಸ್ ಪವರ್, 9.7 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಪ್ರತಿ ಕೆಜಿ ಸಿಎನ್​ಜಿಗೆ ಬರೋಬ್ಬರಿ 102 ಕಿ.ಮೀ ಮೈಲೇಜ್ ನೀಡುತ್ತೆ. ಹಾಗೆಯೇ ಹೊಸ ಬೈಕಿನಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಜೋಡಣೆ ಮಾಡಲಾಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸಬಹುದಾಗಿದೆ.

ಇದನ್ನೂ ಓದಿ: ಬಜೆಟ್ ಬೆಲೆಗೆ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ ಎಂಜಿ ವಿಂಡ್ಸರ್ ಇವಿ

ಹೊಸ ಬೈಕ್ ಅನ್ನು ಪೆಟ್ರೋಲ್ ಮತ್ತು ಸಿಎನ್ ಜಿ ಎರಡೂ ಮಾದರಿಯಲ್ಲೂ ಒಟ್ಟಾಗಿ 330 ಕಿ.ಮೀ ಕ್ರಮಿಸಬಹುದಾಗಿದ್ದು, ಇದರಲ್ಲಿ ಸಿಎನ್ ಜಿ ಸಹಾಯದೊಂದಿಗೆ 1 ಕಿಮೀ ದೂರವನ್ನು ರೂ. 1 ವೆಚ್ಚದಲ್ಲಿ ಮತ್ತು ಸಂಪೂರ್ಣವಾಗಿ ಪೆಟ್ರೋಲ್ ಮೂಲಕ ಚಾಲನೆ ಮಾಡುವುದಾದರೆ 1 ಕಿ.ಮೀ ದೂರವನ್ನು 2.25 ರೂ ವೆಚ್ಚ ತಗುಲುತ್ತದೆ. ಇದರಲ್ಲಿ ಒಟ್ಟು 2 ಕೆಜಿ ಸಾಮರ್ಥ್ಯದ ಸಿಎನ್​ಜಿ ಟ್ಯಾಂಕ್ ಜೋಡಣೆ ಮಾಡಲಾಗಿದ್ದು, ಆಸನದ ಕೆಳಭಾಗದಲ್ಲಿ ಸಿಎನ್ ಜಿ ಟ್ಯಾಂಕ್ ನೀಡಲಾಗಿದೆ.

ಚಾಸಿಸ್ ಫ್ರೆಮ್ ನಲ್ಲಿರುವ ಸಿಎನ್ ಜಿ ಟ್ಯಾಂಕರ್ ಸುರಕ್ಷಿತವಾಗಿರಲಿದ್ದು, ಸಿಎನ್ ಜಿ ಟ್ಯಾಂಕ್ ಆಸನ ಕೆಳಭಾಗದಲ್ಲಿರುವುದರಿಂದ ಬೈಕಿನ ಆಸನದ ಉದ್ದಳತೆಯು ಸಾಮಾನ್ಯ ಬೈಕ್ ಮಾದರಿಗಿಂತಲೂ ತುಸು ಹೆಚ್ಚಳವಾಗಿದೆ. ಇದು ದೂರದ ಪ್ರಯಾಣಕ್ಕೂ ಸಾಕಷ್ಟು ಅನುಕೂಲಕರವಾಗಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಸಹ ಹೊಂದಿರಲಿದೆ.

ಇದನ್ನೂ ಓದಿ: ಸಿಟ್ರನ್ ಬಸಾಲ್ಟ್ ಕಾರಿನ ಸಂಪೂರ್ಣ ಬೆಲೆ ಮಾಹಿತಿ ಬಹಿರಂಗ

ಹೊಸ ಬೈಕಿನಲ್ಲಿ ಪ್ರೀಮಿಯಂ ಫೀಚರ್ಸ್ ಗಳಾದ ಎಲ್ಇಡಿ ಲೈಟಿಂಗ್ಸ್, ಎಲ್ ಸಿಡಿ ಸ್ಕ್ರೀನ್ ನೊಂದಿಗೆ ಬ್ಲೂಟೂಥ್ ಕನೆಕ್ಟಿವಿಟಿ, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಸೌಲಭ್ಯ ನೀಡಲಾಗಿದ್ದು, ಒಟ್ಟು 7 ವಿವಿಧ ಬಣ್ಣಗಳ ಆಯ್ಕೆಯೊಂದಿಗೆ ಎಂಟ್ರಿ ಲೆವಲ್ ಬೈಕ್ ಮಾರಾಟದಲ್ಲಿ ಹೊಸ ಕ್ರಾಂತಿ ಆರಂಭಿಸಿದೆ.