Car Loans: ಕಾರ್ ಲೋನ್ ಸರಳವಾಗಿ ಮರುಪಾವತಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ..

|

Updated on: Dec 13, 2022 | 7:42 PM

ಪ್ರತಿಯೊಬ್ಬರಿಗೂ ತಮ್ಮ ಕನಸಿನ ಕಾರು ಖರೀದಿಯ ಯೋಜನೆ ಇದ್ದೆ ಇರುತ್ತದೆ. ಆದರೆ ಕಾರು ಖರೀದಿಗೆ ಬೇಕಾದಷ್ಟು ಹಣ ಒಂದೇ ಬಾರಿಗೆ ಕೂಡಿಟ್ಟು ಖರೀದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಈ ವೇಳೆ ವಾಹನ ಸಾಲಗಳಿಗೆ ಮೊರೆಹೋಗುವುದು ಸಾಮಾನ್ಯ. ಆದರೆ ಕಾರು ಖರೀದಿಯ ನಂತರ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಯ ಕೂಡಾ ಮುಖ್ಯ ವಿಚಾರ.

Car Loans: ಕಾರ್ ಲೋನ್ ಸರಳವಾಗಿ ಮರುಪಾವತಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ..
ಕಾರ್ ಲೋನ್ ಸರಳವಾಗಿ ಮರುಪಾವತಿಸಲು ಈ ಸಿಂಪಲ್ ಟಿಪ್ಸ್ ಅನುಸರಿಸಿ
Follow us on

ಹೊಸ ಕಾರುಗಳ(New Cars) ಖರೀದಿಗಾಗಿ ಇತ್ತೀಚೆಗೆ ಪ್ರಮುಖ ಬ್ಯಾಂಕ್ ಗಳು, ವಿವಿಧ ಖಾಸಗಿ ಹಣಕಾಸು ಸಂಸ್ಥೆಗಳು ಆಕರ್ಷಕ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿವೆ. ಹೊಸ ವಾಹನಗಳ ಖರೀದಿಗಾಗಿ ಅತಿ ಕಡಿಮೆ ಪತ್ರ ವ್ಯವಹಾರಗಳೊಂದಿಗೆ ಗರಿಷ್ಠ ಮಟ್ಟದ ಸಾಲ ಸೌಲಭ್ಯಗಳನ್ನು(Car Loan) ಆಫರ್ ಮಾಡುತ್ತಿದ್ದು, ಕನಸಿನ ಕಾರು ಖರೀದಿಯನ್ನು ಸುಲಭವಾಗಿಸುತ್ತಿವೆ. ಆದರೆ ಕನಸಿನ ಕಾರು ಖರೀದಿ ನಂತರ ಅದಕ್ಕಾಗಿ ಮಾಡಲಾದ ಸಾಲದ ಮರುಪಾವತಿ ಕೂಡಾ ಅತಿ ಮುಖ್ಯವಾದ ವಿಚಾರವಾಗಿದೆ.

ಒಂದು ವೇಳೆ ಸರಿಯಾದ ಸಮಯಕ್ಕೆ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದಿದ್ದರೆ ಅದರಿಂದ ಹಲವಾರು ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ವಾಹನ ಖರೀದಿಸುವಾಗ ಆಯ್ಕೆ ಮಾಡಲಾಗುವ ಸಾಲ ಸೌಲಭ್ಯಗಳು ಹೇಗಿರಬೇಕು? ಮತ್ತೆ ಸಾಲ ಮರುಪಾವತಿಯ ಹೇಗೆ ನಿಭಾಯಿಸಬೇಕು ಎಂಬುವುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಸಾಲ ಮರುಪಾವತಿಗೆ ಸಾಧ್ಯವಿರುವ ಕಾರಿನ ಆಯ್ಕೆ

ಹೊಸ ಕಾರು ಖರೀದಿಯ ಸಂದರ್ಭದಲ್ಲಿ ನಿಮಗೆ ವಿವಿಧ ಬ್ಯಾಂಕ್ ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಸಾಕಷ್ಟು ಪ್ರಮಾಣದ ಸಾಲ ಸೌಲಭ್ಯವನ್ನು ಒದಗಿಸುತ್ತವೆ. ಹಾಗೆಂದು ನೀವು ನಿಮ್ಮ ಆದಾಯಕ್ಕಿಂತ ಹೆಚ್ಚಿನ ಮಟ್ಟದ ಕಾರು ಖರೀದಿಯನ್ನು ಮಾಡಲೇಬೇಡಿ. ಅವಶ್ಯಕತೆಗೆ ಅನುಗುಣವಾಗಿ ವಿವಿಧ ಸೆಗ್ಮೆಂಟ್ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೊಸ ಕಾರು ನಿಮ್ಮ ಆದಾಯಕ್ಕೆ ಮತ್ತು ನಿಮ್ಮ ವೃತ್ತಿಗೆ ಪೂರಕವಾಗಿದ್ದರೆ ನಿಮ್ಮ ವ್ಯಯಕ್ತಿಕ ಹಣಕಾಸು ನಿರ್ವಹಣೆ ಸುಲಭವಾಗಿರುತ್ತದೆ.

