Sunroof Cars: ಸನ್‌ರೂಫ್‌ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!

ಹೊಸ ತಲೆಮಾರಿನ ಕಾರುಗಳಲ್ಲಿ ಪ್ರೀಮಿಯಂ ಫೀಚರ್ಸ್ ಗಳ ಅಬ್ಬರ ಹೆಚ್ಚುತ್ತಿದ್ದು, ಇವುಗಳಲ್ಲಿ ಸನ್‌ರೂಫ್‌ ಸೌಲಭ್ಯ ಹೊಂದಿರುವ ಕಾರುಗಳಿಗೆ ಭಾರೀ ಬೇಡಿಕೆ ದಾಖಲಾಗುತ್ತಿದೆ. ಆದರೆ ಹೊಸ ಕಾರಿಗೆ ಐಷಾರಾಮಿ ಲುಕ್ ನೀಡುವ ಸನ್‌ರೂಫ್‌ ಗಳಿಂದ ಲಾಭಕ್ಕಿಂತ ಹೆಚ್ಚು ನ್ಯೂನತೆಗಳಿಂದ ಕೂಡಿವೆ ಎನ್ನಬಹುದು.

Sunroof Cars: ಸನ್‌ರೂಫ್‌ ಹೊಂದಿರುವ ಕಾರುಗಳಲ್ಲಿ ಎಷ್ಟೆಲ್ಲಾ ನ್ಯೂನತೆಗಳಿವೆ ನೋಡಿ!
ಸನ್‌ರೂಫ್‌ ಹೊಂದಿರುವ ಕಾರುಗಳ ನ್ಯೂನತೆಗಳು
Follow us
Praveen Sannamani
|

Updated on:Aug 20, 2024 | 5:48 PM

ದೇಶಿಯ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಕಾರುಗಳಲ್ಲಿ ಸನ್‌ರೂಫ್ (Sunroof) ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಗಳು ಸಾಮಾನ್ಯವಾಗುತ್ತಿದ್ದು, ಸನ್ ರೂಫ್ ಹೊಂದಿರುವ ಕಾರುಗಳನ್ನು ಖರೀದಿಸಲು ಹೊಸ ತಲೆಮಾರಿನ ಗ್ರಾಹಕರು ಹೆಚ್ಚು ಉತ್ಸುಕರಾಗಿದ್ದಾರೆ. ಆದರೆ ಐಷಾರಾಮಿ ಅನುಭವ ನೀಡುವ ಸನ್‌ರೂಫ್‌ ಕಾರುಗಳನ್ ಖರೀದಿ ಮಾಡುವ ಮೊದಲು ಅದರಲ್ಲಿ ಕೆಲವು ನ್ಯೂನತೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ನೀರು ಸೋರಿಕೆ

ಹೊಸ ಕಾರುಗಳಲ್ಲಿರುವ ಸನ್‌ರೂಫ್ ಸೌಲಭ್ಯವು ಕಾರಿಗೆ ಐಷಾರಾಮಿ ಲುಕ್ ನೀಡಿದರೂ ಕೆಲವು ಸಂದರ್ಭಗಳಲ್ಲಿ ನೀರು ಸೋರಿಕೆ ಸಮಸ್ಯೆ ಮಾಲೀಕರಿಗೆ ಅಸಮಾಧಾನ ಉಂಟುಮಾಡಬಹುದು. ಸನ್‌ರೂಫ್‌ ಅಳವಡಿಸಲು ಬಳಸಲಾಗುವ ರಬ್ಬರ್ ಸೀಲ್ ಹಾನಿಗೊಳಗಾದರೆ ಅದು ಮಳೆ ಬರುವ ಸಂದರ್ಭದಲ್ಲಿ ಸೋರಿಕೆಯಾಗಬಹುದಾಗಿದೆ. ಇದರಿಂದ ನಿಮ್ಮ ದುಬಾರಿ ಕಾರಿನ ಒಳಭಾಗವನ್ನು ಹಾನಿ ಉಂಟುಮಾಡಬಹುದಾದ ಸಾಧ್ಯತೆಗಳಿದ್ದು, ರಬ್ಬರ್ ಸೀಲ್ ಅನ್ನು ಆಗಾಗ ಪರಿಶೀಲನೆ ಮಾಡುವ ಅಗತ್ಯವಿರುತ್ತದೆ. ಹಾಗಾಂತ ಎಲ್ಲಾ ಸನ್‌ರೂಫ್‌ ಕಾರುಗಳಲ್ಲೂ ಈ ಸಮಸ್ಯೆಯಿರುತ್ತೆ ಎಂದರ್ಥವಲ್ಲ. ಆದರೆ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಕಾರಿನ ಇಂಟಿರಿಯರ್ ಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ.

