Best Mileage Hybrid Cars: 2023ರಲ್ಲಿ ಬಿಡುಗಡೆಯಾದ ಭರ್ಜರಿ ಮೈಲೇಜ್ ಪ್ರೇರಿತ ಹೈಬ್ರಿಡ್ ಕಾರುಗಳಿವು!

|

Updated on: Dec 25, 2023 | 8:40 PM

ಭಾರತದಲ್ಲಿ ಎಲೆಕ್ಟ್ರಿಕ್ ಕಾರಗಳ ಜೊತೆಗೆ ಹೈಬ್ರಿಡ್ ಕಾರುಗಳಿಗೂ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದ್ದು, ವಿವಿಧ ಕಾರು ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ 2023ರ ಅವಧಿಯಲ್ಲಿ ಭರ್ಜರಿ ಮೈಲೇಜ್ ಪ್ರೇರಿತ ಹಲವಾರು ಹೈಬ್ರಿಡ್ ಮಾದರಿಗಳನ್ನು ಬಿಡುಗಡೆ ಮಾಡಿವೆ.

Best Mileage Hybrid Cars: 2023ರಲ್ಲಿ ಬಿಡುಗಡೆಯಾದ ಭರ್ಜರಿ ಮೈಲೇಜ್ ಪ್ರೇರಿತ ಹೈಬ್ರಿಡ್ ಕಾರುಗಳಿವು!
ಭರ್ಜರಿ ಮೈಲೇಜ್ ಪ್ರೇರಿತ ಹೈಬ್ರಿಡ್ ಕಾರುಗಳು
Follow us on

ಸಾಂಪ್ರದಾಯಿಕ ಇಂಧನಗಳ ಬೆಲೆ ಹೆಚ್ಚಳ ಮತ್ತು ದುಬಾರಿ ನಿರ್ವಹಣೆ ಪರಿಣಾಮ ಪರಿಸರ ಸ್ನೇಹಿಯಾಗಿರುವ ಮತ್ತು ಹೆಚ್ಚು ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳ (Hybrid Cars) ಮಾರಾಟದಲ್ಲಿ ಭಾರೀ ಏರಿಕೆಯಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಇತರೆ ಕಾರುಗಳಿಂತಲೂ ದುಬಾರಿ ಎನ್ನುವ ಕಾರಣಕ್ಕೆ ಕೈಗೆಟುಕುವ ಮತ್ತು ಉತ್ತಮ ಫೀಚರ್ಸ್ ಹೊಂದಿರುವ ಹೈಬ್ರಿಡ್ ಕಾರುಗಳ ಆಯ್ಕೆಯತ್ತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಹೈಬ್ರಿಡ್ ಕಾರುಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಟೊಯೊಟಾ ಅರ್ಬನ್ ಕ್ರೂಸರ್

ಈ ವರ್ಷ ಬಿಡುಗಡೆಯಾದ ಬಜೆಟ್ ಬೆಲೆಯ ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮೊದಲ ಸ್ಥಾನದಲ್ಲಿದೆ. ಇದು ಎಕ್ಸ್ ಶೋರೂಂ ಪ್ರಕಾರ ರೂ. 16.46 ಲಕ್ಷದಿಂದ ರೂ. 19.99 ಲಕ್ಷ ಬೆಲೆ ಹೊಂದಿದ್ದು, ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಜತೆ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಈ ಮೂಲಕ ಇದು ಪೆಟ್ರೋಲ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್ ಗೆ 27.97 ಕಿ.ಮೀ ಮೈಲೇಜ್ ನೀಡಲಿದ್ದು, ಇದರಲ್ಲಿ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಸಹ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಬೆಸ್ಟ್ ಮೈಲೇಜ್ ಸಿಎನ್​ಜಿ ಕಾರುಗಳಿವು!

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

2023ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಮತ್ತೊಂದು ಬಜೆಟ್ ಆವೃತ್ತಿಯೆಂದರೆ ಅದು ಮಾರುತಿ ಸುಜುಕಿ ಹೊಸ ಗ್ರ್ಯಾಂಡ್ ವಿಟಾರಾ. ಇದು ಹೈರೈಡರ್ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣವಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 18.29 ಲಕ್ಷದಿಂದ ರೂ. 19.79 ಲಕ್ಷ ಬೆಲೆ ಹೊಂದಿದೆ. ಗ್ರ್ಯಾಂಡ್ ವಿಟಾರಾ ದಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿದೆ. ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ನೀಡಲಿದ್ದು, ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಸಹ ಲಭ್ಯವಿದೆ.