ಒಂದೇ ವೇಳೆ ನೀವು ಯಾರನ್ನೋ ಮೆಚ್ಚಿಸಲೋ ಅಥವಾ ಆಡಂಬರ ಜೀವನಕ್ಕಾಗಿ ಮುಗಿಬಿದ್ದು ಆದಾಯಕ್ಕಿಂತ ಹೆಚ್ಚು ಖರ್ಚು ಹೊಂದಿರುವ ಕಾರು ಖರೀದಿಯು ಆರ್ಥಿಕ ಸಂಕಷ್ಟ ತಳ್ಳುತ್ತದೆ. ಇದೇ ಕಾರಣಕ್ಕೆ ಅದೆಷ್ಟೊ ಕಾರು ಮಾಲೀಕರು ಹೊಸ ವಾಹನ ಖರೀದಿ ಮಾಡಿದ ಎರಡುರಿಂದ ಮೂರು ವರ್ಷದೊಳಗಾಗಿ ಇಎಂಐ ಕಟ್ಟಲು ಸಾಧ್ಯವಾಗದೆ ಮರುಮಾಡುವುದನ್ನು ನಾವು ಕಾರಣಬಹುದು.

ಇಎಂಐ ಮರುಪಾವತಿಯಲ್ಲಿ ಜಾಣತನ ವಹಿಸಿ

ಹೊಸ ಕಾರು ಖರೀದಿಯ ನಂತರ ಮೊದಲ ತಿಂಗಳಿನಿಂದಲೇ ಬ್ಯಾಂಕ್ ಇಎಂಐ ಮರುಪಾವತಿ ಆರಂಭವಾಗುತ್ತದೆ. ಈ ವೇಳೆ ನೀವು ಆಯ್ಕೆ ಮಾಡಿಕೊಂಡ ಇಎಂಐ ಮೊತ್ತ ಹೊರತುಪಡಿಸಿ ನಿಮ್ಮ ಖಾತೆಯಲ್ಲಿ ಹೆಚ್ಚಿನ ಉಳಿತಾಯವಿದ್ದಲ್ಲಿ ಸಾಧ್ಯವಾದಷ್ಟು ಇಎಂಐ ಮೊತ್ತವನ್ನು ಹೆಚ್ಚು ಪಾವತಿಸಲು ಪ್ರಯತ್ನಿಸಿ. ನೀವು ಹೆಚ್ಚುವರಿ ಆದಾಯವನ್ನು ಇಎಂಐ ನಲ್ಲಿ ಸೇರಿಸಿ ಪಾವತಿಸಿದಾಗ ಲೋನ್ ಮೀತಿ ತಗ್ಗುವುದರ ಜೊತೆ ನಿಗದಿತ ಅವಧಿಗಿಂತಲೂ ಮುಂಚಿತವಾಗಿಯೇ ನೀವು ಸಾಲದಿಂದ ಮಕ್ತಿಹೊಂದಬಹುದಾಗಿದೆ.