ಎಲೆಕ್ಟ್ರಿಕ್ ಘಟಕಗಳಲ್ಲಿ ಸಮಸ್ಯೆ

ವಿದ್ಯುತ್ ಮೇಲೆ ಕಾರ್ಯನಿರ್ವಹಿಸುವ ಸನ್‌ರೂಫ್ ಕಾರುಗಳಲ್ಲಿ ಕೆಲವು ಬಾರಿ ಎಲೆಕ್ಟ್ರಿಕ್ ಘಟಕಗಳಲ್ಲಿ ಸಮಸ್ಯೆ ಎದುರಾಗಬಹುದು. ಒಂದು ವೇಳೆ ಸನ್ ರೂಫ್ ತೆರೆದ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತವಾದಲ್ಲಿ ಸನ್ ರೂಫ್ ಅನ್ನು ಮುಚ್ಚಲು ಸಾಧ್ಯವಾಗುವುದಿಲ್ಲ. ತೆರೆದ ನಂತರ ಮುಚ್ಚಲು ಅಸಾಧ್ಯವಾದರೆ ಇಂತಹ ಸಂದರ್ಭದಲ್ಲಿ ಮಳೆ ನೀರು ಅಥವಾ ಧೂಳು ತುಂಬಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸನ್ ರೂಫ್ ನಲ್ಲಿ ಎಲೆಕ್ಟ್ರಿಕ್ ಘಟಕಗಳು ವಿಫಲವಾದಲ್ಲಿ ತಕ್ಷಣವೇ ನುರಿತ ಮೆಕ್ಯಾನಿಕ್ ಮೂಲಕ ಸರಿಪಡಿಸಬೇಕಾಗುತ್ತದೆ. ಇದರಿಂದ ಸಂಭವನೀಯ ಹಾನಿಯನ್ನು ತಡೆಗಟ್ಟಬಹುದಾಗಿದ್ದು, ಸನ್ ರೂಫ್ ಸೌಲಭ್ಯವನ್ನು ಮಾಲೀಕರು ಆಗಾಗ ಪರೀಕ್ಷಿಸಬೇಕಾದ ಅಗತ್ಯವಿರುತ್ತದೆ ಎನ್ನಬಹುದು.

ಇದನ್ನೂ ಓದಿ: ADAS ಫೀಚರ್ಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಗ್ಲಾಸ್ ಒಡೆದು ಹೋಗುವ ಸಾಧ್ಯತೆ

ಸನ್ ರೂಫ್ ಹೊಂದಿರುವ ಕಾರುಗಳ ಮತ್ತೊಂದು ಬಹುದೊಡ್ಡ ನ್ಯೂನತೆಯೆಂದರೆ ಗ್ಲಾಸ್ ಒಡೆದು ಹೋಗುವ ಸಾಧ್ಯತೆಗಳಿರುತ್ತವೆ. ಸನ್ ರೂಫ್ ಗ್ಲಾಸ್‌ಗಳನ್ನು ಕಾರು ಉತ್ಪಾದನಾ ಕಂಪನಿಗಳು ಗುಣಮಟ್ಟದ ವಸ್ತುಗಳಿಂದ ನಿರ್ಮಾಣ ಮಾಡಿದ್ದರೂ ಕೆಲವು ಸಂದರ್ಭದಲ್ಲಿ ಒಡೆಯುವ ಸಾಧ್ಯತೆಗಳಿರುತ್ತವೆ. ಸುರಕ್ಷಿತ ಪಾರ್ಕಿಂಗ್ ಸ್ಥಳಗಳನ್ನು ಹೊರತುಪಡಿಸಿ ಮರಗಳ ನೆರಳಿನಲ್ಲಿ ಪಾರ್ಕ್ ಮಾಡುವ ಸಂದರ್ಭಗಳಲ್ಲಿ ಕೊಂಬೆಗಳು ಬಿದ್ದಲ್ಲಿ ಸನ್ ರೂಫ್ ಗೆ ಹಾನಿಉಂಟಾಗುತ್ತದೆ. ಪೂರ್ತಿಯಾಗಿ ಸನ್ ರೂಫ್ ಒಡೆಯದಿದ್ದರೂ ಕೂಡಾ ಗ್ಲಾಸ್ ಉಂಟಾಗುವ ಕಲೆಗಳು ಕಾರಿನ ಅಂದವನ್ನು ಹಾಳಮಾಡುತ್ತದೆ. ಈ ವೇಳೆ ಮಾಲೀಕರು ಸನ್ ರೂಫ್ ಸೌಲಭ್ಯವನ್ನು ಸಂಪೂರ್ಣವಾಗಿ ಬದಲಾಯಿಸಬೇಕಾದ ಸಂದರ್ಭ ಎದುರಾಗಬಹುದು. ಇದರಿಂದ ಮಾಲೀಕರಿಗೆ ತುಸು ಆರ್ಥಿಕ ಹೊರೆಯಾಗಬಹುದಾಗಿದ್ದು, ಅದರ ಹೊರತಾಗಿ ಸುರಕ್ಷಿತ ಸ್ಥಳಗಳಲ್ಲಿ ಪಾರ್ಕ್ ಮಾಡುವ ಮೂಲಕ ಇಂತಹ ಸಮಸ್ಯೆಯನ್ನು ತಡೆಯಬಹುದಾಗಿದೆ.

