Honda Active: ಹೊಸ ಫೀಚರ್ಸ್ ಗಳೊಂದಿಗೆ ಹೋಂಡಾ ಆಕ್ವಿವಾ ಲಿಮಿಟೆಡ್ ಎಡಿಷನ್ ಬಿಡುಗಡೆ
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಆಕ್ವಿವಾ ಸ್ಕೂಟರ್ ನಲ್ಲಿ ವಿಶೇಷ ಫೀಚರ್ಸ್ ಹೊಂದಿರುವ ಲಿಮೆಟೆಡ್ ಎಡಿಷನ್ ಬಿಡುಗಡೆ ಮಾಡಿದೆ.
ದೇಶದ ಮುಂಚೂಣಿ ದ್ವಿಚಕ್ರ ವಾಹನ ವಾಹನ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ(Honda Motorcycle and Scooter India) ತನ್ನ ಹೊಸ ಆಕ್ವಿವಾ ಲಿಮಿಟೆಡ್ ಎಡಿಷನ್(Activa Limited Edition) ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 80,734 ಆರಂಭಿಕ ಬೆಲೆ ಹೊಂದಿದೆ.
ಹೊಸ ಆಕ್ವಿವಾ ಲಿಮಿಟೆಡ್ ಎಡಿಷನ್ ಸ್ಟ್ಯಾಂಡರ್ಡ್ ಮತ್ತು ಸ್ಮಾರ್ಟ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ವೆರಿಯೆಂಟ್ ರೂ. 80,734 ಬೆಲೆ ಹೊಂದಿದ್ದರೆ, ಸ್ಮಾರ್ಟ್ ವೆರಿಯೆಂಟ್ ರೂ. 82,734 ಬೆಲೆ ಹೊಂದಿದೆ. ಹೊಸ ಸ್ಕೂಟರ್ ಖರೀದಿಗಾಗಿ ಈಗಾಗಲೇ ಹೋಂಡಾ ರೆಡ್ ವಿಂಗ್ ಶೋರೂಂಗಳಲ್ಲಿ ಬುಕಿಂಗ್ ಆರಂಭಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ವಿತರಣೆಯ ಭರವಸೆ ನೀಡಲಾಗಿದೆ.
ಆಕ್ವಿವಾ ಲಿಮಿಟೆಡ್ ಎಡಿಷನ್ ನಲ್ಲಿ ಹೋಂಡಾ ಕಂಪನಿಯು ಪರ್ಲ್ ಸಿರೇನ್ ಬ್ಲ್ಯೂ ಮತ್ತು ಮ್ಯಾಟೆ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಬಣ್ಣದ ಆಯ್ಕೆ ನೀಡಿದ್ದು, ಬಾಡಿ ಪ್ಯಾನೆಲ್ ಗಳ ಮೇಲೆ ನೀಡಲಾಗಿರುವ ಕ್ರೋಮ್ ಮತ್ತು ಆಕ್ಸೆಂಟ್ ಹೊಸ ಸ್ಕೂಟರ್ ಗಳಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡುತ್ತದೆ. ಹಾಗೆಯೇ ಹೊಸ ಸ್ಕೂಟರ್ ನಲ್ಲಿ 3ಡಿ ವಿನ್ಯಾಸದ ಬ್ರಾಂಡ್ ಚಿಹ್ನೆ ಮತ್ತು ಬ್ಲ್ಯಾಕ್ ಕ್ರೋಮ್ ಹೊಂದಿರುವ ರಿಯರ್ ಗ್ರ್ಯಾಬ್ ಕೂಡಾ ಆಕರ್ಷಕವಾಗಿವೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!
ಇನ್ನುಳಿದಂತೆ ಹೊಸ ಸ್ಕೂಟರ್ ಮಾದರಿಯಲ್ಲಿ ಹೋಂಡಾ ಕಂಪನಿಯು ಸಾಮಾನ್ಯ ಆವೃತ್ತಿಯಲ್ಲಿರುವಂತೆ ವಿವಿಧ ತಾಂತ್ರಿಕ ಅಂಶಗಳು ಮತ್ತು ಎಂಜಿನ್ ಆಯ್ಕೆ ಮುಂದುವರೆಸಿದ್ದು, ಮುಂಬರುವ ಹಬ್ಬದ ದಿನಗಳಲ್ಲಿ ವಿಶೇಷ ವಾಹನ ಆವೃತ್ತಿಗಳನ್ನು ಬಯಸುವ ಗ್ರಾಹಕರ ಆಯ್ಕೆಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಎಂಜಿನ್ ಮತ್ತು ಮೈಲೇಜ್ ಹೊಸ ಆಕ್ವಿವಾ ಲಿಮಿಟೆಡ್ ಎಡಿಷನ್ ನಲ್ಲಿ ಬಿಎಸ್6 ಹಂತ 2ನೇ ಮಾನದಂಡಗಳನ್ನು ಒಳಗೊಂಡ 109.51 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಲ್ ಇಂಜೆಕ್ಷನ್ ಎಂಜಿನ್ ನೀಡಲಾಗಿದ್ದು, ಇದು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 7.37 ಹಾರ್ಸ್ ಪವರ್ ಮತ್ತು 8.90 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಗೆ ಬರೋಬ್ಬರಿ 55 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.
ಇದನ್ನೂ ಓದಿ: ಹೊಸ ಫೀಚರ್ಸ್ ಗಳೊಂದಿಗೆ 2023ರ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ
ಇನ್ನು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಹೊಸ ಸ್ಕೂಟರ್ ಖರೀದಿ ಮೇಲೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಮತ್ತು 7 ವರ್ಷಗಳ ವಿಸ್ತರಿತ ವಾರಂಟಿ ನೀಡುತ್ತಿದ್ದು, ಮುಂಬರುವ ಹಬ್ಬದ ದಿನಗಳಲ್ಲಿ ಹೊಸ ಬೈಕ್ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
Published On - 7:18 pm, Wed, 27 September 23