Mercedes-AMG G 63: ರೂ. 4 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ತನ್ನ ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ಬಿಡುಗಡೆ ಮಾಡಿದೆ.

Mercedes-AMG G 63: ರೂ. 4 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ಬಿಡುಗಡೆ
ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ಬಿಡುಗಡೆ
Follow us
|

Updated on: Sep 27, 2023 | 9:19 PM

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್(Mercedes Benz) ತನ್ನ ಬಹುನೀರಿಕ್ಷಿತ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್(Mercedes-AMG G 63 Grand Edition) ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 4 ಕೋಟಿ ಬೆಲೆ ಹೊಂದಿದೆ.

ಹೊಸ ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ ವಿಶ್ವಾದ್ಯಂತ ಕೇವಲ 1 ಸಾವಿರ ಯುನಿಟ್ ಗಳು ಖರೀದಿಗೆ ಲಭ್ಯವಿದ್ದು, ಭಾರತದಲ್ಲಿ ಇವು ಕೇವಲ 25 ಯುನಿಟ್ ಗಳು ಮಾತ್ರ ಖರೀದಿಗೆ ಲಭ್ಯವಿರಲಿವೆ. ಮರ್ಸಿಡಿಸ್ ಕಂಪನಿಯ ಹೊಸ ಕಾರು ಖರೀದಿಗಾಗಿ ಮೇಬ್ಯಾಚ್, ಎಸ್-ಕ್ಲಾಸ್ ಮತ್ತು ಎಎಂಜಿ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಿದ್ದು, ಹೊಸ ಕಾರು ಐಷಾರಾಮಿ ಆಫ್ ರೋಡ್ ವೈಶಿಷ್ಯತೆಗಳೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

Mercedes-AMG G 63 Grand Edition

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ಸೂಪರ್ ಸೇಫ್ ಗಾರ್ಡ್ ಐಷಾರಾಮಿ ಕಾರಿನ ವಿಶೇಷತೆಗಳೇನು ಗೊತ್ತಾ?

2024ಕ್ಕೆ ಮರ್ಸಿಡಿಸ್-ಎಎಂಜಿ ಜಿ 63 ಕಾರಿನ ಹೊಸ ಆವೃತ್ತಿಯು ಬಿಡುಗಡೆ ಸಿದ್ದವಾಗುತ್ತಿದ್ದು, ಹೊಸ ಆವೃತ್ತಿ ಬಿಡುಗಡೆಗೂ ಮುನ್ನ ಗ್ರ್ಯಾಂಡ್ ಎಡಿಷನ್ ಅನ್ನು ಪರಿಚಯಿಸಲಾಗಿದೆ. ಹೊಸ ಗ್ರ್ಯಾಂಡ್ ಎಡಿಷನ್ ಹಲವಾರು ಐಷಾರಾಮಿ ಫೀಚರ್ಸ್ ಗಳೊಂದಿಗೆ ಹೊಸ ಡ್ರೈವಿಂಗ್ ಅನುಭವ ನೀಡಲಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಮರ್ಸಿಡಿಸ್-ಎಎಂಜಿ ಜಿ 63 ಗ್ರ್ಯಾಂಡ್ ಎಡಿಷನ್ 4.0 ಲೀಟರ್ ಟ್ವಿನ್ ಸಿಲಿಂಡರ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 578 ಹಾರ್ಸ್ ಪವರ್ ಮತ್ತು 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 4 ಮ್ಯಾಟಿಕ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯ ಹೊಂದಿದ್ದು, ಕೇವಲ 4.5 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳುತ್ತದೆ. ಹಾಗೆಯೇ ಹೊಸ ಕಾರು ಪ್ರತಿ ಗಂಟೆಗೆ 220 ಕಿ.ಮೀ ಟಾಪ್ ಸ್ಪೀಡ್ ಸಾಧಿಸುವ ಶಕ್ತಿ ಹೊಂದಿದ್ದು, ಆಫ್ ರೋಡ್ ನಲ್ಲೂ ಬಲಿಷ್ಠ ಕೌಶಲ್ಯ ಪ್ರದರ್ಶನ ಮಾಡಬಲ್ಲದು.

ಇದನ್ನೂ ಓದಿ: ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಸಂಚಾರಕ್ಕೆ ಚಾಲನೆ 

Mercedes-AMG G 63 Grand Edition (1)

ಇನ್ನು ಹೊಸ ಕಾರಿನಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ಹೊಸ ಕಾರಿನಲ್ಲಿ ವಿಶೇಷವಾಗಿರುವ ಮ್ಯಾನುಫ್ಯಾಕ್ಟ್ರ್ ನೈಟ್ ಬ್ಲಾಕ್ ಮ್ಯಾಗ್ನೊ ಬಣ್ಣದ ಆಯ್ಕೆ ನೀಡಲಾಗಿದೆ. ಜೊತೆಗೆ ಹೊಸ ಬಣ್ಣದ ಆಯ್ಕೆಯೊಂದಿಗೆ ಗೋಲ್ಡ್ ಗ್ರಾಫಿಕ್ಸ್ ಹೊಂದಿದ್ದು, 22 ಇಂಚಿನ ಸೆಂಟರ್ ಲಾಕ್ ಫಾರ್ಗೆಡ್ ಎಎಂಜಿ ವ್ಹೀಲ್ ಪಡೆದುಕೊಂಡಿದೆ. ಎಎಂಜಿ ವ್ಹೀಲ್ ನಲ್ಲೂ ಕೂಡಾ ಗೋಲ್ಡ್ ಗ್ರಾಫಿಕ್ಸ್ ನೀಡಲಾಗಿದ್ದು, ಫ್ರಂಟ್ ಬಂಪರ್, ಫ್ರಂಟ್ ಸ್ಕೀಡ್ ಪ್ಲೇಟ್ ಮತ್ತು ಸ್ಪೆರ್ ವ್ಹೀಲ್ ರಿಂಗ್ ನಲ್ಲೂ ಗ್ರಾಫಿಕ್ಸ್ ನೀಡಲಾಗಿದ್ದು, ಕಾರಿನ ಒಳಭಾಗದಲ್ಲೂ ಕೂಡಾ ಹಲವಾರು ಐಷಾರಾಮಿ ಫೀಚರ್ಸ್ ಪಡೆದುಕೊಂಡಿದೆ. ಹೊಸ ಕಾರಿನ ಒಳಭಾಗದಲ್ಲಿ ನಪ್ಪಾ ಲೆದರ್ ಆಸನಗಳೊಂದಿಗೆ ಗೋಲ್ಡ್ ಆಕ್ಸೆಂಟ್ ಹೊಂದಿದ್ದು, ಆರಾಮದಾಯಕ ಚಾಲನಾ ಅನುಭವ ನೀಡುತ್ತದೆ.