ದುಬಾರಿ ಬೆಲೆ

ಇತ್ತೀಚೆಗೆ ಬಹುತೇಕ ಕಾರು ಉತ್ಪಾದನಾ ಕಂಪನಿಗಳು ಸನ್ ರೂಫ್ ಹೊಂದಿರುವ ವಿವಿಧ ಕಾರುಗಳನ್ನು ಮಧ್ಯಮ ಕ್ರಮಾಂಕದ ಕಾರುಗಳಲ್ಲೂ ಪರಿಚಯಿಸುತ್ತಿವೆ. ಆದರೆ ಈ ಹೊಸ ಫೀಚರ್ಸ್ ಅಳವಡಿಸಲು ಗುಣಮಟ್ಟದ ಬಿಡಿಭಾಗಗಳ ಅವಶ್ಯಕತೆಯಿರುವುದರಿಂದ ಇದು ಸಾಮಾನ್ಯ ಕಾರುಗಳಿಂತಲೂ ತುಸು ದುಬಾರಿಯಾಗಿಸುತ್ತದೆ. ಹೀಗಾಗಿ ಸೀಮಿತ ಅವಧಿಯಲ್ಲಿ ಮಾತ್ರ ಬಳಕೆಯಾಗುವ ಸನ್ ರೂಫ್ ಸೌಲಭ್ಯವು ಭಾರತದಂತಹ ದೇಶಗಳಲ್ಲಿ ಅನಗತ್ಯ ವೈಶಿಷ್ಟ್ಯವಾಗಿದೆ ಎನ್ನಬಹುದು.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಖರೀದಿ ಮಾಡಬೇಕೇ? ಅಥವಾ ಬೇಡವೋ?

ಸನ್‌ರೂಫ್ ಹೊಂದಿರುವ ಕಾರುಗಳನ್ನು ಖರೀದಿಸುವ ಮೊದಲು ಸಾಕಷ್ಟು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ. ಐಷಾರಾಮಿ ಲುಕ್ ಜೊತೆಗೆ ಕಾರು ಚಾಲನೆ ಸಂದರ್ಭದಲ್ಲಿ ಅಹ್ಲಾದಕರ ಅನುಭವ ನೀಡುವ ಸನ್ ರೂಫ್ ಅನ್ನು ತೀರಾ ಅಗತ್ಯವಿದ್ದಲ್ಲಿ ಮಾತ್ರ ಖರೀದಿಗೆ ಉತ್ತಮ ಎನ್ನಬಹುದು. ಅದರ ಹೊರತಾಗಿ ಸನ್ ರೂಫ್ ಸೌಲಭ್ಯವು ಅನಗತ್ಯ ಎನ್ನಬಹುದಾಗಿದ್ದು, ಇದು ಕಾರಿನ ಒಟ್ಟಾರೆ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುತ್ತದೆ.

Published On - 5:45 pm, Tue, 20 August 24

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