ಹೋಂಡಾ ಸಿಟಿ

ಉತ್ತಮ ಮೈಲೇಜ್ ಹೊಂದಿರುವ ಹೊಸ ಹೈಬ್ರಿಡ್ ಕಾರುಗಳ ಪಟ್ಟಿಯಲ್ಲಿ ಹೋಂಡಾ ಸಿಟಿ ಸೆಡಾನ್ ಕಾರು ಸಹ ಉತ್ತಮ ಆಯ್ಕೆಯಾಗಿದೆ. ಇದು ಎಕ್ಸ್ ಶೋರೂಂ ಪ್ರಕಾರ ರೂ. 18.89 ಲಕ್ಷದಿಂದ ರೂ. 20.39 ಲಕ್ಷ ಬೆಲೆ ಹೊಂದಿದೆ. ಸಿಟಿ ಹೈಬ್ರಿಡ್ ಆವೃತ್ತಿಯು 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಹೈಬ್ರಿಡ್ ತಂತ್ರಜ್ಞಾನದ ಸಂಯೋಜನೆ ಹೊಂದಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 27.13 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲಿ ಹೈಬ್ರಿಡ್ ಎಂಜಿನ್ ಹೊಂದಿರುವ ಏಕೈಕ ಕಾರು ಮಾದರಿಯಾಗಿದ್ದು, ಆಕರ್ಷಕ ಬೆಲೆಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅತ್ಯುತ್ತಮ ರೀಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಮಾರುತಿ ಸುಜುಕಿ ಇನ್ವಿಕ್ಟೊ ಮತ್ತು ಟೊಯೊಟಾ ಇನೋವಾ ಹೈಕ್ರಾಸ್

ಈ ವರ್ಷ ಬಿಡುಗಡೆಯಾದ ಅತ್ಯತ್ತಮ ಹೈಬ್ರಿಡ್ ಕಾರುಗಳಲ್ಲಿ ಮಾರುತಿ ಸುಜುಕಿ ಇನ್ವಿಕ್ಟೊ ಮತ್ತು ಟೊಯೊಟಾ ಇನೋವಾ ಹೈಕ್ರಾಸ್ ಪ್ರಮುಖವಾಗಿವೆ. ಈ ಎರಡೂ ಕಾರುಗಳು ಸಾಮಾನ್ಯ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ವಿಭಿನ್ನ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಇನ್ವಿಕ್ಟೊ ಹೈಬ್ರಿಡ್ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ರೂ. 24.80 ಲಕ್ಷದಿಂದ ರೂ. 28.42 ಲಕ್ಷ ಬೆಲೆ ಹೊಂದಿದ್ದರೆ ಇನೋವಾ ಹೈಕ್ರಾಸ್ ಹೈಬ್ರಿಡ್ ಆವೃತ್ತಿ ಎಕ್ಸ್ ಶೋರೂಂ ಪ್ರಕಾರ ರೂ. 25.30 ಲಕ್ಷದಿಂದ ರೂ. 30.26 ಲಕ್ಷ ಬೆಲೆ ಹೊಂದಿದೆ.

ಇನೋವಾ ಹೈಕ್ರಾಸ್ ಮತ್ತು ಇನ್ವಿಕ್ಟೊ ಎಂಪಿವಿ ಆವೃತ್ತಿಗಳಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದ್ದು, ಹೈಬ್ರಿಡ್ ಎಂಜಿನ್ ಮಾದರಿಯು ಎಲೆಕ್ಟ್ರಿಕ್ ಮೋಟಾರ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 23.24 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ. ಹಾಗೆಯೇ ಈ ಎರಡು ಹೊಸ ಕಾರುಗಳಲ್ಲಿ ಹಲವಾರು ಪ್ರೀಮಿಯಂ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್ ನೀಡಲಾಗಿದೆ. ಜೊತೆಗೆ ಇನೋವಾ ಹೈಕ್ರಾಸ್ ಕಾರಿನಲ್ಲಿ ಅಡ್ವಾನ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸಹ ನೀಡಲಾಗಿದ್ದು, ಬೆಲೆ ಇಳಿಕೆಗಾಗಿ ಇನ್ವಿಕ್ಟೊ ಕಾರಿನಲ್ಲಿ ಎಡಿಎಎಸ್ ಫೀಚರ್ಸ್ ಕೈಬಿಡಲಾಗಿದೆ.