BMW iX1: ಪ್ರತಿ ಚಾರ್ಜ್ ಗೆ 440 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್1 ಇವಿ ಕಾರು ಬಿಡುಗಡೆ

|

Updated on: Sep 28, 2023 | 6:56 PM

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಐಎಕ್ಸ್1 ಎಲೆಕ್ಟ್ರಿಕ್ ಎಸ್ ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಿದೆ.

BMW iX1: ಪ್ರತಿ ಚಾರ್ಜ್ ಗೆ 440 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್1 ಇವಿ ಕಾರು ಬಿಡುಗಡೆ
ಬಿಎಂಡಬ್ಲ್ಯು ಐಎಕ್ಸ್1 ಇವಿ ಕಾರು ಬಿಡುಗಡೆ
Follow us on

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಇಂಡಿಯಾ(BMW India) ಕಂಪನಿಯು ಹೊಚ್ಚ ಹೊಸ ಐಎಕ್ಸ್1 ಎಕ್ಸ್ ಡ್ರೈವ್30(iX1 xDrive30) ಎಲೆಕ್ಟ್ರಿಕ್ ಎಸ್ ಯುವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 66.90 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಬಿಎಂಡಬ್ಲ್ಯು ಕಂಪನಿ ಹೊಸ ಐಎಕ್ಸ್1 ಎಸ್ ಯುವಿ ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಬಿಡುಗಡೆಯಾದ ಕಂಪನಿಯ ನಾಲ್ಕನೇ ಇವಿ ಕಾರು ಮಾದರಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಐಎಕ್ಸ್, ಐ4 ಮತ್ತು ಐ7 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಬಿಎಂಡಬ್ಲ್ಯು ಕಂಪನಿ ಇದೀಗ ಎಕ್ಸ್1 ಆಧರಿಸಿ ನಿರ್ಮಾಣವಾಗಿರುವ ಐಎಕ್ಸ್1 ಇವಿ ಮಾದರಿಯನ್ನು ಪರಿಚಯಿಸಿದೆ.

ಐಎಕ್ಸ್1 ಇವಿ ಕಾರು ಈ ಹಿಂದಿನ ಮೂರು ಇವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದು ಮರ್ಸಿಡಿಸ್ ಬೆಂಝ್ ಇಕ್ಯೂಬಿ ಮತ್ತು ವೊಲ್ವೊ ಎಕ್ಸ್ ಸಿ40 ರೀಚಾರ್ಜ್ ಕಾರುಗಳ ನಡುವಿನ ಸ್ಥಾನದೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ಫೀಚರ್ಸ್ ಹೊಂದಿದ್ದು, ಗ್ರಾಹಕರಿಗೆ ಇಷ್ಟುವಾಗುವ ಹಲವಾರು ಅಂಶಗಳನ್ನು ಹೊಂದಿದೆ.

ಇದನ್ನೂ ಓದಿ: ರೂ. 4 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ಬಿಡುಗಡೆ

ಬ್ಯಾಟರಿ ಮತ್ತು ರೇಂಜ್

ಹೊಸ ಐಎಕ್ಸ್1 ಇವಿ ಕಾರಿನಲ್ಲಿ ಬಿಎಂಡಬ್ಲ್ಯು ಕಂಪನಿಯು 66.4kWh ಬ್ಯಾಟರಿ ಪ್ಯಾಕ್ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 440 ಕಿ.ಮೀ ಮೈಲೇಜ್ ನೀಡುತ್ತದೆ. ಇದರೊಂದಿಗೆ ಇದು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, 313 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಕೇವಲ 5.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುವ ಮೂಲಕ ಪ್ರತಿ ಗಂಟೆಗೆ ಗರಿಷ್ಠ 180 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಳ್ಳಬಹುದು.

ಇದರೊಂದಿಗೆ ಹೊಸ ಕಾರಿನಲ್ಲಿ ಚಾರ್ಜಿಂಗ್ ಸೌಲಭ್ಯಕ್ಕಾಗಿ 11kW ಸ್ಟ್ಯಾಂಡರ್ಡ್ ಎಸಿ ಚಾರ್ಜರ್ ನೀಡಲಾಗಿದ್ದು, 130kW ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ನೊಂದಿಗೆ ಕೇವಲ 29 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಪಡೆದುಕೊಳ್ಳುತ್ತದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಸ್ಟ್ಯಾಂಡರ್ಡ್ ಎಕ್ಸ್1 ವಿನ್ಯಾಸವನ್ನು ಆಧರಿಸಿರುವ ಹೊಸ ಐಎಕ್ಸ್1 ಇವಿ ಕಾರಿನ ಮುಂಭಾಗದ ಗ್ರಿಲ್ ನಲ್ಲಿ ಐ ಬ್ಯಾಡ್ಜ್ ಸೇರಿದಂತೆ 18 ಇಂಚಿನ ಅಲಾಯ್ ವ್ಹೀಲ್, ಅರಾಮದಾಯಕ ಚಾಲನೆಗಾಗಿ ಅಡಾಪ್ಟಿವ್ ಸಸ್ಷೆಂಷನ್, ಅಡಾಪ್ಟಿವ್ ಎಲ್ಇಡಿ ಹೆಡ್ ಲೈಟ್ ಗಳು, ಆಟೋಮ್ಯಾಟಿಕ್ ಟೈಲ್ ಗೇಟ್ ಆಪರೇಷನ್ ಸಿಸ್ಟಂ, ಪನೊರಮಿಕ್ ಸನ್ ರೂಫ್ ಸೇರಿದಂತೆ ಗ್ರೇ, ಸಿಲ್ವರ್, ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಫೀಚರ್ಸ್ ಹೊಂದಿದ್ದು, ಆಕರ್ಷಕವಾದ ಡ್ಯಾಶ್ ಬೋರ್ಡ್ ನೊಂದಿಗೆ 10.7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ಪಾರ್ಮೆಷನ್ ಡಿಸ್ ಪ್ಲೇ, ರೀಕ್ಲೈನ್ ಹೊಂದಿರುವ ಹಿಂಬದಿ ಆಸನಗಳು, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, 12 ಸ್ಪೀಕರ್ಸ್ ಹೊಂದಿರುವ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಸೌಲಭ್ಯ ಹೊಂದಿದೆ.

ಇದನ್ನೂ ಓದಿ: ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಎಸ್ ಯುವಿಗಳಲ್ಲಿ ಯಾವುದು ಖರೀದಿಗೆ ಬೆಸ್ಟ್?

 

ಸುರಕ್ಷಾ ಸೌಲಭ್ಯಗಳು

ಐಎಕ್ಸ್1 ಎಲೆಕ್ಟ್ರಿಕ್ ಎಸ್ ಯುವಿ ಕಾರಿನಲ್ಲಿ ಸುರಕ್ಷತೆಗಾಗಿ ಬಿಎಂಡಬ್ಲ್ಯು ಕಂಪನಿಯು ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ನೀಡಲಾಗಿದ್ದು, ಇದರ ಜೊತೆಗೆ ಎಬಿಎಸ್, ಇಎಸ್ ಪಿ, ಟ್ರಾಕ್ಷನ್ ಕಂಟ್ರೋಲ್, 6 ಏರ್ ಬ್ಯಾಗ್ ಗಳು ಸೇರಿದಂತೆ ಹಲವಾರು ಸೌಲಭ್ಯಗಳಿವೆ. ಈ ಮೂಲಕ ಹೊಸ ಕಾರು ಭರ್ಜರಿ ಮೈಲೇಜ್ ಜೊತೆಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಬೆಲೆ ವಿಚಾರವಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.