ಇಎಂಐ ಮರುಪಾವತಿ ಅವಧಿ ಆಯ್ಕೆ

ಕಾರು ಖರೀದಿಸಿದ ನಂತರ ಸಾಲ ಮರುಪಾವತಿಗಾಗಿ ವಿವಿಧ ಬ್ಯಾಂಕ್ ವಿವಿಧ ಮಾದರಿಯ ಇಎಂಐ ಆಯ್ಕೆಗಳನ್ನು ಆಫರ್ ಮಾಡುವುದು ಸಹಜ. ಈ ವೇಳೆ ನೀವು ರೂ. 10 ಲಕ್ಷ ಮೌಲ್ಯದ ಕಾರು ಖರೀದಿ ಮಾಡಿದರೆ ಸಾಲ ಮರುಪಾವತಿಯ ಅವಧಿಯನ್ನು ಆಧರಿಸಿ ಇಎಂಐ ದರಗಳು ನಿರ್ಧಾರಗೊಳ್ಳುತ್ತವೆ. ಈ ವೇಳೆ ನೀವು ನಿಮ್ಮ ಆದಾಯ ಮೀತಿ ಆಧಾರಿಸಿ 3 ವರ್ಷದಿಂದ 7 ವರ್ಷಗಳ ಕಾಲ ಇಎಂಐ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ಆದರೆ ಸಾಲ ಮರುಪಾವತಿಯನ್ನು ಬೇಗನೆ ಮುಗಿಸುವ ದಾವಂತದಲ್ಲಿ ಕಡಿಮೆ ಅವಧಿಯ ಇಎಂಐ ಆಯ್ಕೆ ಮಾಡಲೇಬೇಡಿ. ಈ ವೇಳೆ ನೀವು ಅಂದುಕೊಂಡಷ್ಟು ಆದಾಯ ಬರದಿದ್ದಾಗ ಇಎಂಐ ದರ ಪಾವತಿಸಲು ಸಾಧ್ಯವಾಗದೆ ಅದಕ್ಕಾಗಿ ಹೆಚ್ಚುವರಿ ದಂಡಪಾವತಿ ಮಾಡಬೇಕಾಗುತ್ತದೆ. ಇದರಿಂದ ಒಂದು ನಿಯಮಿತ ಮೊತ್ತ ಆಯ್ದುಕೊಳ್ಳುವುದು ಉತ್ತಮ.

ನಿಗಿದಿತ ಅವಧಿಗಿಂತಲೂ ಮುನ್ನವೇ ಮರುಪಾವತಿಗೆ ಪ್ರಯತ್ನಿಸಿ

ನೀವು ಹೊಸ ಕಾರು ಖರೀದಿಸಿದ ಮೂರು ಅಥವಾ ನಾಲ್ಕು ವರ್ಷಗಳ ನಂತರ ಸಾಧ್ಯವಾದಷ್ಟು ಹೆಚ್ಚಿನ ಮಟ್ಟದ ಇಐಎಂ ಪಾವತಿಸಲು ಪ್ರಯತ್ನಿಸಿ. ಇದರಿಂದ ನೀವು ಅಂದುಕೊಂಡಿದ್ದಕ್ಕಿಂತಲೂ ಮುಂಚಿತವಾಗಿಯೇ ನಿಮ್ಮ ಸಾಲ ಪೂರ್ಣಗೊಳ್ಳುವುದಲ್ಲದೇ ಬಡ್ಡಿ ದರ ಪಾವತಿಯನ್ನು ಉಳಿತಾಯ ಮಾಡಬಹುದಾಗಿದೆ. ಅವಧಿಗೂ ಮುನ್ನವೇ ಇಎಂಐ ಮರುಪಾವತಿಗೆ ಶುಲ್ಕ ವಿಧಿಸಿದರೂ ಬಡ್ಡಿದರದಿಂದ ನೀವು ತಪ್ಪಿಸಿಕೊಳ್ಳಬಹುದಾಗಿದೆ.

ಅನಗತ್ಯ ಖರ್ಚು ಕಡಿಮೆ ಮಾಡಿ

ಹೊಸ ವಾಹನ ಖರೀದಿಯ ನಂತರ ಕೇವಲ ಅದರ ಇಎಂಐ ಮಾತ್ರ ಮರುಪಾವತಿ ಇರುವುದಿಲ್ಲ.ಜೊತೆಗೆ ಅದರ ಮಾಸಿಕ ನಿರ್ವಹಣೆ, ಕೌಟುಂಬಿಕ ನಿರ್ವಹಣಾ ವೆಚ್ಚಗಳು ಕೂಡಾ ನಿಮ್ಮ ಆದಾಯವನ್ನು ನೆಚ್ಚಿಕೊಂಡಿರುತ್ತವೆ. ಹೀಗಾಗಿ ಹೊಸ ವಾಹನ ಖರೀದಿ ನಂತರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಇಎಂಐಗಳನ್ನು ಯಾವುದೇ ತೊಂದರೆಯಿಲ್ಲದೆ ಪ್ರತಿ ತಿಂಗಳು ಮರುಪಾವತಿ ಮಾಡಲು ಸಹಕಾರಿಯಾಗುತ್ತದೆ ಎನ್ನಬಹುದು.

Published On - 7:42 pm, Tue, 13 December 22